Select Your Language

Notifications

webdunia
webdunia
webdunia
webdunia

ಕೇಜ್ರಿವಾಲ್‌ರಿಗಿದೆ ನಕ್ಸಲ್ ನಂಟು: ಹಸನ್ ಕುಸ್ಮಿ

ಕೇಜ್ರಿವಾಲ್‌ರಿಗಿದೆ ನಕ್ಸಲ್ ನಂಟು: ಹಸನ್ ಕುಸ್ಮಿ
ನವದೆಹಲಿ , ಸೋಮವಾರ, 14 ಏಪ್ರಿಲ್ 2014 (18:33 IST)
ಆಪ್ ನಾಯಕ ಕೇಜ್ರಿವಾಲ್ ಮೇಲೆ ಬರುತ್ತಿರುವ ಆರೋಪಗಳ ಸಂಖ್ಯೆ ಹೆಚ್ಚುತ್ತಿದ್ದು, ಅವರದೇ ಪಕ್ಷದವರು ಕೇಜ್ರಿವಾಲ್ ವಿರುದ್ಧ ಒಂದೊದಾಗಿ ಆರೋಪ ಹೊರಿಸುತ್ತಿದ್ದಾರೆ. ಅವರಿಗೆ ನಕ್ಸಲ್‌ರ ಜತೆ ನಂಟಿದೆ ಎಂದು ಹೇಳುವುದರ ಮೂಲಕ ಅವರದೇ ಪಕ್ಷದ ಸದಸ್ಯ ಮೌಲಾನಾ ಹಸನ್ ಕಾಸ್ಮಿ ಹೊಸ ಬಾಂಬ ಸಿಡಿಸಿದ್ದಾರೆ ಎಂದು ವರದಿಯಾಗಿದೆ.
PTI

"ನಾವು ಒಂದು ದಿನ ಅರವಿಂದ್ ಮನೆಯಲ್ಲಿ ಸಭೆ ಸೇರಿದ್ದೆವು. ಆಗ ತಡವಾಗಿ ಸ್ಥಳಕ್ಕೆ ಆಗಮಿಸಿದ ಅವರು ನಾನು ನಕ್ಸಲ್‌ರನ್ನು ಭೇಟಿಯಾಗಿ ಬಂದಿರುವುದಾಗಿ ತಿಳಿಸಿದರು. ಹೀಗೇಕೆ ಎಂದು ನಾನು ಕೇಳಿದಾಗ ಅವರು ನಾನವರ ಸಮಸ್ಯೆಗಳನ್ನು ಕೇಳಲು ಹೋಗಿದ್ದೆ ಎಂದು ಉತ್ತರಿಸಿದರು. ಅವರ ಈ ಅಸಂವಿಧಾನಿಕ ನಡೆ ನನ್ನನ್ನು ಬೆಚ್ಚಿ ಬೀಳಿಸಿತು" ಎಂದವರು ತಿಳಿಸಿದ್ದಾರೆ.

"ಅವರಿವರ ಮೇಲೆ ಆರೋಪ ಹೊರಿಸುವ ಕೇಜ್ರಿವಾಲ್ ಭೂ ಕಬಳಿಕೆ ಹಗರಣದಲ್ಲಿ ತೊಡಗಿರುವ ಪ್ರಶಾಂತ್ ಭೂಷಣರನ್ನು ತಮ್ಮ ಪಕ್ಷದಲ್ಲಿ ಇರಿಸಿಕೊಂಡಿಡ್ಡಾರೆ. ಮಾಧ್ಯಮದವರು ಭೃಷ್ಟರು ಎಂದು ಹೇಳುವ ಅವರು ತಮ್ಮ ಪಕ್ಷದಲ್ಲಿ ಮಾಧ್ಯಮದವರನ್ನು ಸೇರಿಸಿ ಕೊಂಡಿದ್ದಾರೆ. ಭೃಷ್ಟಾಚಾರದ ವಿರುದ್ಧ ಮಾತನಾಡುವ ಆಪ್ ನಾಯಕ ಇವೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು" ಎಂದು ಕಾಸ್ಮಿ ಸವಾಲು ಹಾಕಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada