ವೆಂಟಿಲೇಟರ್ ಸಂಜೀವಿನಿಯಲ್ಲ: ಆರೋಗ್ಯ ಸಚಿವರ ಹೇಳಿಕೆ

Webdunia
ಮಂಗಳವಾರ, 13 ಅಕ್ಟೋಬರ್ 2015 (17:04 IST)
ನಿನ್ನೆ ಎರಡನೇ ಮಹಡಿ ಮೇಲಿಂದ ಬಿದ್ದು ಗಾಯಗೊಂಡು ಸಾವನ್ನಪ್ಪಿದ್ದ ಹೆಣ್ಣು ಮಗು ಗಗನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಪ್ರತಿಕ್ರಿಯಿಸಿದ್ದು, ನಗರದ ಯಾವ ಆಸ್ಪತ್ರೆಯಲ್ಲಿಯೂ ಕೂಡ ವೆಂಟಿಲೇಟರ್ ಸಮಸ್ಯೆ ಇಲ್ಲ ಎಂದಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಗರದಲ್ಲಿ ವೆಂಟಿಲೇಟರ್ ಇಲ್ಲದ ಕಾರಣ ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ ನಗರದ ಯಾವುದೇ ಆಸ್ಪತ್ರೆಯಲ್ಲಿಯೂ ಕೂಡ ವೆಂಟಿಲೇಟರ್ ಸಮಸ್ಯೆ ಇಲ್ಲ. ಎಲ್ಲಾ ಆಸ್ಪತ್ರೆಗಳಿಗೂ ಕೂಡ ಅಗತ್ಯಕ್ಕೆ ತಕ್ಕಂತೆ ವೆಂಟಿಲೇಟರ್‌ಗಳನ್ನು ಒದಗಿಸಲಾಗಿದೆ ಎಂದರು.
 
ಇದೇ ವೇಳೆ, ಎರಡು ವರ್ಷದ ಮಗು ಗಗನಾ ಎರಡು ಮಹಡಿಯ ಎತ್ತರದಿಂದ ಕೆಳಗೆ ಬಿದ್ದಿದ್ದ ಪರಿಣಾಮ ತಲೆಗೆ ದೊಡ್ಡ ಪ್ರಮಾಣದ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿದೆ. ಅಲ್ಲದೆ ವೈದ್ಯರು ಬ್ರೇನ್ ಹ್ಯಾಮ್ರೇಜ್ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಮಗುವನ್ನು ಅಂಬುಲನ್ಸ್‌ನಲ್ಲಿ ಇಡುವ ವೇಳೆ ಕೂಡ ವೆಂಟಿಲೇಟರ್‌ನಿಂದಲೇ ಸಂರಕ್ಷಿಸಲಾಗಿತ್ತು. ಆದ ಕಾರಣ ಮಗು ವೆಂಟಿಲೇಟರ್ ಸೌಲಭ್ಯವಿಲ್ಲದ ಕಾರಣ ಸಾವನ್ನಪ್ಪಿದೆ ಎಂಬುದು ಸುಳ್ಳು ಎನ್ನುವ ಮೂಲಕ ಪ್ರಕರಣವನ್ನು ಅಲ್ಲಗಳೆದ ಸಚಿವರು, ವೆಂಟಿಲೇಟರ್ ಎಂಬುದು ಸಂಜೀವಿನಿಯಲ್ಲ ಎಂದೂ ಕೂಡ ಕುಟುಕಿದರು. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೂರು ರಾಷ್ಟ್ರಗಳ ಪ್ರವಾಸ: ಅಮ್ಮಾನ್‌ಗೆ ಆಗಮಿಸಿದ ಪ್ರಧಾನಿ ಮೋದಿ

ದೆಹಲಿ ದಟ್ಟ ಹೊಗೆ, ಮಂಜು: ಇಂದು 40 ವಿಮಾನಗಳು ರದ್ದು

ವಿಳಂಬವಿಲ್ಲ, ನಿರ್ಲಕ್ಷ್ಯವಿಲ್ಲ, ಸಾಬೂಬುಗಳನ್ನು ಹೇಳಲಿಲ್ಲ

ಕಾಂಗ್ರೆಸ್ ಸಮಾವೇಶದಲ್ಲಿ ಮೋದಿ ಸಮಾಧಿ ಬಗ್ಗೆ ಮಾತು: ಸಂಸತ್ ನಲ್ಲಿ ಸೋನಿಯಾ ಕ್ಷಮೆಗೆ ಬಿಜೆಪಿ ಪಟ್ಟು

ವಿಚಾರಣೆ ಬಿಟ್ಟು ದೆಹಲಿಯಿಂದ ತುರ್ತಾಗಿ ರಾಜ್ಯಕ್ಕೆ ವಾಪಾಸ್ಸಾದ ಡಿಕೆ ಶಿವಕುಮಾರ್, ಕಾರಣ ಗೊತ್ತಾ

Show comments