Select Your Language

Notifications

webdunia
webdunia
webdunia
webdunia

ಆದಾನಿ ಗ್ರೂಪ್ ಇನ್, ಆಡ್ವಾಣಿ, ಜಸ್ವಂತ್ ಔಟ್ ಮೋದಿ ಕಮಾಲ್: ರಾಹುಲ್ ಗಾಂಧಿ

ಆದಾನಿ ಗ್ರೂಪ್ ಇನ್, ಆಡ್ವಾಣಿ, ಜಸ್ವಂತ್ ಔಟ್ ಮೋದಿ ಕಮಾಲ್: ರಾಹುಲ್ ಗಾಂಧಿ
ದೋಡಾ , ಶನಿವಾರ, 12 ಏಪ್ರಿಲ್ 2014 (18:32 IST)
PTI
ಗುಜರಾತ್ ರಾಜ್ಯದ ಖ್ಯಾತ ಉದ್ಯಮಿ ಆದಾನಿ ಗ್ರೂಪ್‌ಗೆ ನರೇಂದ್ರ ಮೋದಿ ಎಲ್ಲಾ ಸೌಲಭ್ಯಗಳನ್ನು ನೀಡಿದ್ದಾರೆ. ಆದರೆ, ಬಿಜೆಪಿ ಹಿರಿಯ ನಾಯಕರಾದ ಎಲ್‌.ಕೆ.ಆಡ್ವಾಣಿ ಮತ್ತು ಜಸ್ವಂತ್ ಸಿಂಗ್ ಅವರನ್ನು ಹೊರಹಾಕಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಆಡ್ವಾಣಿಯವರನ್ನು ಹೊರಹಾಕಿದ್ದಾರೆ ಮತ್ತು ಜಸ್ವಂತ್ ಅವರನ್ನು ಪಕ್ಷದಿಂದಲೇ ಹೊರಹಾಕಿದ್ದಾರೆ. ಉದ್ಯಮಿ ಆದಾನಿಯನ್ನು ಒಳಗೆ ಕರೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಗುಲಾಂ ವಬಿ ಆಜಾದ್ ಲೇವಡಿ ಮಾಡಿದ್ದಾರೆ.

ಮೋದಿ ವಿವಾಹದ ಬಗ್ಗೆ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮೋದಿ ಹಲವಾರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಆದರೆ, ನಾಮಪತ್ರದಲ್ಲಿ ಪತ್ನಿಯ ಹೆಸರನ್ನು ದಾಖಲಿಸಿರಲಿಲ್ಲ. ಇದೀಗ ಮೊದಲ ಬಾರಿ ಪತ್ನಿಯ ಹೆಸರನ್ನು ನಮೂದಿಸಿದ್ದಾರೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡುವ ಬಿಜೆಪಿ ಮುಖಂಡರಿಗೆ ನೈತಿಕತೆಯಿದೆಯೇ? ಎಂದು ಪ್ರಶ್ನಿಸಿದ್ದಾರೆ.

Share this Story:

Follow Webdunia kannada