Webdunia - Bharat's app for daily news and videos

Install App

ದೋಷಿ ಸಂಸದರನ್ನು ಮತ್ತು ಶಾಸಕರನ್ನು ಜೈಲಿಗೆ ಕಳುಹಿಸುತ್ತಾರಂತೆ ಮೋದಿ

Webdunia
ಮಂಗಳವಾರ, 15 ಏಪ್ರಿಲ್ 2014 (11:00 IST)
ಕಾಂಗ್ರೆಸ್ ಮೇಲೆ ರಾಜಕೀಯ ಅಪರಾಧದ ಆರೋಪವನ್ನು ಮಾಡುತ್ತ ವಾಗ್ದಾಳಿ ನಡೆಸಿದ ಬಿಜೆಪಿಯ ಪ್ರಧಾನಿ ಪದವಿಯ ಅಭ್ಯರ್ಥಿ ನರೇಂದ್ರ ಮೋದಿ ತಾವು ಅಧಿಕಾರಕ್ಕೆ ಬಂದ ಮೇಲೆ ದೋಷಿ ಸಂಸದರ ಮತ್ತು ಶಾಸಕರ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ರಚಿಸಿ, ಒಂದು ವರ್ಷದ ಒಳಗೆ ತಪ್ಪಿತಸ್ಥರನ್ನು ಸರಳಿನ ಹಿಂದುಗಡೆ ಕಳುಹಿಸುತ್ತೇವೆ. 5 ವರ್ಷಗಳೊಳಗೆ ವ್ಯವಸ್ಥೆಯನ್ನು ಅಪರಾಧಿಗಳಿಂದ ಮುಕ್ತರನ್ನಾಗಿ ಮಾಡುತ್ತೇವೆ ಎಂದು ಗುಡುಗಿದ್ದಾರೆ.
PTI

" ನಾನು ರಾಜಕಾರಣದ ಅಪರಾಧೀಕರಣದಿಂದ ದುಃಖಿತನಾಗಿದ್ದೇನೆ, ಇದಕ್ಕೆ ಕಾಂಗ್ರೆಸ್ ಸಂಪೂರ್ಣ ಜವಾಬ್ದಾರಿಯಾಗಿದೆ. ಹೇಗಾದರೂ ಮಾಡಿ ಅಧಿಕಾರವನ್ನು ಹಿಡಿದಿಟ್ಟುಕೊಳ್ಳುವ ಧಾವಂತದಲ್ಲಿ ಅದು ಅಪರಾಧಿಗಳನ್ನು ಬಳಸಿಕೊಳ್ಳಲು ಪ್ರಾರಂಭಿಸಿತು. ನಂತರ ಆ ಅಪರಾಧಿಗಳು ಪ್ರಬಲರಾಗಿ ರಾಜಕೀಯ ನಾಯಕರಾದರು. ಇಂತಹ ಅಪರಾಧಿಗಳಿಂದ ನಮ್ಮ ವ್ಯವಸ್ಥೆಯನ್ನು ಮುಕ್ತವಾಗಿಸಬೇಕು".

" ವ್ಯವಸ್ಥೆಯನ್ನು ಶುದ್ಧಗೊಳಿಸಲು ನನಗೆ ಒಂದು ಅವಕಾಶ ಕೊಡಿ. ಅಪರಾಧಿ ಸಂಸದರ ಮತ್ತು ಶಾಸಕರ ವಿಚಾರಣೆ ನಡೆಸಲು ಅನುಕೂಲವಾಗುವಂತೆ ನಾನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಶೇಷ ನ್ಯಾಯಾಲಯಗಳನ್ನು ನಿರ್ಮಿಸುತ್ತೇನೆ ಮತ್ತು ಕೇವಲ ಒಂದು ವರ್ಷದೊಳಗೆ ಕೇಸ್‌ನ್ನು ಮುಗಿಸಿ, ಅಪರಾಧಿಗಳೆಂದು ಸಾಬೀತಾದರೆ ಅವರನ್ನು ಜೈಲಿಗೆ ಕಳುಹಿಸಲಾಗುವುದು" ಎಂದು ಮೋದಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments