Select Your Language

Notifications

webdunia
webdunia
webdunia
webdunia

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ
ಕೋಲಕಾತಾ , ಬುಧವಾರ, 9 ಏಪ್ರಿಲ್ 2014 (16:44 IST)
ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
PTI

ಎಂಟು ಅಧಿಕಾರಿಗಳನ್ನು ಮತದಾನದ ಕರ್ತವ್ಯದಿಂದ ತೆಗೆದಿರುವುದನ್ನು ಮರುಪರಿಶೀಲಿಸುವಂತೆ ಸೋಮವಾರ ಪಶ್ಚಿಮ ಬಂಗಾಳ ಸರಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿದ ಗಂಟೆಗಳೊಳಗೆ ಸರಕಾರ ಈ ನಡೆಯನ್ನು ಕೈಗೊಂಡಿದೆ.

ಬುಧವಾರದ ಒಳಗೆ ರಾಜ್ಯದ ಎಂಟು ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಮತ್ತು
ಅವರ ಬದಲಿಗೆ ಚುನಾವಣೆ ಆಯೋಗ ನಿರ್ದೇಶಿಸಿದ ಅಧಿಕಾರಿಗಳನ್ನು ಮರುಭರ್ತಿ ಮಾಡಬೇಕು ಎಂದು ಆಯೋಗ ಸ್ಪಷ್ಟ ಪಡಿಸಿತ್ತು.

ಐವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಒಬ್ಬರು ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಎರಡು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ರವರನ್ನು ಅವರ ವಿರುದ್ಧ ಬಂದಿರುವ ದೂರಿನನ್ವಯ ವರ್ಗಾವಣೆ ಮಾಡಬೇಕು ಎಂದು ಆಯೋಗ ಸೋಮವಾರ ಸರಕಾರಕ್ಕೆ ಆದೇಶ ನೀಡಿತ್ತು,ಮತ್ತು ಮರುಭರ್ತಿಗೆ ಅಧಿಕಾರಿಗಳನ್ನು ಹೆಸರಿಸಿತ್ತು.

ಸೋಮವಾರ ಚುನಾವಣೆಯಲ್ಲಿ ಸಭೆಯೊಂದರಲ್ಲಿ ಮಾತನಾಡುತ್ತ ಮುಖ್ಯಮಂತ್ರಿ ಮಮತಾ "ಅಧಿಕಾರಿಗಳ ವರ್ಗಾವಣೆಯ ಆದೇಶವನ್ನು ಸ್ವೀಕರಿಸುವುದಿಲ್ಲ" ಎಂದು ಗುಡುಗಿದ್ದರು.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada