Webdunia - Bharat's app for daily news and videos

Install App

ಬಿಜೆಪಿ ರಾಜಕೀಯ ಉದ್ದೇಶಗಳಿಗಾಗಿ ಹಿಂದೂ ಧರ್ಮವನ್ನು ಶೋಷಿಸುತ್ತಿದೆ:ದಿಗ್ವಿಜಯ್ ಸಿಂಗ್

Webdunia
ಮಂಗಳವಾರ, 25 ಮಾರ್ಚ್ 2014 (19:51 IST)
ಮೋದಿ "ಕಟ್ಟಾ ಕೋಮುವಾದಿ ಸಿದ್ಧಾಂತ "ದ ರಾಜಕೀಯ ನಾಯಕ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ. ಬಿಜೆಪಿಯ ಪ್ರಧಾನಿ ನಾಮನಿರ್ದೇಶಿತ ವ್ಯಕ್ತಿ ಮುಜಾಫರ್‌ನಗರ ದಂಗೆಗಳಿಗೆ ಕಾರಣರಾದವರನ್ನು ಗೌರವಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

" ಪ್ರಸ್ತುತ ಬಿಜೆಪಿಯ ವ್ಯವಹಾರಗಳನ್ನು ನೋಡಲಾಗಿ ಪ್ರಧಾನಮಂತ್ರಿ ನಾಮನಿರ್ದೇಶಿತ ನರೇಂದ್ರ ಮೋದಿ ಪಕ್ಷದ ಎಲ್ಲ ಪ್ರಕ್ರಿಯೆಗಳಿಗೂ ಕಾರಣರೆಂದು ಅವರ ಪಕ್ಷ ಬಿಂಬಿಸುತ್ತದೆ "ಎಂದು ದಿಗ್ವಿಜಯ್ ಸಿಂಗ್ ಹೇಳಿದರು.

" ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಲಾಗಿ ನರೇಂದ್ರ ಮೋದಿಯ ಮಾತಿಗೆ ಅವರ ಪಕ್ಷದಲ್ಲಿ ಇಲ್ಲ ಎಂದು ಹೇಳುವವರಿಲ್ಲ. ಎಲ್ಲವೂ ಅವರ ಇಚ್ಛೆಯಂತೆ ನಡೆಯುತ್ತದೆ. ಮೋದಿಯನ್ನು ವಿರೋಧಿಸಿದವರನ್ನು ಬದಿಗೆ ಸರಿಸಲಾಗುತ್ತದೆ" ಎಂದು ಲೇವಡಿ ಮಾಡಿದ್ದಾರೆ.

" ವಾಸ್ತವವಾಗಿ ಬಿಜೆಪಿ ಹಿಂದು ಧರ್ಮದಲ್ಲಿ ನಂಬಿಕೆಯನ್ನು ಹೊಂದಿಲ್ಲ. ಆದರೆ ರಾಜಕೀಯ ಉದ್ದೇಶಗಳಿಗಾಗಿ ಧರ್ಮವನ್ನು ಶೋಷಿಸುತ್ತಿದೆ. ನಾನು ಸಹ ಹಿಂದು ಧರ್ಮದ ಅನುಯಾಯಿ. ಆದರೆ ಧರ್ಮವನ್ನು ರಾಜಕೀಯ ಉದ್ದೇಶಗಳಿಗಾಗಿ ಯಾವತ್ತೂ ಬಳಸಿಲ್ಲ. ಬಿಜೆಪಿ ರಾಮನಿಗೆ ದೇವರ ಸ್ಥಾನಮಾನ ನೀಡಿ ಎಂದು ಎಂದಿಗೂ ಪುರಸ್ಕರಿಸಲಿಲ್ಲ. ಆದರೆ, ಶ್ರೀರಾಮನನ್ನು ಕೇವಲ ಒಬ್ಬ 'ಮರ್ಯಾದಾ ಪುರುಷ (ಸ್ವಯಂ ನಿಯಂತ್ರಣ ಮನುಷ್ಯ) ಎಂದು ಒಪ್ಪಿಕೊಂಡಿದೆ". ಎಂದು ದಿಗ್ವಿಜಯ್ ಟೀಕಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments