Select Your Language

Notifications

webdunia
webdunia
webdunia
webdunia

ಬಯಕೆಗಳ ಈಡೇರಿಕೆಗೆ ವಾಸ್ತು ಟಿಪ್ಸ್

ಬಯಕೆಗಳ ಈಡೇರಿಕೆಗೆ ವಾಸ್ತು ಟಿಪ್ಸ್
ಚೆನ್ನೈ , ಬುಧವಾರ, 19 ನವೆಂಬರ್ 2014 (17:41 IST)
ನಿಮ್ಮ ಬಯಕೆಗಳ ಈಡೇರಿಕೆಗೆ ವಾಯುವ್ಯ ಕ್ಷೇತ್ರವನ್ನು ಉಪಯೋಗಿಸಿಕೊಳ್ಳಿ.ನೆಲಮನೆ ದುಷ್ಪರಿಣಾಮ ಉಂಟುಮಾಡುತ್ತದೆ.ದೇವತೆಯ ಮೂರ್ತಿಯಾಗಲಿ, ಕ್ರೈಸ್ತರ ಶಿಲುಬೆಯಾಗಲಿ ಮಲಗುವ ಕೋಣೆಯಲ್ಲಿ ಇಡಬಾರದು.ಕಸದ ಬುಟ್ಟಿ ಇಡಲು ಪಾಯಖಾನೆ ಉತ್ತಮ ಸ್ಥಳ.
 
ಸಾಕುಪ್ರಾಣಿಗಳು ಋಣಾತ್ಮಕ ಶಕ್ತಿಯನ್ನು ನಾಶಮಾಡುತ್ತವೆ.ಕೆಂಪು ಬಣ್ಣದ ಮೇಣದ ಬತ್ತಿಗಳು ಸಂಬಂಧವನ್ನು ಬಲಪಡಿಸುತ್ತವೆ.ಕಿಡಕಿಗಳು ಯಾವಾಗಲು ಹೊರಗೆ ತೆರೆಯುವಂತಿರಬೇಕು.ಮಕ್ಕಳ ಸೃಜನಾತ್ಮಕತೆಯನ್ನು ಹೆಚ್ಚಿಸಲು ಲೋಹದಿಂದ ಮಾಡಿದ ಗೋಲಾಕಾರದ ಗಡಿಯಾರವನ್ನು ಮಕ್ಕಳ ಕೋಣೆಯಲ್ಲಿ ಪಶ್ಚಿಮಕ್ಕೆ ಇಡಬೇಕು.
 
ಯಾವುದೇ ಕಾರಣಕ್ಕೂ ಡ್ರಾಗನ ನನ್ನು ನಿಮ್ಮ ಮಲಗುವ ಕೋಣೆಯಲ್ಲಿ  ಇಡಬೇಡಿ.ಅಳುವ ಹಾಗೂ ಮುಖ ಸುಕ್ಕುಗಟ್ಟಿದ ವ್ಯಕ್ತಿಯ ಭಾವಚಿತ್ರವನ್ನು ಮನೆಯಲ್ಲಿ ಇಡಬೇಡಿ.ದೂರವಾಣಿಯ ಮೇಲೆ ಸ್ಪಟಿಕ ಚೆಂಡು ಇಡುವುದರಿಂದ ಶುಭವಾರ್ತೆ ಕೇಳಬಹುದು.ಹೂತೋಟದ ಆಗ್ನೇಯ ವಲಯದಲ್ಲಿ ಕಿತ್ತಳೆ ಗಿಡವನ್ನು ಬೆಳೆಸುವುದರಿಂದ ಮನೆಯಲ್ಲಿ ಸಿರಿ ಸಂಪತ್ತು ಹೆಚ್ಚುವದು.ಮೆಟ್ಟಿಲುಗಳ ಕೆಳಗೆ ನೀರು ಮತ್ತು ಮೂಲಧಾತು ಇಡಬೇಡಿರಿ.
 
ಮುಖದ್ವಾರದ ಎದುರು ಗಡಿಯಾರ ಹಾಕುವುದು ಅಶುಭ ಲಕ್ಷಣ.4, 5, 23, ಸಂಖ್ಯೆಗಳನ್ನು ಅಶುಭ ಸಂಖ್ಯೆ ಎಂದು ಪರಿಗಣಿಸಲಾಗಿದೆ.ಆಮೆ ಧೀರ್ಘಾಯುಷ್ಯದ ಸಂಕೇತವಾಗಿದೆ.ಮನೆಯ ಪ್ರತಿಯೊಂದು ಭಾಗದಲ್ಲಿ 5 ಮೂಲಧಾತುಗಳ ಸಮತೋಲನ ಕಾಪಾಡಿಕೊಂಡರೆ ಶಾಂತಿ ನೆಲಸುವುದು.
ಮನೆಯ ಉತ್ತರ ವಲಯದಲ್ಲಿ ಕಮಲ ಪುಷ್ಪವನ್ನು ನೀರಿನಲ್ಲಿ ಇಡುವುದರಿಂದ ಸಿರಿಸಂಪತ್ತನ್ನು ಅಹ್ವಾನಿಸಬಹುದು.ದಕ್ಷಿಣ ಭಾಗದಲ್ಲಿ ಸ್ನಾನ ಗೃಹವಿದ್ದರೆ ಕುಟುಂಬದ ಹೆಸರಿಗೆ ಕಳಂಕ ಬರುವದು.
 

Share this Story:

Follow Webdunia kannada