Webdunia - Bharat's app for daily news and videos

Install App

ಕಾಂಗ್ರೆಸ್ ಹಿರಿಯ ನಾಯಕರ ವಿರುದ್ಧ ರಾಹುಲ್ ಗಾಂಧಿ ಗುಡುಗು

Webdunia
ಶುಕ್ರವಾರ, 21 ಮಾರ್ಚ್ 2014 (19:15 IST)
PTI
ಕಳೆದ 10 ವರ್ಷಗಳಲ್ಲಿ ಪ್ರಮುಖ ಖಾತೆಗಳನ್ನು ಅನುಭವಿಸಿದ್ದ ಕಾಂಗ್ರೆಸ್ ಮುಖಂಡರು ಚುನಾವಣೆಗೆ ನಿಲ್ಲಲು ಹಿಂದೇಟು ಹಾಕುತ್ತಿರುವುದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಕೆರಳಿಸಿದೆ.

ಕಾಂಗ್ರೆಸ್ ಪಕ್ಷದ ಅನೇಕ ಹಿರಿಯ ಮುಖಂಡರು ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡುತ್ತಿರುವಂತೆ ಕೆಂಡಾಮಂಡಲವಾದ ರಾಹುಲ್ ಗಾಂಧಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹೌದು, ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವ ಮನೋಭಾವ ರಾಹುಲ್ ಗಾಂಧಿ ಪಕ್ಷದ ಹಿರಿಯ ನಾಯಕರ ಮನೋಭಾವ ಅವರನ್ನು ಕೆರಳಿಸಿದೆ. ಯುಪಿಎ 1 ಮತ್ತು ಯುಪಿಎ 2 ರಲ್ಲಿ ಪ್ರಭಾವದ ಖಾತೆಗಳನ್ನೇ ಹೊಂದಿ, ಇದೀಗ ಆಡಳಿತ ವಿರೋಧಿ ಅಲೆ ಇದೆ ಎಂಬ ಸಮೀಕ್ಷೆಗಳ ವರದಿಗಳನ್ನು ನಂಬಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಅಂಶವೂ ಅವರು ಕೆರಳಲು ಕಾರಣ ಎನ್ನಲಾಗಿದೆ. ನಾಯಕರ ಇಂಥ ಮನೋಭಾವ ಜನರಿಗೆ ತಪ್ಪು ಸಂದೇಶ ಕೊಡುತ್ತೆ ಎಂಬುದು ರಾಹುಲ್ ಸಿಟ್ಟಿಗೆ ಕಾರಣ.

ರಾಹುಲ್ ಗಾಂಧಿ ಅವರ ತೋಳೇರಿಸುವ ಈ ಸಿಟ್ಟೇ ಸ್ಪರ್ಧಿಸಲ್ಲ ಎಂದು ಹೇಳುತ್ತಿದ್ದ ಮನೀಷ್ ತಿವಾರಿ, ಶಕೀಲ್ ಅಹ್ಮದ್‌ರಂಥ ಹಿರಿಯ ನಾಯಕರು ಹೆದರಿ ಈಗ ಸ್ಪರ್ಧಿಸಲು ಕಾರಣ ಎಂದು ಮೂಲಗಳು ಹೇಳುತ್ತಿವೆ. ಇದಷ್ಟೇ ಅಲ್ಲ, ಸ್ಪರ್ಧಿಸುವುದಿಲ್ಲ ಎಂದ ಸಾಲು ಸಾಲು ನಾಯಕರೀಗ ರಾಹುಲ್ ಸಿಟ್ಟಿಗೆ ಕರಗಲೇಬೇಕಾದಂಥ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ ಶಿವಗಂಗೆಯಿಂದ ಸ್ಪರ್ಧಿಸಲ್ಲ ಎಂದು ಹೇಳುತ್ತಿರುವ ಚಿದಂಬರಂ ಮೇಲೂ ರಾಹುಲ್ ಸಿಟ್ಟು ಕೆಲಸ ಮಾಡಿದೆ. ಅವರೂ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ.

ಹಿರಿಯರ ಸಿಟ್ಯಾಕೆ?

ಮೂಲಗಳು ಹೇಳುವಂತೆ, ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ರಾಹುಲ್ ಗಾಂಧಿ ನಾಯಕತ್ವದಡಿಯಲ್ಲಿ ಕೆಲಸ ಮಾಡುವುದು ಸಾಧ್ಯವಾಗುತ್ತಿಲ್ಲವಂತೆ. ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿಯೂ ರಾಹುಲ್ ಹಿರಿಯ ನಾಯಕರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ಕಾರಣವೂ ಈ ನಿರ್ಧಾರದಲ್ಲಿದೆ ಎಂದು ಎಐಸಿಸಿ ನಾಯಕರೊಬ್ಬರು ಹೇಳುತ್ತಾರೆ. ಹೀಗಾಗಿ ಅವರು ಚುನಾವಣಾ ರಾಜಕೀಯವನ್ನೇ ಬಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments