ಬೆಂಗಳೂರು : ಹೊರಗುತ್ತಿಗೆ ನೌಕರಿಯಲ್ಲೂ ಮೀಸಲಾತಿ ಜಾರಿಗೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರಿಗೆ ಗುತ್ತಿಗೆ ನೌಕರಿಯನ್ನ ಖಾಯಂ ನೇಮಕಾತಿ ಮಾಡುವ ಬಗ್ಗೆ ಕಾಂಗ್ರೆಸ್ ಸರ್ಕಾರದ ನಿರ್ಧಾರವೇನು? ಎಂಬ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ ಸರ್ಕಾರಿ ಹುದ್ದೆ 7 ಲಕ್ಷಕ್ಕೂ ಹೆಚ್ಚಿದೆ.
ಐದು ಲಕ್ಷಕ್ಕೂ ಹೆಚ್ಚು ತುಂಬಿದೆ. ಎರಡೂವರೆ ಲಕ್ಷ ಖಾಲಿ ಇದೆ. ಅದಕ್ಕಾಗಿ ಹೊರಗುತ್ತಿಗೆ ಮಾಡಲಾಗಿದೆ ಎಂದು ಹೇಳಿದರು. ಇದಕ್ಕೆ ಕಡಿವಾಣ ಹಾಕಬೇಕಿದ್ರೆ, ಖಾಲಿ ಇರೋ ಹುದ್ದೆ ತುಂಬುವುದು. ಕಾಂಟ್ರಾಕ್ಟ್ ಬೇಸಿಸ್ ತುಂಬುವಾಗ ಮೀಸಲಾತಿ ಇಲ್ಲ. ರಿಸರ್ವೇಷನ್ ಇಲ್ಲದಿದ್ರೆ, ಸಾಮಾಜಿಕ ನ್ಯಾಯ ಇರಲ್ಲ.
ನಮ್ಮ ಪ್ರಣಾಳಿಕೆಯಲ್ಲಿ ಕೂಡ ಖಾಲಿ ಹುದ್ದೆ ಭರ್ತಿ ಮಾಡೋದಾಗಿ ಹೇಳಿದ್ದೇವೆ. ಹೆಚ್ಚಾಗಿ ಶಿಕ್ಷಕರು, ಪೊಲೀಸ್, ಆರೋಗ್ಯ ಇಲಾಖೆಯಲ್ಲಿ ಖಾಲಿ ಇವೆ. ಅದನ್ನ ಹಂತ ಹಂತವಾಗಿ ತುಂಬುತ್ತೇವೆ ಎಂದು ಭರವಸೆ ನೀಡಿದರು. ಸರ್ಕಾರಿ ನೇಮಕಾತಿ ಆಗುವವರೆಗೂ ಹೊರಗುತ್ತಿಗೆಗೂ ಮೀಸಲಾತಿ ತರುವ ಚಿಂತನೆ ಇದೆ.