Select Your Language

Notifications

webdunia
webdunia
webdunia
webdunia

ದೆಹಲಿ ಮೆಟ್ರೋ ರೈಲಿನಲ್ಲಿ ಮೋದಿ ಜಾಹೀರಾತಿಗೆ ಪ್ರತಿದಿನ 2 ಕೋಟಿ ವೆಚ್ಚ

ದೆಹಲಿ ಮೆಟ್ರೋ ರೈಲಿನಲ್ಲಿ ಮೋದಿ ಜಾಹೀರಾತಿಗೆ ಪ್ರತಿದಿನ 2 ಕೋಟಿ ವೆಚ್ಚ
ನವದೆಹಲಿ , ಗುರುವಾರ, 27 ಮಾರ್ಚ್ 2014 (12:55 IST)
PTI
ಮೆಟ್ರೋ ರೈಲ್ವೆ ನಿಲ್ದಾಣಗಳಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜಾಹೀರಾತಿಗಾಗಿ ಬಿಜೆಪಿ ಪಕ್ಷ ದಿನಕ್ಕೆ 2 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮೆಟ್ರೋ ರೈಲು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಮೋದಿಯವರ ಬ್ಯಾನರ್ ಮತ್ತು ಪೋಸ್ಟರ್‌ಗಳ ಜಾಹೀರಾತುಗಳನ್ನು ಅಳವಡಿಸಲಾಗಿದೆ ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.

ಬಿಜೆಪಿ ಪಕ್ಷದ ಮೂಲಗಳ ಪ್ರಕಾರ, ನವದೆಹಲಿಯಾದ್ಯಂತ ನರೇಂದ್ರ ಮೋದಿ ಬಾವಚಿತ್ರವಿರುವ 6000 ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಅದರಲ್ಲಿ 3500 ಪೋಸ್ಟರ್‌ಗಳನ್ನು ಮೆಟ್ರೋ ರೈಲಿನಲ್ಲಿ ಅಳವಡಿಸಲಾಗಿದೆ ಎನ್ನಲಾಗಿದೆ.

ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮೋದಿಯ ಬಗ್ಗೆ ಚರ್ಚಿಸಲಿ ಎನ್ನುವುದೇ ಜಾಹೀರಾತಿನ ಮುಖ್ಯ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada