Webdunia - Bharat's app for daily news and videos

Install App

ಇಂದು ಬಿಜೆಪಿ ಐದನೇ ಪಟ್ಟಿಯಲ್ಲಿ ಮೋದಿಯ ಎರಡನೇ ಕ್ಷೇತ್ರ ಪ್ರಕಟ

Webdunia
ಬುಧವಾರ, 19 ಮಾರ್ಚ್ 2014 (19:23 IST)
PR
PR
ಇಂದು ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಐದನೇ ಪಟ್ಟಿ ಪ್ರಕಟವಾಗಲಿದೆ. ಬಿಜೆಪಿ ಕೇಂದ್ರ ಚುನಾವಣೆ ಸಮಿತಿ ಸಭೆಯಲ್ಲಿ ಹಿರಿಯ ನಾಯಕರು, ಕ್ರೀಡಾಪಟುಗಳಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ. ನರೇಂದ್ರ ಮೋದಿ ಅವರು ವಾರಾಣಸಿ ಹೊರತುಪಡಿಸಿ ಇನ್ನೊಂದು ಕ್ಷೇತ್ರದಲ್ಲಿ ಕೂಡ ಸ್ಪರ್ಧಿಸಬೇಕು ಎಂಬ ಒತ್ತಾಯದ ಮೇಲೆ ಮೋದಿಯವರಿಗೆ ಗುಜರಾತಿನಲ್ಲಿ ಎರಡನೇ ಕ್ಷೇತ್ರ ಕೂಡ ಅಂತಿಮವಾಗಲಿದೆ. ಎಲ್.ಕೆ.ಅಡ್ವಾಣಿ ಗುಜರಾತಿನ ಗಾಂಧಿನಗರದಲ್ಲಿ ಸ್ಪರ್ಧಿಸುತ್ತಾರೆಯೇ ಅಥವಾ ಭೂಪಾಲ್‌ಗೆ ಸ್ಥಳಾಂತರಗೊಳ್ಳುತ್ತಾರೆಯೇ ಎನ್ನುವುದು ದೃಢಪಡಲಿದೆ.ಮೋದಿ ಅವರು ಗುಜರಾತಿನ ಅಹ್ಮದಾಬಾದ್ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸುವ ಸಂಭವವಿದೆ. ಇದಕ್ಕೆ ಮುಂಚೆ ಬರೋಡ ಮತ್ತು ಸೂರತ್ ಕ್ಷೇತ್ರಗಳನ್ನು ಸಂಭವನೀಯ ಸೀಟುಗಳಾಗಿ ಮೋದಿ ಅವರಿಗೆ ಸಲಹೆ ಮಾಡಲಾಗಿತ್ತು.

ಬಿಜೆಪಿಯ ಐದನೇ ಪಟ್ಟಿಯಲ್ಲಿ ಗುಜರಾತ್, ರಾಜಸ್ಥಾನ್ ಮತ್ತು ಉತ್ತರಪ್ರದೇಶದ ಉಳಿದ 22 ಸೀಟುಗಳು ಮತ್ತು ಮಧ್ಯಪ್ರದೇಶದ ಐದು ಸೀಟುಗಳಿಗೆ ಅಭ್ಯರ್ಥಿಗಳ ಹೆಸರು ಒಳಗೊಂಡಿರುತ್ತದೆ. ಮಾಜಿ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್, ವಸುಂಧರ ರಾಜೆ ಪುತ್ರ ದುಷ್ಯಂತ್ ಸಿಂಗ್, ಮಾಜಿ ಒಲಿಂಪಿಯನ್ ರಾಜ್ಯವರ್ಥನ್ ರಾಥೋರ್, ಹಿರಿಯ ನಾಯಕ ಜಸ್ವಂತ್ ಸಿಂಗ್, ಹೇಮಮಾಲಿನಿ ಹೆಸರನ್ನು ಪಟ್ಟಿಯಲ್ಲಿ ನಿರ್ಧರಿಸುವ ಸಾಧ್ಯತೆಯಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments