Select Your Language

Notifications

webdunia
webdunia
webdunia
webdunia

ಮೋದಿ, ಕ್ರೇಜಿವಾಲ್ ವಿರುದ್ಧ ಕಣಕ್ಕಿಳಿಯುತ್ತಿರುವ ಲೈಂಗಿಕ ಅಲ್ಪಸಂಖ್ಯಾತೆ

ಮೋದಿ, ಕ್ರೇಜಿವಾಲ್ ವಿರುದ್ಧ ಕಣಕ್ಕಿಳಿಯುತ್ತಿರುವ ಲೈಂಗಿಕ ಅಲ್ಪಸಂಖ್ಯಾತೆ
ವಾರಣಾಸಿ , ಮಂಗಳವಾರ, 1 ಏಪ್ರಿಲ್ 2014 (16:43 IST)
ದೇವಾಲಯಗಳ ಪಟ್ಟಣ ವಾರಣಾಸಿಯಲ್ಲಿ ಅದೃಷ್ಟ ಪರೀಕ್ಷಿಸ ಹೊರಟಿರುವ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಗೆ ಹೊಸ ಪ್ರತಿಸ್ಪರ್ಧಿಯಾಗಿ ಲೈಂಗಿಕ ಅಲ್ಪಸಂಖ್ಯಾತರೊಬ್ಬರು ಕಣಕ್ಕಿಳಿದಿದ್ದಾರೆ.
PTI

60ರ ಹರೆಯದ ಕಮಲಾ ತಾನು ವಾರಣಾಸಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಘೋಷಿಸಿದ್ದಾರೆ.

"ಅರವಿಂದ್ ಕೇಜ್ರಿವಾಲ್ ದೆಹಲಿ ಆಡಳಿತದಿಂದ ದೂರ ಸರಿದ ಟೀಕೆಯನ್ನು ಮತ್ತು ಮೋದಿ 2002 ರ ಗುಜರಾತ್ ಗಲಭೆಯ ಕುರಿತ ಆರೋಪವನ್ನು ಎದುರಿಸುತ್ತಿದ್ದಾರೆ. ಆದರೆ ನಾನು ಯಾವುದೇ ಕಪ್ಪುಚುಕ್ಕೆ ಇಲ್ಲದ ನಿರ್ಮಲ ಚಿತ್ರ. ದಯವಿಟ್ಟು ನನ್ನನ್ನು ಬೆಂಬಲಿಸಿ" ಎಂದು ಅವರು ವಾರಣಾಸಿ ಮತದಾರರಲ್ಲಿ ಕೇಳಿಕೊಂಡಿದ್ದಾರೆ.

"ಬನಾರಸ್, ಅರ್ಧನಾರೀಶ್ವರ (ಶಿವ ಮತ್ತು ಅವರ ಪತ್ನಿ ಪಾರ್ವತಿಯ ಸಂಯೋಜಿತ ರೂಪ) ರೂಪ ಧರಿಸಿದ ದೇವ ಶಿವನ ನಗರವಾಗಿದೆ. 'ಶಾಸ್ತ್ರ' ಮತ್ತು 'ಪುರಾಣಗಳ' ಪ್ರಕಾರ, ನಪುಂಸಕ ಸಮುದಾಯದವರು ಅರ್ಧನಾರೀಶ್ವರರೆಂದು ಕರೆಯಲ್ಪಡುತ್ತಾರೆ. ಆದ್ದರಿಂದ, ನನಗೆ ದಯವಿಟ್ಟು ಬೆಂಬಲ ಮತ್ತು ಮತವನ್ನು ನೀಡಿ ಎಂದು ಮತದಾರರಿಗೆ ಕೋರಿದ್ದಾರೆ.

"ನಾನು 'ನಪುಂಸಕ'. ಆದ್ದರಿಂದ ನನಗೆ ಯಾವುದೇ ಕುಟುಂಬವಿಲ್ಲ. ಸ್ವಾತಂತ್ರ್ಯ ನಂತರ ಕಳೆದ 60 ವರ್ಷಗಳಲ್ಲಿ, ದೇಶವನ್ನಾಳಿದ ಪುರುಷರು ಅಥವಾ ಮಹಿಳೆಯರು ವಂಚನೆಗಳ ಮೇಲೆ ವಂಚನೆಯನ್ನು ಎಸಗಿದ್ದಾರೆ ಎಂದು ಆರೋಪಿಸಿದರು.

"ಈ ಯುದ್ಧದಲ್ಲಿ ಮೂರನೇ ಲಿಂಗಕ್ಕೆ ಸೇರಿದ ನನಗೆ ಜನರು ಬೆಂಬಲ ನೀಡಿದರೆ ಅವರು ರಾಜವಂಶ ಮುಕ್ತ ನಾಯಕನನ್ನು ಪಡೆಯುತ್ತಾರೆ ಮತ್ತು ದೇಶದ ಒಳಿತಿಗಾಗಿ ಹೊಸ ದೃಷ್ಟಾಂತವನ್ನು ಹುಟ್ಟುಹಾಕಿದಂತಾಗುತ್ತದೆ" ಎಂದು ಕಮಲಾ ಕರೆ ನೀಡಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada