Select Your Language

Notifications

webdunia
webdunia
webdunia
webdunia

ಮೋದಿ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾದವಳ ಪತಿಯಿಂದ ಮೋದಿ ವಿರುದ್ಧ ಪ್ರಚಾರ

ಮೋದಿ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾದವಳ ಪತಿಯಿಂದ ಮೋದಿ ವಿರುದ್ಧ ಪ್ರಚಾರ
ವಾರಣಾಸಿ , ಗುರುವಾರ, 3 ಏಪ್ರಿಲ್ 2014 (16:17 IST)
ಸರ್ಕಾರ ಮತ್ತು ಪೊಲೀಸರ "ಕಿರುಕುಳ" ತಾಳಲಾರದೆ ನನ್ನ ಪತ್ನಿ ಮುಖ್ಯಮಂತ್ರಿ ನರೇಂದ್ರ ಮೋದಿ ಕಚೇರಿಯ ಒಳಗೆ ಆತ್ಮಹತ್ಯೆ ಮಾಡಿಕೊಂಡಳು ಎಂದು ಹೇಳುತ್ತಿರುವ ಗುಜರಾತ್‌ನ 29 ವರ್ಷದ ಕಲ್ಪೇಶ್ ಪಟೇಲ್ ಬಿಜೆಪಿಯ ಪ್ರಧಾನಿ ಅಭ್ಯರ್ಥಿಗೆ ಮತ ಹಾಕದಿರಿ ಎಂದು ವಾರಣಾಸಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
PTI

ಏತನ್ಮಧ್ಯೆ, ಬಿಜೆಪಿ ಆತನ ಉದ್ದೇಶವನ್ನು ಪ್ರಶ್ನಿಸಿ ಮತ್ತು ಪ್ರಕರಣದ ಕುರಿತು ತನಿಖೆ ನಡೆಸುವಂತೆ ಗುಜರಾತ್ ಸರಕಾರವನ್ನು ಕೋರಲಾಗುವುದು ಎಂದು ತೇಪೆ ಹಚ್ಚಲು ಪ್ರಯತ್ನಿಸಿದೆ.

ಗುಜರಾತ್ ಸರ್ಕಾರ ಮತ್ತು ರಾಜ್ಯ ಪೊಲೀಸರು ನ್ಯಾಯ ನೀಡುವುದರ ಬದಲಿಗೆ ನಮಗೆ (ಅವರು ಮತ್ತು ಅವರ ಪತ್ನಿ) ಕಿರುಕುಳವನ್ನು ನೀಡಿದರು. ಅದರಿಂದ ನೊಂದ ನನ್ನ ಪತ್ನಿ ಗುಜರಾತ್ ಮುಖ್ಯಮಂತ್ರಿ (ಮೋದಿ) ಆಫೀಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಳು. ಗಾಂಧಿನಗರದಲ್ಲಿ ಆಗುತ್ತಿರುವುದು, ಇತರ ರಾಜ್ಯಗಳಲ್ಲಿ ಪುನರಾವರ್ತನೆಯಾಗಬಾರದು ಎಂದು ವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಚಾರ ನಡೆಸುತ್ತಿರುವುದಾಗಿ ಕಲ್ಪೇಶ ಪಟೇಲ್ ಹೇಳಿದ್ದಾರೆ.

ಆದ್ದರಿಂದ, ಮುಂದಾಗಲಿರುವ ಅಪಾಯಗಳ ವಿರುದ್ಧ ಮತದಾರರನ್ನು ಎಚ್ಚರಿಸಲು ನಾನಿಲ್ಲಿದ್ದೇನೆ"

ಮುಂದಿನ ಎರಡು ವಾರಗಳವರೆಗೆ ಮೋದಿ ಆಡಳಿತವಿರುವ ಗುಜರಾತ್ ರಾಜ್ಯದಲ್ಲಿ ಅನೇಕ ಅನ್ಯಾಯಕ್ಕೊಳಗಾದವರನ್ನು ಒಂದೆಡೆ ಸೇರಿಸಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಪ್ರಚಾರ ಆರಂಭಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.

"ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನಾನು ಮತ್ತು ನನ್ನ ಪತ್ನಿ ಅಮಿ ಪಟೇಲ್ ಆಕೆಯ ಕಡೆಯ ಸಂಬಂಧಿಕರಿಂದ ಶೋಷಣೆಗೊಳಗಾದೆವು. ಅವಳ ಕುಟುಂಬದ ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸುವ ಬದಲಿಗೆ, ಅನ್ಯಾಯವಾಗಿ ನನ್ನನ್ನು ಬಂಧಿಸಿದ ಗುಜರಾತ್ ಪೊಲೀಸ್‌ರು ಲಾಕ್- ಅಪ್‌ಲ್ಲಿ ನನಗೆ ಹಿಂಸೆ ನೀಡಿದರು" ಎಂದು ಅವರು ಹೇಳಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada