Select Your Language

Notifications

webdunia
webdunia
webdunia
webdunia

ದೇಶದಲ್ಲಿ ಪರಿವರ್ತನೆಯ ಅಲೆಯಿದೆ : ರಾಜನಾಥ್ ಸಿಂಗ್

ದೇಶದಲ್ಲಿ ಪರಿವರ್ತನೆಯ ಅಲೆಯಿದೆ : ರಾಜನಾಥ್ ಸಿಂಗ್
ನವದೆಹಲಿ , ಮಂಗಳವಾರ, 15 ಏಪ್ರಿಲ್ 2014 (09:26 IST)
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ, ಲಖನೌ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯುತ್ತಿರುವ ರಾಜನಾಥ್ ಸಿಂಗ್ ದೇಶದಲ್ಲಿ ಮೋದಿ ಅಲೆ ಇದೆ ಎಂಬುದರ ಬಗ್ಗೆ ಸಹಮತರಿಲ್ಲ ಎಂದೆನಿಸುತ್ತದೆ. ದೇಶದಲ್ಲಿ ಪರಿವರ್ತನೆಯ ಅಲೆ ಇದೆ ಎಂದು ಅವರು ಹೇಳಿದ್ದಾರೆ.
PTI

ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಅವರು ಮೋದಿಯ ಹೆಸರನ್ನು ಒಮ್ಮೆಯೂ ಬಳಸಲಿಲ್ಲ ಮತ್ತು ಮೋದಿ ಅಲೆಯ ಬಗ್ಗೆ ಉಲ್ಲೇಖಿಸಲಿಲ್ಲ. ದೇಶದಲ್ಲಿ ಪರಿವರ್ತನೆಯ ಅಲೆಯಿದೆ. ಎನ್‌ಡಿಎಯ ಅಲೆಯಿದೆ. ದೇಶದಲ್ಲಿ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಅವರು ತಿಳಿಸಿದರು.

ಮೋದಿ ಅಲೆ ಮತ್ತು ಗುಜರಾತ್ ವಿಕಾಶದ ಮಾದರಿಯನ್ನು ಅಲ್ಲಗಳೆದಿದ್ದ ಮುರಳಿ ಮನೋಹರ ಜೋಶಿ ಮಾತಿಗೆ ಪ್ರತಿಕ್ರಿಯಿಸುವಂತೆ ಕೇಳಿದಾಗ ಅದಕ್ಕೆ ನೇರ ಉತ್ತರ ನೀಡದೆ, ಬಿಜೆಪಿ ಮತ್ತು ಮೋದಿ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ದೇವಕಾಂತ್ ಬರುವಾ ಅವರ ಇಂದಿರಾ 'ಈಸ ಇಂಡಿಯಾ, ಇಂಡಿಯಾ ಈಸ ಇಂದಿರಾ' ಎಂಬ ಘೋಷವನ್ನು ನೆನಪಿಸಿದಾಗ ನಾವು 'ಮೋದಿ ಈಸ ಇಂಡಿಯಾ, ಇಂಡಿಯಾ ಈಸ ಮೋದಿ' ಎಂದು ಎಂದಿಗೂ ಹೇಳಿಲ್ಲ ಎಂದು ಹೇಳಿದರು.

ಉಲ್ಲೇಖನೀಯವಾದ ವಿಷಯವೇನೆಂದರೆ ರಾಜನಾಥ ಸಿಂಗ್‌ರವರ ಕಣ್ಣು ಕೂಡ ಪ್ರಧಾನಿ ಸ್ಥಾನದ ಮೇಲೆ ಇದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಅಂತ ಅವಕಾಶ ಸಿಕ್ಕಿದರೆ ಅವರದನ್ನು ತಪ್ಪಿಸಿಕೊಳ್ಳಲಾರರು. ಅಲ್ಲದೇ ಅವರ ಕೆಲವು ನಿರ್ಣಯಗಳ ಬಗ್ಗೆ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿತ್ತು. ಹಿರಿಯ ನಾಯಕ ಜಸವಂತ್ ಸಿಂಗ್‌ರಿಗೆ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಬೇಸರಗೊಂಡಿದ್ದ ಡಾ. ಮುರಳಿ ಮನೋಹರ ಜೋಶಿ, ಇದಕ್ಕೆ ವಸುಂಧರಾ ಜತೆ ರಾಜನಾಥ್ ಕೂಡ ಕಾರಣ ಎಂದು ಆಪಾದಿಸಿದ್ದರು.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada