Select Your Language

Notifications

webdunia
webdunia
webdunia
webdunia

ಬಿಜೆಪಿ ಜತೆ ಮೈತ್ರಿ ಕಡಿದುಕೊಂಡ ನಿತೀಶ್‌ಕುಮಾರ್‌ಗೆ ಮುಖಭಂಗ?

ಬಿಜೆಪಿ ಜತೆ ಮೈತ್ರಿ ಕಡಿದುಕೊಂಡ ನಿತೀಶ್‌ಕುಮಾರ್‌ಗೆ ಮುಖಭಂಗ?
, ಶುಕ್ರವಾರ, 14 ಮಾರ್ಚ್ 2014 (17:41 IST)
PR
ಮೋದಿ ಅವರ ಬಿಜೆಪಿ ಬಿಹಾರದಲ್ಲಿ ಸೇಡು ತೀರಿಸಿಕೊಳ್ಳುವಂತೆ ಕಾಣುತ್ತಿದೆ. ನಿತೀಶ್ ಕುಮಾರ್ ಪಕ್ಷ ಚುನಾವಣೆಯಲ್ಲಿ ಭಾರೀ ಸೋಲನ್ನು ಅನುಭವಿಸಲಿದೆ ಎಂದು ಎನ್‌ಡಿಟಿವಿ ಸಮೀಕ್ಷೆ ತಿಳಿಸಿದೆ. ಬಿಜೆಪಿ ದೊಡ್ಡ ಪಕ್ಷವಾಗಿ ಹೊಮ್ಮಲಿದ್ದು, 40 ಸ್ಥಾನಗಳ ಪೈಕಿ 23 ಸ್ಥಾನಗಳನ್ನು ಕಬಳಿಸಲಿದೆ. ಜೆಡಿಯು ಕೇವಲ 5 ಸೀಟುಗಳಿಗೆ ತೃಪ್ತಿಪಟ್ಟುಕೊಳ್ಳಬೇಕಿದ್ದು, 20 ಸ್ಥಾನಗಳನ್ನು ಕಳೆದುಕೊಳ್ಳಲಿದೆ.ಬಿಜೆಪಿ ಜತೆ ಮೈತ್ರಿ ಕಡಿದುಕೊಂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾರೀ ಬೆಲೆ ತೆರಬೇಕಾಗಿದ್ದು, ಕಳೆದ ಬಾರಿಗಿಂತ 15 ಸೀಟುಗಳು ಕಡಿಮೆಯಾಗಲಿದೆ. ಮೋದಿಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ ಕೂಡಲೇ ನಿತೀಶ್ ಕುಮಾರ್ ಬಿಜೆಪಿ ಜತೆ ಮೈತ್ರಿ ಕಡಿದುಕೊಂಡಿದ್ದರು.

ಲಾಲೂ ಜತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ 11 ಸೀಟುಗಳನ್ನು ಗೆಲ್ಲಲಿದೆ. ಮೋದಿಗಿಂತ ಪ್ರಧಾನಿ ಹುದ್ದೆಗೆ ತಮ್ಮ ಅರ್ಹತೆ ಮೇಲ್ಮಟ್ಟದಲ್ಲಿದೆ ಎಂದು ನಿತೀಶ್ ಕುಮಾರ್ ತಿಳಿಸಿದ್ದರು. ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಇಂದು ಅಲೆದಾಡುತ್ತಿರುವ ಜನರಿಗೆ ನನ್ನಷ್ಟು ಅನುಭವವಿದೆಯೇ ಎಂದು ಪ್ರಶ್ನಿಸಿದ್ದರು.

Share this Story:

Follow Webdunia kannada