Select Your Language

Notifications

webdunia
webdunia
webdunia
webdunia

ಕಾರ್ಗಿಲ್ ಯುದ್ಧ ಮುಸ್ಲಿಮರೇ ಗೆದ್ದಿದ್ದು: ಅಜಮ್ ಖಾನ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಅಖಿಲೇಶ್ ಯಾದವ್

ಕಾರ್ಗಿಲ್ ಯುದ್ಧ ಮುಸ್ಲಿಮರೇ ಗೆದ್ದಿದ್ದು: ಅಜಮ್ ಖಾನ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಅಖಿಲೇಶ್ ಯಾದವ್
ಲಖನೌ , ಗುರುವಾರ, 10 ಏಪ್ರಿಲ್ 2014 (17:55 IST)
'ಕಾರ್ಗಿಲ್ ಸಂಘರ್ಷವನ್ನು ಗೆದ್ದು ಕೊಟ್ಟಿದ್ದು ಹಿಂದು ಸೈನಿಕರಲ್ಲ, ಮುಸ್ಲಿಂ ಸೈನಿಕರು' ಎಂದು ವಿವಾದಾತ್ಮಕ ಹೇಳಿಕೆ ನೀಡಿ ದೇಶಾದ್ಯಂತ ತೀವೃ ಖಂಡನೆಗೆ ಒಳಗಾಗಿರುವ ತಮ್ಮ ಪಕ್ಷದ ನಾಯಕ ಅಜಮ್ ಖಾನ್‌ರನ್ನು ಬೆಂಬಲಿಸ ಹೊರಟಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಪರಮ ವೀರ ಚಕ್ರ ಗೆದ್ದ ಹುತಾತ್ಮ ಅಬ್ದುಲ್ ಹಮೀದ್‌ರವರನ್ನು ಉಲ್ಲೇಖಿಸಿ, ಖಾನ್‌ ಹೇಳಿಕೆ ನಿಜವಾದದ್ದು ಎಂದು ಹೇಳಿದ್ದಾರೆ.
PTI

"ಕಾರ್ಗಿಲ್ ಯುದ್ಧವನ್ನು ಜಯಿಸುವಲ್ಲಿ ಮುಸಲ್ಮಾನರು ನಮಗೆ ಸಹಾಯ ಮಾಡಿದ್ದಾರೆ ಎಂಬ ಖಾನ್ ಹೇಳಿಕೆಯಲ್ಲಿ ಏನು ತಪ್ಪಿದೆ. ಅಬ್ದುಲ್ ಹಮೀದ್ ಪರಮ ವೀರ ಚಕ್ರವನ್ನು ಜಯಿಸಿರುವುದು ಸತ್ಯವಲ್ಲವೇ. ನಾನು ಯೋಗೇಂದ್ರ ಯಾದವ್ ಪರಮವೀರ ಚಕ್ರವನ್ನು ಪಡೆದೆನೆಂದು ಹೇಳಿದೆನೆಂದು ಹೇಳಿದರೆ ನಾನು ಪಕ್ಷಪಾತಿ ಎಂದು ನೀವು ಆರೋಪಿಸುತ್ತೀರಿ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
.
ಕಾರ್ಗಿಲ್ ಯುದ್ಧವನ್ನು ಗೆದ್ದಿದ್ದು ಮುಸ್ಲಿಂ ಸೈನಿಕರು ಎಂದು ಖಾನ್ ಹೇಳಿದ್ದರು." ಕಾರ್ಗಿಲ್‌ನ ಬೆಟ್ಟಗಳನ್ನು ವಶಪಡಿಸಿಕೊಂಡಿದ್ದು ಮುಸ್ಲಿಂ ಸೈನಿಕರೇ ಹೊರತು ಹಿಂದಿ ಸೈನಿಕರಲ್ಲ" ಎಂದು ಖಾನ್ ಅಭಿಪ್ರಾಯ ಪಟ್ಟಿದ್ದರು.

ಲೋಕಸಭೆಯಲ್ಲಿ ಮೋದಿ ಅಲೆ ಇರುವುದನ್ನು ಯಾದವ್ ನಿರಾಕರಿಸಿದ್ದಾರೆ.


"ಮೋದಿ ಅಲೆ ನೆಲದ ಮೇಲೆ ಕಾಣದಾಗಿದೆ. ಸಾವಿರಾರು ಕೋಟಿಗಳಷ್ಟು ಖರ್ಚುಮಾಡಿ , ಅವರು ವಿದೇಶಿ ಪಿಆರ್ ಸಂಸ್ಥೆಯನ್ನು ನೇಮಕ ಮಾಡಿಕೊಂಡಿದ್ದಾರೆ. ಆದ್ದರಿಂದ ಎಲ್ಲರೂ ಮೋದಿ ಅಲೆಯಿದೆ ಎಂದು ಹೇಳುತ್ತಾರೆ " ಎಂದು ಅವರು ಟೀಕಿಸಿದರು.

ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿದ ,ಅವರು ನಾವು" ನಾವು ಗರಿಷ್ಠ ಸ್ಥಾನಗಳನ್ನು ಪಡೆಯುವ ಗುರಿ ಹೊಂದಿದ್ದೇವೆ" ಎಂದರು

ಬುಧವಾರ ಅಜಮ್ ಖಾನ್ ಮುಸ್ಲಿಂ ಸೈನಿಕರು ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕೆ ಜಯ ತಂದು ಕೊಟ್ಟಿದ್ದರು ಎಂಬ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿ ಕೊಂಡಿದ್ದರು.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada