Select Your Language

Notifications

webdunia
webdunia
webdunia
webdunia

ರಾಜಕೀಯ ಪಕ್ಷಗಳ ಅತೃಪ್ತ ಮುಖಂಡರಿಗೆ ಗಾಳಹಾಕುತ್ತಿರುವ ಜೆಡಿಎಸ್

ರಾಜಕೀಯ ಪಕ್ಷಗಳ ಅತೃಪ್ತ ಮುಖಂಡರಿಗೆ ಗಾಳಹಾಕುತ್ತಿರುವ ಜೆಡಿಎಸ್
, ಶುಕ್ರವಾರ, 21 ಮಾರ್ಚ್ 2014 (19:43 IST)
PR
PR
16 ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಬೇಕಿರುವ ಜೆಡಿಎಸ್‌ನಲ್ಲಿ ಚುನಾವಣೆಯನ್ನು ಗೆಲ್ಲುವಂತ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದೆ. ಹೀಗಾಗಿ ಮುಖ್ಯವಾಹಿನಿ ರಾಜಕೀಯ ಪಕ್ಷಗಳ ಅತೃಪ್ತ ಮುಖಂಡರಿಗೆ ಗಾಳ ಹಾಕುವುದಕ್ಕೆ ಜೆಡಿಎಸ್ ಯತ್ನಿಸುತ್ತಿದೆ. ಬಿಜೆಪಿಯಲ್ಲಿ ಮತ್ತೆ ನೆಲೆ ಸಿಗದೇ ಕಂಗಾಲಾಗಿದ್ದ ಕೆಜೆಪಿ ವಿ.ಧನಂಜಯ್ ಕುಮಾರ್ ಅವರಿಗೆ ಬಲೆ ಬೀಸಿ ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಜೆಡಿಎಸ್ ಕಣಕ್ಕಿಳಿಸಿದೆ. ಈಗ ನಿವೃತ್ತ ಡಿಜಿಪಿ ಮತ್ತು ಮಾಜಿ ಲೋಕಸಭೆ ಸದಸ್ಯ ಎಚ್.ಟಿ.ಸಾಂಗ್ಲಿಯಾನರಿಗೆ ಗಾಳ ಹಾಕುವುದಕ್ಕೆ ಸಜ್ಜಾಗಿದೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ಕೊಡ್ತೀವಿ, ಬನ್ನಿ ಎಂದು ಅವರಿಗೆ ಆಹ್ವಾನವಿತ್ತಿದೆ.

ಸಾಂಗ್ಲಿಯಾನ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗದಿರುವುದಿದರಿಂದ ಅಸಮಾಧಾನಗೊಂಡಿದ್ದರು. ಗುರುವಾರ ಬೆಳಿಗ್ಗೆ ಸಾಂಗ್ಲಿಯಾನ ದೇವೇಗೌಡರಿಗೆ ಕರೆ ಮಾಡಿ ಪಕ್ಷಕ್ಕೆ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಸಾಂಗ್ಲಿಯಾನ ಅವರನ್ನು ವೈಯಕ್ತಿಕವಾಗಿ ಬುಧವಾರ ಭೇಟಿಯಾಗಿದ್ದರು.ಇದೇ ಸಂದರ್ಭದಲ್ಲಿ, ಜೆಡಿಎಸ್ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಸಿ.ರಾಮಮೂರ್ತಿ ಅವರಿಗೆ ಗಾಳ ಹಾಕುವುದಕ್ಕೆ ಯತ್ನಿಸುತ್ತಿದೆ. ಬೆಂಗಳೂರು ಉತ್ತರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರ ನಾಮಕರಣವನ್ನು ಕಾಂಗ್ರೆಸ್ ಪ್ರೈಮರಿಗೆ ತಾಂತ್ರಿಕ ಕಾರಣದ ಮೇಲೆ ನಿರಾಕರಿಸಲಾಗಿತ್ತು. ನಂತರ ಬೆಂಗಳೂರು ಸೆಂಟ್ರಲ್ ಟಿಕೆಟ್ ವಂಚಿತರಾದ ಜಾಫರ್ ಷರೀಫ್ ಅವರಿಗೆ ಜೆಡಿಎಸ್ ಮೈಸೂರಿನ ಟಿಕೆಟ್ ಖಚಿತ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Share this Story:

Follow Webdunia kannada