Select Your Language

Notifications

webdunia
webdunia
webdunia
webdunia

ಬಿಜೆಪಿ ಜತೆ ಮಮತಾ ಬ್ಯಾನರ್ಜಿ ರಹಸ್ಯ ಸಮಾಲೋಚನೆ?

ಬಿಜೆಪಿ ಜತೆ ಮಮತಾ ಬ್ಯಾನರ್ಜಿ ರಹಸ್ಯ ಸಮಾಲೋಚನೆ?
ನವದೆಹಲಿ , ಬುಧವಾರ, 2 ಏಪ್ರಿಲ್ 2014 (17:58 IST)
ಬಿಜೆಪಿ ವಿರುದ್ಧ ತೀವೃ ಟೀಕೆಗೆ ಹೆಸರುವಾಸಿಯಾಗಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಚುನಾವಣೆ ತರುವಾಯ ಬಿಜೆಪಿಗೆ ಬಾಹ್ಯ ಬೆಂಬಲ ನೀಡಬಹುದು. ಚುನಾವಣೆಗಳ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ತನ್ನ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಬದಿಗೊತ್ತಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಜತೆ ಕೈ ಸೇರಿಸ ಬಹುದು ಎಂದು ವಿವಿಧ ರಾಜಕೀಯ ವಿಶ್ಲೇಷಕರು ನಿರೀಕ್ಷಿಸುತ್ತಿದ್ದಾರೆ.
PTI

"ಬಿಜೆಪಿ ಅಥವಾ ಕಾಂಗ್ರೆಸ್ ನೇತೃತ್ವದ ಮೈತ್ರಿ ಸೇರಲು ಎಲ್ಲಾ ಆಯ್ಕೆಗಳನ್ನು ತೃಣಮೂಲ ಕಾಂಗ್ರೆಸ್ ನಾಯಕಿ ಮುಕ್ತವಾಗಿಟ್ಟುಕೊಂಡಿದ್ದಾರೆ" ಎಂದು ಹಿರಿಯ ಸಿಪಿಐ (ಎಂ) ನಾಯಕ ಸೂರ್ಯ ಕಾಂತಾ ಮಿಶ್ರಾ ಅಭಿಪ್ರಾಯ ಪಟ್ಟಿದ್ದಾರೆ.

ಬಂಗಾಳಿ ಸುದ್ದಿ ವಾಹಿನಿ ಜತೆ ಮಾತನಾಡುತ್ತಿದ್ದ ಮಿಶ್ರಾ, ಬಿಜೆಪಿ ಮತ್ತು ಕಾಂಗ್ರೆಸ್ ಸಹ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗೆ 'ತಮ್ಮ ಬಾಗಿಲನ್ನು ತೆರೆದಿಟ್ಟಿವೆ' ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿ ವಿರುದ್ಧ ತನ್ನ ಆರೋಪಗಳನ್ನು ಹೊರತಾಗಿಯೂ, ರಾಜ್ಯದಲ್ಲಿ ಒಳಗೆ ಬಿಜೆಪಿ ಗೆಲ್ಲಲು ಮಮತಾರವರೇ ಜವಾಬ್ದಾರರಾಗುತ್ತಾರೆ ಎಂದು ಮಿಶ್ರಾ ಹೇಳಿದರು.

ಜನರ ಹಿತಾಸಕ್ತಿಯ ಮೇರೆಗೆ ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ಶಕ್ತಿ ತೃತೀಯ ರಂಗ ಅಧಿಕಾರಕ್ಕೆ ಬರುವ ನಂಬಿಕೆಯನ್ನು ಮಿಶ್ರಾ ವ್ಯಕ್ತಪಡಿಸಿದರು.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada