Select Your Language

Notifications

webdunia
webdunia
webdunia
webdunia

'ನೋಡಿ, ನೋಡಿ, ದಿಲ್ಲಿಯ ಪಲಾಯನವಾದಿ ಬಂದ' - ವಾರಣಾಸಿಯಲ್ಲಿ ಕೇಜ್ರಿವಾಲ್ ವಿರೋಧಿ ಪೋಸ್ಟರ್

'ನೋಡಿ, ನೋಡಿ, ದಿಲ್ಲಿಯ ಪಲಾಯನವಾದಿ ಬಂದ' - ವಾರಣಾಸಿಯಲ್ಲಿ ಕೇಜ್ರಿವಾಲ್ ವಿರೋಧಿ ಪೋಸ್ಟರ್
ನವದೆಹಲಿ , ಮಂಗಳವಾರ, 15 ಏಪ್ರಿಲ್ 2014 (12:55 IST)
ಬಿಜೆಪಿಯ ಪ್ರಧಾನಿ ಅಭ್ಯರ್ಥಿಯ ವಿರುದ್ಧ ತಾವು ಸ್ಪರ್ಧಿಸಿರುವ ವಾರಣಾಸಿಯಲ್ಲಿ ಪ್ರಚಾರ ನಡೆಸಲು ಇಂದು ಬೆಳಿಗ್ಗೆ ಅಲ್ಲಿಗೆ ತಲುಪಿದ ಕೇಜ್ರಿವಾಲ್‌ರಿಗೆ ಆಪ್ ಕಾರ್ಯಕರ್ತರು ಭರ್ಜರಿ ಸ್ವಾಗತವನ್ನು ನೀಡಿದರು. ಆದರೆ ಎಂದಿನಂತೆ ಅವರು ತೀವೃ ವಿರೋಧವನ್ನು ಸಹ ಎದುರಿಸ ಬೇಕಾಯಿತು ಎಂದು ವರದಿಯಾಗಿದೆ.
PTI

ರೇಲ್ವೆ ನಿಲ್ದಾಣದಲ್ಲಿ ಇಳಿದ ಕೂಡಲೇ "ನೋಡಿ, ನೋಡಿ, ದಿಲ್ಲಿಯ ಪಲಾಯನವಾದಿ ಬಂದ" ಎಂದು ಬರೆದಿದ್ದ ಪೋಸ್ಟರ್ ಅಂಟಿಸಿದ್ದನ್ನು ಅವರು ಕಂಡರು. ಅದರಿಂದ ಕುಪಿತಗೊಂಡ ಆಪ್ ಕಾರ್ಯಕರ್ತರು ಅದನ್ನು ಹರಿದೊಗೆದರು.

ಈ ಹಿಂದೆ ಮೋದಿ ವಿರುದ್ಧ ಸ್ಪರ್ಧಿಸಲು ವಾರಣಾಸಿ ಜನತೆಯ ಅಭಿಪ್ರಾಯ ಕೇಳಲು ಬಂದಿದ್ದ ವೇಳೆ ಕೂಡ ವಿರೋಧಿಗಳು ಅವರ ಮುಖಕ್ಕೆ ಕಪ್ಪು ಬಣ್ಣ ಬಳಿದಿದ್ದರು.

ದೇವಾಲಯಗಳ ನಗರಿಯನ್ನು ತಲುಪಿದ ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಆಪ್ ನಾಯಕ "ನಾನು ವಾರಣಾಸಿಯಲ್ಲಿದ್ದು ಜನರೊಂದಿಗೆ ಮಿಳಿತವಾಗಲು ಪ್ರಯತ್ನಿಸುತ್ತೇನೆ. ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆಯನ್ನು ನೀಡುತ್ತೇನೆ" ಎಂಬ ಭರವಸೆಯನ್ನು ನೀಡಿದರು.

ಚುನಾವಣೆಯಿಂದ ನಾಮಪತ್ರವನ್ನು ಹಿಂತೆಗೆದುಕೊಂಡಿರುವ ಮುಖ್ತಾರ್ ಅನ್ಸಾರಿಯವರ ಬೆಂಬಲವನ್ನು ನಾನು ತೆಗೆದು ಕೊಳ್ಳುವುದಿಲ್ಲ ಘೋಷಿಸಿದ ಅವರು ಈ ನಿಟ್ಟಿನಲ್ಲಿ ಅನ್ಸಾರಿಯ ಜತೆ ಚರ್ಚೆ ನಡೆಸಿಲ್ಲ, ನಡೆಸುವುದು ಇಲ್ಲ ಎಂದು ತಿಳಿಸಿದರು.

ವರದಿಗಳ ಪ್ರಕಾರ ಕೇಜ್ರಿವಾಲ್, 12 ಮೇವರೆಗೆ ವಾರಣಾಸಿಯಲ್ಲಿದ್ದುಕೊಂಡು ಪ್ರಚಾರ ಕಾರ್ಯವನ್ನು ಕೈಗೊಳ್ಳಲಿದ್ದಾರೆ. ಅಲ್ಲದೇ ಅಮೇಠಿಯಲ್ಲಿ ರಾಹುಲ್ ಗಾಂಧಿಯ ವಿರುದ್ಧ ಕಣಕ್ಕಿಳಿದಿರುವ ತಮ್ಮ ಪಕ್ಷದ ಅಭ್ಯರ್ಥಿ ಕುಮಾರ ವಿಶ್ವಾಸ್ ಪರ ಕೂಡ ಪ್ರಚಾರ ನಡೆಸಲಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada