Webdunia - Bharat's app for daily news and videos

Install App

ಮೂತ್ರದಿಂದ ಸ್ಮಾರ್ಟ್‌ಫೋನ್ ಚಾರ್ಜ್ ಮಾಡಿ!

Webdunia
ಗುರುವಾರ, 30 ಅಕ್ಟೋಬರ್ 2014 (12:13 IST)
ಸ್ಮಾರ್ಟ್‌ಫೋನ್ ಬಳಕೆದಾರರ ದೊಡ್ಡ ತಲೆಬೇನೆ ಎಂದರೆ ಪದೇ ಪದೇ ಮೊಬೈಲ್ ಬ್ಯಾಟರಿ ಚಾರ್ಜ್ ಕಡಿಮೆಯಾಗುವುದು. ನೀವು ಕೂಡ ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದರೆ ಇದೇ ತೊಂದರೆಯನ್ನು ಅನುಭವಿಸುತ್ತಿರುವುದರಲ್ಲಿ ಅನುಮಾನವಿಲ್ಲ. ಈಗ ಆ ಚಿಂತೆ ಬಿಡಿ. ನಿಮಗಾಗಿ ಒಳ್ಳೆಯ ಸುದ್ದಿಯೊಂದು ಬಂದಿದೆ. ಅದೇನಂತದ್ದು ಅಂತೀರಾ? ಮುಂದೆ ಓದಿ...

ವಿಜ್ಞಾನಿಗಳು ಈ ಸಮಸ್ಯೆಗೊಂದು ಅದ್ಭುತ ಪರಿಹಾರವನ್ನು ಕಂಡು ಹಿಡಿದಿದ್ದಾರೆ. ಈಗ ನೀವು ನಿಮ್ಮ ಮೂತ್ರದಿಂದ ಸ್ಮಾರ್ಟ್‌ಫೋನ್‌ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು. ಈ ಸಂಗತಿ ಕೇಳಲು ವಿಚಿತ್ರವೆನಿಸುತ್ತದೆ. ಆದರೆ ಶೀಘ್ರದಲ್ಲೇ ಈ ತಂತ್ರಜ್ಞಾನ ನೀವು ಮುಂದೆ ಬರಲಿದೆ.
 
ಜಗತ್ತಿನ ಅತಿ ಶ್ರೀಮಂತೋದ್ಯಮಿಯಾದ ಬಿಲ್ ಗೇಟ್ಸ್ ಅವರ ಸಂಸ್ಥೆ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಯುವ ದಿಶೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರ ಸಫಲ ಪರೀಕ್ಷೆಯೂ ನಡೆದಿದೆ. ಮೂತ್ರದಲ್ಲಿ ಬರುವ ಮೈಕ್ರೋಬೊಯ್ಲ್ ಸೆಲ್ಸ್ ಬಳಸಿ ಒಂದು ಮೊಬೈಲ್ ಫೋನ್ ಚಾರ್ಜ್ ಮಾಡಲು ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಈ ವಿಧಾನವನ್ನು 'ಯುರಿನ್ ಟ್ರಿಸಿಟಿ' ಎಂದು ಕರೆಯಲಾಗುತ್ತಿದೆ. 
 
ಯುರಿನ್ ಟ್ರಿಸಿಟಿ ವಿಧಾನದಲ್ಲಿ ಮಾನವ ದೇಹದಿಂದ ಹೊರಸೂಸುವ ತ್ಯಾಜ್ಯ ಉತ್ಪನ್ನಗಳಿಂದ ಶಕ್ತಿಯನ್ನು ( ಎನರ್ಜಿ) ಉತ್ಪಾದಿಸಲಾಗುತ್ತದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments