Webdunia - Bharat's app for daily news and videos

Install App

ಗುಜರಾತ್ ನಂಬರ್ ಒನ್ ರಾಜ್ಯ ಎಂದು ಘೋಷಿಸಿದ್ದು ಸೋನಿಯಾ: ರಾಹುಲ್‌ಗೆ ಮೋದಿ ತಿರುಗೇಟು

Webdunia
ಸೋಮವಾರ, 31 ಮಾರ್ಚ್ 2014 (15:45 IST)
PTI
ಗುಜರಾತ್ ರಾಜ್ಯದ ಅಭಿವೃದ್ಧಿ ಬಲೂನಿನಂತೆ ಎನ್ನುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಟೀಕೆಗಳನ್ನು ಮಾಡುವುದನ್ನು ಬಿಟ್ಟು ದೇಶದ ಅಭಿವೃದ್ಧಿಯತ್ತ ಗಮನಹರಿಸಿ. ನಿಮ್ಮ ತಾಯಿ ಸೋನಿಯಾ ಗಾಂಧಿಯೇ ಗುಜರಾತ್ ರಾಜ್ಯ ನಂಬರ್ ಒನ್ ರಾಜ್ಯ ಎಂದು ಘೋಷಿಸಿದ್ದಾರೆ. ನಿಮ್ಮ ತಾಯಿಯನ್ನೇ ನೀವು ನಂಬುವುದಿಲ್ಲವಾ ಎಂದು ಪ್ರಶ್ನಿಸಿದ್ದಾರೆ.

ರಾಜೀವ್ ಗಾಂಧಿ ಫೌಂಡೇಶನ್‌ನ ಮುಖ್ಯಸ್ಥೆಯಾದ ಸೋನಿಯಾ ಗಾಂಧಿ, ಗುಜರಾತ್ ರಾಜ್ಯ ಅಭಿವೃದ್ಧಿಯಲ್ಲಿ ನಂಬರ್ ಒನ್ ರಾಜ್ಯ ಎಂದು ಘೋಷಿಸಿದ್ದಾರೆ. ನಿಮ್ಮ ತಾಯಿಯ ಘೋಷಣೆಯಲ್ಲಿ ಅಸತ್ಯವಿದೆಯೇ? ಅಥವಾ ಅವರು ನಿಮ್ಮ ಹಾಗೆ ಬಲೂನ್‌ಗಳನ್ನು ಬಿಡುತ್ತಾರೆಯೇ ಎಂದು ತಿರುಗೇಟು ನೀಡಿದ್ದಾರೆ.

ಗುಜರಾತ್ ರಾಜ್ಯದ ಜನತೆ ಕಳೆದ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಜನತೆ ತಿರಸ್ಕರಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಬಲೂನ್‌ ಆಗಿದ್ರೆ ಜನ ಯಾಕೆ ಗೆಲ್ಲಿಸುತ್ತಿದ್ದಾರೆ ಎನ್ನುವುದಕ್ಕೆ ಕಾಂಗ್ರೆಸ್ ಮುಖಂಡರು ಉತ್ತರ ಹೇಳಬೇಕಾಗಿದೆ ಎಂದರು.

ಗುಜರಾತ್ ರಾಜ್ಯದ ಅಭಿವೃದ್ಧಿ ಎನ್ನುವ ಭಾರಿ ಬಲೂನ್‌ನಲ್ಲಿ ಗ್ಯಾಸ್ ತುಂಬಲಾಗಿದೆ. ಕಳೆದ 2004 ಮತ್ತು 2009ರಲ್ಲಿ ಭಾರತ ಶೈನಿಂಗ್ ಎನ್ನುವ ಬಲೂನ್ ಒಡೆದಂತೆ ಈ ಬಾರಿಯೂ ಬಿಜೆಪಿ ಬಲೂನ್ ಒಡೆಯಲಿದೆ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments