Select Your Language

Notifications

webdunia
webdunia
webdunia
webdunia

ಮೋದಿ ದಾರಿಯಲ್ಲಿ ದುಷ್ಟ ಶಕ್ತಿಗಳು ಅಡಚಣೆ : ಬಾಬಾ ರಾಮ್‌ದೇವ್

ಮೋದಿ ದಾರಿಯಲ್ಲಿ ದುಷ್ಟ ಶಕ್ತಿಗಳು ಅಡಚಣೆ : ಬಾಬಾ ರಾಮ್‌ದೇವ್
ನವದೆಹಲಿ , ಶುಕ್ರವಾರ, 21 ಮಾರ್ಚ್ 2014 (18:35 IST)
PTI
ವಿವಿಧ ದುಷ್ಟ ಶಕ್ತಿಗಳು ಮೋದಿಗೆ ಅಡಚಣೆಗಳನ್ನು ಸೃಷ್ಟಿಸುತ್ತಿವೆ. ಅವರ ವಿರುದ್ಧ ಮಾಡಿರುವ ಅನೇಕ ಆರೋಪಗಳು ಸುಳ್ಳು . ಪ್ರಧಾನಿ ಆಗಬೇಕೆಂಬ ಮೋದಿ ದಾರಿಯಲ್ಲಿ ದುಷ್ಟ ಶಕ್ತಿಗಳು ಅಡಚಣೆಗಳನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಸಮಯ ಬಂದಾಗ ಸೋಲಿಸಲ್ಪಡುತ್ತಾರೆ " ಎಂದು ರಾಮ್‌ದೇವ್ ಗುಡುಗಿದರು.

ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ದೇಶಕ್ಕೆ ಸ್ಥಿರ ಮತ್ತು ಪ್ರಾಮಾಣಿಕ ಸರ್ಕಾರ ಒದಗಿಸಬಲ್ಲರು ಎಂದು ಯೋಗ ಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ಮಾರ್ಚ್ 23 ರಂದು ರಾಮಲೀಲಾ ಮೈದಾನದಲ್ಲಿ ನಡೆಯಲಿರುವ 'ಯೋಗ ಮಹೋತ್ಸವ್' ದಲ್ಲಿ ಮೋದಿ ಕೂಡ ಭಾಗವಹಿಸಲಿದ್ದಾರೆ ಎಂದು ರಾಮದೇವ್ ತಿಳಿಸಿದ್ದಾರೆ. ಈ ಯೋಗ ಮಹೋತ್ಸವ ದೇಶದ ವಿವಿಧ ಜಿಲ್ಲೆಗಳಲ್ಲಿ ಅದೇ ದಿನ ನಡೆಯಲಿದೆ.

"ಕಾಂಗ್ರೆಸ್ ಪಕ್ಷ ಈಗಾಗಲೇ ವಿನಾಶದ ಹಾದಿಯಲ್ಲಿದ್ದು, ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಕಾರ್ಯಸೂಚಿಯ ಪ್ರಕಾರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

"ಆದಾಗ್ಯೂ, 'ಯೋಗ ಮಹೋತ್ಸವ್' ಸಾಮಾಜಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮವಾಗಿದ್ದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡಾ ಪಾಲ್ಗೊಳ್ಳಲು ಸ್ವಾಗತವಿದೆ ಎಂದು ಗಾಂಧಿ ಕುಟುಂಬಕ್ಕೆ ಆಹ್ವಾನ ನೀಡಿದರು

"ಯೋಗ ಮಹೋತ್ಸವ್ ಮೂರು ಉದ್ದೇಶಗಳನ್ನು ಹೊಂದಿದೆ. ಮೂವರು ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ 1931 ರಲ್ಲಿ ಮಾರ್ಚ್ 23 ರಂದು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಬಲಿದಾನ ಮಾಡಿದರು ಕೇಂದ್ರಸರ್ಕಾರ ಅವರನ್ನು ಹುತಾತ್ಮರು ಎಂದು ಗುರುತಿಸಿ ಅವರಿಗೆ ಹುತಾತ್ಮತೆಯ ಘನತೆ ಗೌರವವನ್ನು ನೀಡಬೇಕು".

"ಎರಡನೆಯದಾಗಿ, ಯೋಗದ ಪ್ರಚಾರ ಮತ್ತು ಮೂರನೇ ಉದ್ದೇಶ ಆಧ್ಯಾತ್ಮದ ಜೊತೆ ವಿಚಾರಪರತೆ ಮತ್ತು ಅಭಿವೃದ್ಧಿಯನ್ನು ಸಂಯೋಜಿಸುವುದು" ಎಂದು ರಾಮದೇವ್ ಹೇಳಿದರು.

'ಯೋಗ ಮಹೋತ್ಸವ್' ದೇಶದ 650 ಜಿಲ್ಲೆಗಳಲ್ಲಿ ನಡೆಯಲಿದ್ದು ಕೋಟ್ಯಾಂತರ ಜನ ಭಾಗವಹಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

Share this Story:

Follow Webdunia kannada