Select Your Language

Notifications

webdunia
webdunia
webdunia
webdunia

ಮೋದಿಗೆ ಪ್ರತ್ಯುತ್ತರ ನೀಡಿದ ಮಮತಾ ಬ್ಯಾನರ್ಜಿ

ಮೋದಿಗೆ ಪ್ರತ್ಯುತ್ತರ ನೀಡಿದ ಮಮತಾ ಬ್ಯಾನರ್ಜಿ
ಕೋಲಕಾತಾ , ಶುಕ್ರವಾರ, 11 ಏಪ್ರಿಲ್ 2014 (12:09 IST)
ತೃಣಮೂಲ ಕಾಂಗ್ರೆಸ್ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ನಕಲಿ ಬದಲಾವಣೆಯಾಗಿದೆ ಎಂಬ ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೋದಿ ಆಡಳಿತದಲ್ಲಿ ಗುಜರಾತಿನ ಬೆಳವಣಿಗೆ ಕುಂಠಿತವಾಗಿದೆ ಎಂದು ಆರೋಪಿಸಿದ್ದಾರೆ.
PTI

ತಮ್ಮ ಆಡಳಿತದಲ್ಲಿ ಗುಜರಾತ್‌ನಲ್ಲಿ ದೊಡ್ಡ ದೊಡ್ಡ ಬದಲಾವಣೆಯಾಗಿದೆ ಎಂದು ಮೋದಿ ಪ್ರತಿಪಾದಿಸುತ್ತಾರೆ. ಆದರೆ ಸತ್ಯವೇನೆಂದರೆ ಗುಜರಾತಿನ ಬೆಳವಣಿಗೆ ದರದಲ್ಲಿ ಇಳಿಮುಖವಾಗಿದೆ ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಮಮತಾ ಪೋಸ್ಟ್ ಮಾಡಿದ್ದಾರೆ.

1980-1990 ರಲ್ಲಿ, 14,97 ಪ್ರತಿಶತವಿದ್ದ ಗುಜರಾತ್‌ನ ಬೆಳವಣಿಗೆ ದರ 1990-2000 ರಲ್ಲಿ ಶೇಕಡಾ 12,77 ರಷ್ಟು ಇಳಿದರೆ , 2001-2011 ರಲ್ಲಿ ಶೇಕಡಾ 9,82ಕ್ಕೆ ಕುಸಿತ ಕಂಡಿದೆ ಎಂದು ಅವರು ಬರೆದಿದ್ದಾರೆ.

ಸಿಲಿಗುರಿಯಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮಮತಾ ಸರಕಾರದ ವಿರುದ್ಧ ಕಿಡಿಕಾರಿದ್ದ ಮೋದಿ "ಬಂಗಾಳದಲ್ಲಿ ಸರಕಾರ ಬದಲಾದಾಗ ನಾನು ರಾಜ್ಯದ ಅಭಿವೃದ್ಧಿಯಾಗುತ್ತದೆ ಎಂದು ಅಂದುಕೊಂಡಿದ್ದೆ. ಆದರೆ ಹಾಗೆ ಆಗಲಿಲ್ಲ. ಅವರು ಕೇವಲ ಮತ ಬ್ಯಾಂಕ್ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ" ಎಂದು ಆರೋಪಿಸಿದ್ದರು.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada