Select Your Language

Notifications

webdunia
webdunia
webdunia
webdunia

ಪ್ರಚಾರ ಸಭೆಗಳಲ್ಲಿ ನರೇಂದ್ರ ಮೋದಿ ಹೆಸರನ್ನು ಪ್ರಸ್ತಾಪಿಸದ ವರುಣ್ ಗಾಂಧಿ

ಪ್ರಚಾರ ಸಭೆಗಳಲ್ಲಿ ನರೇಂದ್ರ ಮೋದಿ ಹೆಸರನ್ನು ಪ್ರಸ್ತಾಪಿಸದ ವರುಣ್ ಗಾಂಧಿ
ಲಕ್ನೋ , ಶುಕ್ರವಾರ, 4 ಏಪ್ರಿಲ್ 2014 (10:26 IST)
ಬಿಜೆಪಿ ಅಭ್ಯರ್ಥಿಗಳೆಲ್ಲ ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೆಸರನ್ನು ಪ್ರಚಾರ ಸಭೆಗಳಲ್ಲಿ ಬಳಸುವುದು ಸಾಮಾನ್ಯವಾಗಿದೆ. ಆದರೆ ತನ್ನ ತಂದೆ ಸಂಜಯ್ ಗಾಂಧಿ ಪ್ರತಿನಿಧಿಸಿದ್ದ ಸುಲ್ತಾನಪುರ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ, ಯುವ ನಾಯಕ ವರುಣ ಮತದಾರರ ಬೆಂಬಲ ಪಡೆಯಲು ನಡೆಸುವ ಪ್ರಚಾರ ಸಭೆಗಳಲ್ಲಿ ಸಾಮಾನ್ಯವಾಗಿ ತಮ್ಮ ಭಾಷಣದಲ್ಲಿ ಮೋದಿಯ ಪ್ರಸ್ತಾಪವನ್ನು ಮರೆಮಾಚುತ್ತಾರೆ.
PTI

ಕ್ಷೇತ್ರಕ್ಕಾಗಿ ತಮ್ಮ ಯೋಜನೆಗಳನ್ನು ಮತ್ತು ಸುಲ್ತಾನ್ಪುರದ ಜತೆ ತನ್ನ ಕುಟುಂಬದ ಸಂಪರ್ಕವನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸಲು ವರುಣ ಪ್ರಯತ್ನಿಸುತ್ತಿದ್ದಾರೆ. ಆದರೆ ಇತರ ಬಿಜೆಪಿ ಅಭ್ಯರ್ಥಿಗಳಂತೆ ಇವರು ಮೋದಿಯ ಉಲ್ಲೇಖವನ್ನು ಮಾಡದಿರುವುದು ವೀಕ್ಷಕರ ಗಮನ ಸೆಳೆಯುತ್ತಿದೆ.

ಕುತೂಹಲಕಾರಿಯಾದ ವಿಷಯವೇನೆಂದರೆ ವರುಣ್ ಮಾರ್ಚ್ 2 ರಂದು ಲಕ್ನೋದಲ್ಲಿ ನಡೆದ ಮೋದಿಯ ಎಂಟು ಪ್ರಚಾರ ಸಭೆಗಳಲ್ಲಿ ವರುಣ ಅನುಪಸ್ಥಿತಿಯಿಂದ ಗಮನ ಸೆಳೆದಿದ್ದಾರೆ. ಮುರಳಿ ಮನೋಹರ್ ಜೋಶಿ ಮತ್ತು ಪಕ್ಷದ ಮುಖ್ಯಸ್ಥ ರಾಜ್‌ನಾಥ್ ಸಿಂಗ್‌ರಂತಹ ನಾಯಕರ ಸಭೆಗಳಲ್ಲೂ ಕೂಡ ಅವರು ಗೈರು ಹಾಜರಾಗಿದ್ದರು.

ಅಲ್ಲದೇ ಇತ್ತೀಚಿಗೆ ಅವರು ತಮ್ಮ ಸೋದರ ಸಂಬಂಧಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಹೊಗಳಿ ತಮ್ಮ ತಾಯಿ ಮೇನಕಾ ಮತ್ತು ಪಕ್ಷದ ನಾಯಕರಿಂದ ಛೀಮಾರಿ ಹಾಕಿಸಿ ಕೊಂಡಿದ್ದಾರೆ.

ಆದಾಗ್ಯೂ, ವರುಣ್ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ತನ್ನ ಚುನಾವಣಾ ಪ್ರಚಾರಗಳಲ್ಲಿ ಮಿಸ್ ಮಾಡುತ್ತಿರುವುದನ್ನು ತಿರಸ್ಕರಿಸುತ್ತಿದ್ದಾರೆ.

ವರುಣ್ ತಮ್ಮ ಭಾಷಣದಲ್ಲಿ ಮೋದಿ ನಿರ್ಲಕ್ಷಿಸುತ್ತಾರೆ ಎಂಬುದನ್ನು ಬಿಜೆಪಿ ಕಾರ್ಯಕರ್ತರು ನಿರಾಕರಿಸುತ್ತಾರೆ. ಅವರು ಗುಜರಾತ್ ಮುಖ್ಯಮಂತ್ರಿಗಳ ಅಭಿವೃದ್ಧಿ ಕಾರ್ಯಸೂಚಿಗಳ ಬಗ್ಗೆ ಭಾರ್ತುಆ ಮತ್ತು ರುಡೊಲಿ ಎಂಬ ಹಳ್ಳಿಗಳಲ್ಲಿ ಮಾತನಾಡಿದ್ದರು ಎಂದು ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada