Select Your Language

Notifications

webdunia
webdunia
webdunia
webdunia

ಛೋಟಾ ಬಚ್ಚಾ ದೇಶ್ ಚಲಾ ನಹೀ ಸಕ್ತಾ : ರಾಹುಲ್‌ಗೆ ಶ್ರೀ ಶ್ರೀ ರವಿಶಂಕರ್ ಟಾಂಗ್

ಛೋಟಾ ಬಚ್ಚಾ ದೇಶ್ ಚಲಾ ನಹೀ ಸಕ್ತಾ : ರಾಹುಲ್‌ಗೆ ಶ್ರೀ ಶ್ರೀ ರವಿಶಂಕರ್ ಟಾಂಗ್
ಫಾರುಕಾಬಾದ್ , ಬುಧವಾರ, 19 ಮಾರ್ಚ್ 2014 (17:31 IST)
PTI
ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ್, ರಾಹುಲ್ ಗಾಂಧಿ ಮತ್ತು ಕೇಜ್ರಿವಾಲ್‌ರವರನ್ನು ಗುರಿಯಾಗಿಟ್ಟುಕೊಂಡು, ಚಿಕ್ಕ ಮಗು ಮತ್ತು ಅನುಭವವಿಲ್ಲದ ವ್ಯಕ್ತಿ ದೇಶವನ್ನು ನಡೆಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಹೋಳಿಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರ ಜತೆ ಮಾತನಾಡಿದ ಗುರೂಜಿ ದೇಶದ ವರ್ತಮಾನದ ಸ್ಥಿತಿಯನ್ನು ನೋಡಿದರೆ ಬದಲಾವಣೆ ಅವಶ್ಯಕತೆ ಇದೆ. ಆದರೆ ರಾಷ್ಟ್ರದ ಸಾರ್ವಭೌಮಿಕ ಪ್ರತಿನಿಧಿತ್ವ ವಹಿಸಲು ಚಿಕ್ಕ ಪಕ್ಷಗಳಿಂದ ಸಾಧ್ಯವಾಗಲಾರದು ಎಂದು ಹೇಳಿದ್ದಾರೆ.

ಯಾರ ಹೆಸರನ್ನೂ ನಮೂದಿಸದೇ, ಯಾವುದೇ ಮಗು ಚಾಲಕನ ಸ್ಥಾನದಲ್ಲಿ ಕುಳಿತುಕೊಳ್ಳುವುದು ಉಚಿತವಾಗಲಾರದು ಎಂದು ರವಿಶಂಕರ್ ಪರೋಕ್ಷವಾಗಿ ಟೀಕಿಸಿದರು. ರಾಹುಲ್ ಕುರಿತಾಗಿ ನೀವು ಈ ಮಾತನ್ನು ಬಳಸಿದ್ದೀರಾ ಎಂದು ಕೇಳಿದಾಗ ಉತ್ತರಿಸಿದ ಅವರು ಧರ್ಮಗುರುವಿನ ಸ್ಥಾನದ ಮರ್ಯಾದೆಗೆ ವಿರುದ್ಧವಾಗಿ ನಾನು ಯಾರ ಹೆಸರನ್ನು ಉಲ್ಲೇಖಿಸುವುದು ಸರಿಯಲ್ಲ ಎಂದು ಹೇಳಿದರು.

ಅರವಿಂದ್ ಕೇಜ್ರಿವಾಲ್ ಬಗ್ಗೆ ಕೇಳಿದಾಗ ದೆಹಲಿಯಂತಹ ಸಣ್ಣ ರಾಜ್ಯದ ತರಗತಿಯನ್ನು ಬಿಟ್ಟು ಮೇಲಿನ ತರಗತಿಯಲ್ಲಿ ದಾಖಲಾಗುವುದರಲ್ಲಿ ಏನು ಔಚಿತ್ಯವಿದೆ ಎಂದ ಅವರು ನರೇಂದ್ರ ಮೋದಿ ಹೆಸರನ್ನು ಉಲ್ಲೇಖಿಸಿದಾಗ ಮುಗುಳ್ನಗುತ್ತಾ ದೇಶದ ಆಡಳಿತ ಬುದ್ಧಿವಂತ, ಸಕ್ರಿಯ ಮತ್ತು ಅನುಭವಿ ಕೈಗಳಿಗೆ ಸೇರಬೇಕು ಎಂದು ಬಯಸುವುದಾಗಿ ಹೇಳಿದರು.

ವಿದೇಶದಲ್ಲಿರುವ ಕಪ್ಪುಹಣವನ್ನು ದೇಶಕ್ಕೆ ವಾಪಸ್ ತಂದರೆ ದೇಶದ ಪ್ರತಿ ವ್ಯಕ್ತಿಗೆ 3 ಲಕ್ಷ ಕೊಡಬಹುದಲ್ಲದೇ ಮುಂದಿನ 15 ವರ್ಷಗಳವರೆಗೆ ಭಾರತ ಸರಕಾರಕ್ಕೆ ಯಾವುದೇ ರೀತಿಯ ಕರವನ್ನು ವಿಧಿಸುವ ಅವಶ್ಯಕತೆ ಇರುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

Share this Story:

Follow Webdunia kannada