Webdunia - Bharat's app for daily news and videos

Install App

ಇಲ್ರೀ, ನನಗೆ ಮದುವೆಯಾಗಿದೆ ಎಂದ ಮೋದಿ, ಇಲ್ಲಿಯವರೆಗೆ ಯಾಕೆ ಹೇಳಿಲ್ಲ ಎಂದ ರಾಹುಲ್ ಗಾಂಧಿ

Webdunia
ಶುಕ್ರವಾರ, 11 ಏಪ್ರಿಲ್ 2014 (17:03 IST)
ಈಗ ನಿವೃತ್ತ ಶಾಲಾ ಶಿಕ್ಷಕಿಯಾಗಿರುವ ಜಶೋಧಾ ಬೆನ್‌ರನ್ನು ಹಲವು ದಶಕಗಳ ಹಿಂದೆ ಮದುವೆಯಾಗಿ, ನಂತರ ಪ್ರತ್ಯೇಕವಾಗಿದ್ದೆ ಎಂದು ತಮ್ಮ ನಾಮಪತ್ರ ಸಲ್ಲಿಸುವ ವೇಳೆ ಒಪ್ಪಿಕೊಂಡಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ವಿರುದ್ಧ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
PTI

ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, "ಅವರು ಎಷ್ಟು ಚುನಾವಣೆಗಳನ್ನು ಎದುರಿಸಿದ್ದಾರೆ ಎಂದು ನಮಗೆ ತಿಳಿದಿಲ್ಲ. ಆದರೆ ಮೊದಲ ಬಾರಿಗೆ ಅವರು ತಾನು ಮದುವೆಯಾಗಿದ್ದೇನೆ" ಎಂದು ಬರೆದಿದ್ದಾರೆ ಎಂದು ಹೇಳಿದರು.

2009 ರಲ್ಲಿ ಸರಕಾರಿ ಆದೇಶದ ಮೇರೆಗೆ ಯುವತಿಯೊಬ್ಬಳ ಕುರಿತು ಪೋಲಿಸರು ಪತ್ತೆದಾರಿಕೆಯನ್ನು ಮಾಡಿದ್ದನ್ನು ಕೂಡ ರಾಹುಲ್ ಉಲ್ಲೇಖಿಸಿದರು.

" ಅವರು ದೆಹಲಿಯಲ್ಲಿ ಮಹಿಳೆಯರನ್ನು ಗೌರವಿಸುವ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಅಫಿಡವಿಟ್‌ನಲ್ಲಿ ಪತ್ನಿಯ ಹೆಸರೇ ಕಾಣಲಿಲ್ಲ. ಮುಖ್ಯಮಂತ್ರಿ ಮತ್ತು ಇಡೀ ಪೊಲೀಸ್ ಪಡೆಯ ಗಮನ ಒಂದು ಮಹಿಳೆಯ ಅನ್ವೇಷಣೆಗೆ ಹೋಗುತ್ತದೆ. ಏನು ನಡೆಯುತ್ತಿದೆ ಎಂಬುದನ್ನು ಮುಖ್ಯಮಂತ್ರಿ ತಿಳಿಯ ಬಯಸಿದ್ದಾರೆ ಎಂಬ ಕಾರಣಕ್ಕೆ ಗುಜರಾತ್ ಪೊಲೀಸರು ಒಂದು ಮಹಿಳೆಯ ಹಿಂದೆ ಓಡುತ್ತಾರೆ. ನಂತರ ಮಹಿಳೆಯರನ್ನು ಗೌರವಿಸಿ ಎಂದು ದೆಹಲಿಯಲ್ಲಿ ಪೋಸ್ಟರ್‌ನ್ನು ಹಾಕಲಾಗುತ್ತಿದೆ. ಇದು ಯಾವ ರೀತಿಯ ಗೌರವ ಎಂದು ಗಾಂಧಿ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿಜೆಪಿಯ ನಿರ್ಮಲಾ ಸೀತಾರಾಮನ್ "ರಾಹುಲ್ ಗಾಂಧಿ ಅಫಿಡವಿಟ್‌ನ್ನು ಸರಿಯಾಗಿ ಓದಬೇಕು" ಎಂದು ಹೇಳಿದ್ದಾರೆ.

ಮೊನ್ನೆ ವಡೋದರಾದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಪತ್ನಿಯ ಹೆಸರನ್ನು ಕೇಳುವ ಕಾಲಮ್‌ಲ್ಲಿ ಜಶೋಧಾ ಬೆನ್ ಎಂದು ಮೊದಲ ಬಾರಿಗೆ ನಮೂದಿಸುವ ಮೂಲಕ ಮೋದಿ ದೇಶವನ್ನು ಆಶ್ಚರ್ಯ ಚಕಿತಗೊಳಿಸಿದ್ದರು.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments