Select Your Language

Notifications

webdunia
webdunia
webdunia
webdunia

ತುಲಾ ಲಗ್ನದವರಿಗೆ ಶನಿ,ರಾಹು,ಕೇತು ಫಲ

ತುಲಾ ಲಗ್ನದವರಿಗೆ ಶನಿ,ರಾಹು,ಕೇತು ಫಲ
ಚೆನ್ನೈ , ಶುಕ್ರವಾರ, 21 ನವೆಂಬರ್ 2014 (16:12 IST)
ಶನಿ:ತುಲಾ ಲಗ್ನದಲ್ಲಿ ಜನಿಸಿದವರಿಗೆ ಶನಿ 4ಮತ್ತು 5ನೇ ಸ್ಥಾನಗಳಿಗೆ ಅಧಿಪತಿಯಾಗಿರುತ್ತಾನೆ.ಆಯುಷ್ಯಕಾರಕನಾದ ಇವನು ತುಲಾ ರಾಶಿಯಲ್ಲಿ ಉಚ್ಛಸ್ಥಾನ ಪಡೆಯುತ್ತಾನೆ.ಹೀಗಿದ್ದಾಗ ಆಯುಸ್ಸು ವೃದ್ಧಿಯಾಗುತ್ತದೆ.
 
ಲಗ್ನದಲ್ಲಿರುವ ಶನಿಯೊಂದಿಗೆ ಶುಕ್ರ,ಬುಧ ಇವರು ಸೇರಿದರೆ ಮನೆ,ವಾಹನ ಮುಂತಾದ ಭಾಗ್ಯಗಳು ಜಾತಕರಿಗೆ ಬಂದು ಸೇರುತ್ತದೆ.ವಿದ್ಯೆಯಲ್ಲಿ ಉನ್ನತ ಸ್ಥಾನ ಪಡೆದು ಉದ್ಯೋಗದಲ್ಲಿ ಉತ್ತಮ ಸ್ಥಾನ ದೊರೆಯುತ್ತದೆ.ತನಗಿಂತ ಕೆಳಮಟ್ಟದವರಲ್ಲಿ ಅನೇಕ ರೀತಿಯಲ್ಲಿ ಒಳ್ಳೆಯದಾಗುತ್ತದೆ.ತಾಯಿ ಬಂಧುಗಳ ಮೂಲಕ ಒಳ್ಳೆಯ ನೆರವು ದೊರೆಯುತ್ತದೆ.
 
ಆದರೆ ಸೂರ್ಯ,ಚಂದ್ರ,ರಾಹು,ಕೇತು ಈ ಗ್ರಹಗಳು ಶುಕ್ರನೊಂದಿಗೆ ಸೇರುವುದು ಒಳ್ಳೆಯದಲ್ಲ.ಇದರಿಂದ ಉದ್ದಿಮೆಯಲ್ಲಿ ಸಮಸ್ಯೆಗಳು ಹಣದ ಮುಗ್ಗಟ್ಟು,ಅಫಘಾತ ಮುಂತಾದ ಕೆಟ್ಟ ಫಲಗಳು ಎದುರಾಗುತ್ತವೆ.
 
ಅಲ್ಲದೇ 3,6,9ಈ ಸ್ಥಾನಗಳಲ್ಲಿ ಶನಿ ಇದ್ದರೆ ತನ್ನ ದೆಶೆಯಲ್ಲಿ ಒಳ್ಳೆಯ ಫಲಗಳನ್ನು ನೀಡುತ್ತಾನೆ.ಶನಿ 8ನೇ ಸ್ಥಾನದಲ್ಲಿದ್ದರೂ ಗುರು ಮುಂತಾದ ದೃಷ್ಟಿ ಪಡೆದರೆ ದೀರ್ಘಾಯುಸ್ಸು ಲಭಿಸುತ್ತದೆ.
 
ಶನಿ 4,5ಈ ಸ್ಥಾನಗಳಲ್ಲಿ ಆಧಿಪತ್ಯ ಪಡೆದರೆ ಒಳ್ಳೆಯ ಫಲ ದೊರೆಯುತ್ತದೆ.2ನೇ ಸ್ಥಾನವಾದ ಕುಟುಂಬ ಸ್ಥಾನದಲ್ಲಿ ಶನಿ ಇರುವುದು ಒಳ್ಳೆಯದಲ್ಲ.7ನೇ ಸ್ಥಾನದಲ್ಲಿ ಶನಿ ನೀಚನಾದರೆ ಮಡದಿಯ ವಿಷಯದಲ್ಲಿ ಭಿನ್ನಾಭಿಪ್ರಾಯವಿರುತ್ತದೆ.ಕಳತ್ರ ದೋಷವನ್ನುಂಟು ಮಾಡುತ್ತಾನೆ.10ನೇ ಸ್ಥಾನದಲ್ಲಿ ಶನಿ ಇದ್ದರೆ ಜೀವನ ಸ್ಥಾನದಲ್ಲಿ ಒಳ್ಳೆಯ ಪ್ರಗತಿ ಇರುವುದಿಲ್ಲ.11ನೇ ಸ್ಥಾನದಲ್ಲಿ ಶನಿ ಶತ್ರುವಾದರೆ ವರಮಾನದಲ್ಲಿ ಅಡ್ಡಿಯುಂಟಾಗುತ್ತದೆ.
 
ರಾಹು,ಕೇತು:ತುಲಾ ಲಗ್ನ ಜಾತಕರಿಗೆ ರಾಹು,ಕೇತು ಲಗ್ನದಲ್ಲಿದ್ದರೆ ಶುಭ ಫಲಗಳಿರುವುದಿಲ್ಲ.ಕೈಗೊಂಡ ಕೆಲಸ ಮುಗಿಯದೆ,ತಡವುಂಟಾಗುತ್ತದೆ.ಶನಿ,ಶುಕ್ರ,ಬುಧ ಇವರು ಸೇರಿದರೆ ದೇಹಾರೋಗ್ಯವಿರುತ್ತದೆ.ಕುಟುಂಬದಲ್ಲಿ ಪ್ರಗತಿಯುಂಟಾಗುತ್ತದೆ.
 
ಲಗ್ನದಲ್ಲಿರುವ ಕೇತುವಿನೊಂದಿಗೆ ಶನಿ,ಶುಕ್ರ,ಬುಧ ಈ ಗ್ರಹಗಳು ಸೇರಿದರೆ ಮೇಲ್ಕಂಡ ಶುಭಫಲಗಳು ದೊರೆಯುತ್ತವೆ.ಉದ್ಯಮದಲ್ಲಿ ಪ್ರಗತಿ.ಲಗ್ನ ರಾಹುವಿನೊಂದಿಗೆ,ಶನಿ,ಸೂರ್ಯ,ಚಂದ್ರ ಇವರು ಸೇರಿದರೆ ವಿದ್ಯೆಯ ಪ್ರಗತಿಯಲ್ಲಿ ಹಾನಿ,ಹಣದ ಮುಗ್ಗಟ್ಟು,ವಿರೋಧಿಗಳಿಂದ ತೊಂದರೆ,ಕೆಟ್ಟ ಫಲಗಳಿರುತ್ತವೆ.
ಇದೇ ರೀತಿ ಕೇತುವಿನೊಂದಿಗೆ ಮೇಲ್ಕಂಡ ಗ್ರಹಗಳು ಸೇರಿದರೆ ದೆವ್ವ,ಪಿಶಾಚಿಗಳ ಪೀಡೆ,ವಿದ್ಯಾ ಹಾನಿ,ಕೈಗೊಂಡ ಕೆಲಸದಲ್ಲಿ ವಿಘ್ನ ಮುಂತಾದ ಅಶುಭ ಫಲ ಎದುರಾಗುತ್ತದೆ.
ಅಲ್ಲದೆ ರಾಹು,ಕೇತು 2ನೇ ಸ್ಥಾನದಲ್ಲಿ ಉಚ್ಛಸ್ಥಾನ ಪಡೆದರೆ ಕುಟುಂಬದಲ್ಲಿ ಸುಭಿಕ್ಷೆ,ಭೂಮಿ,ವಾಹನ ಮುಂತಾದ ಸ್ವತ್ತುಗಳು ಸೇರುತ್ತವೆ.3,6ಈ ಸ್ಥಾನಗಳಲ್ಲಿ ನಿಂತರೆ ರಾಜಯೋಗಗಳನ್ನು ನೀಡುತ್ತಾರೆ.ರಾಹು 9ನೇ ಸ್ಥಾನದಲ್ಲಿದ್ದರೆ ಯೋಗಫಲಗಳುಂಟಾಗುತ್ತದೆ.12ನೇ ಸ್ಥಾನದಲ್ಲಿ ರಾಹು ಇದ್ದರೆ ಸಾಧಾರಣ ಫಲಗಳು ದೊರೆಯುತ್ತವೆ.
 

Share this Story:

Follow Webdunia kannada