Select Your Language

Notifications

webdunia
webdunia
webdunia
webdunia

ಈಕೆ ನಾಯಿಯ ಆಹಾರ ತಿನ್ನುತ್ತಾಳೆ

ಈಕೆ  ನಾಯಿಯ ಆಹಾರ ತಿನ್ನುತ್ತಾಳೆ
ವಾಷಿಂಗ್ಟನ್‌ , ಶುಕ್ರವಾರ, 11 ಜುಲೈ 2014 (16:24 IST)
ಯಾವುದಾದರು ಮನುಷ್ಯ ಈ ತರಹದ ತಿಂಡಿ ತಿನ್ನುತ್ತಾನಾ? ಅಮೆರಿಕಾದ ವಾಷಿಂಗ್ಟನ್‌‌ನಲ್ಲಿರುವ ಮಹಿಳೆ ಮನುಷ್ಯರು ತಿನ್ನು ತಿಂಡಿಯನ್ನಲ್ಲ ಹೊರತು ಪ್ರಾಣಿಗಳು ತಿನ್ನುವ ತಿಂಡಿ ತಿನ್ನುತ್ತಾಳೆ. 
 
ಡೇಲಿ ಮೇಲ್‌ನಲ್ಲಿ ಪ್ರಕಟವಾದ ಸುದ್ದಿಯ ಅನುಸಾರ, ಡಾರೋಥಿ ಹಂಟರ್‌‌‌ ಹೆಸರಿನ  ಮಹಿಳೆಯ ಅಂಗಡಿಯೊಂದಿದೆ. ಇದರಲ್ಲಿ ಈಕೆ ನಾಯಿ ಮತ್ತು ಬೆಕ್ಕುಗಳ ಆಹಾರ ಮಾರಾಟ ಮಾಡುತ್ತಾಳೆ. ಈಕೆ ಪ್ರಾಣಿಗಳ ತಿಂಡಿ ಆರೋಗ್ಯಪೂರ್ಣವಾಗಿರುತ್ತದೆ ಇದನ್ನು ಮನುಷ್ಯರು ಕೂಡ ತಿನ್ನಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಲು ಬಯಸುತ್ತಾಳೆ. ಇದಕ್ಕಾಗಿ ಪ್ರಾಣಿಗಳ ಆಹಾರ ತಿನ್ನಲು ಚಿಂತಿಸಿದಳು. ಡಾರೋಥಿ ನಾಯಿ ಮತ್ತು ಬೆಕ್ಕಿಗೆ ತಿನಿಸುವ ಸ್ನ್ಯಾಕ್ಸ್‌ ಮತ್ತು ಡ್ರೈ ಫ್ರೊಜನ್‌ ಚಿಕನ್‌‌  ಒಂದು ತಿಂಗಳಿನವರೆಗೆ ತಿಂದಿದ್ದಾಳೆ .  
 
ಈ ರೀತಿ ಪ್ರಾಣಿಗಳ ಆಹಾರ ತಿಂದ ಈಕೆಗೆ ಏನೂ ಆಗಿಲ್ಲ ಮತ್ತು ಈಕೆ ಆರೋಗ್ಯವಾಗಿದ್ದಾಳೆ. ಈ ತರಹದ ತಿಂಡಿ ತಿನ್ನುವುದರಿಂದ ಸ್ವತಃ ತನ್ನನ್ನು ತಾನೆ ಆರೋಗ್ಯಪೂರ್ಣ ಎಂದುಕೊಳ್ಳುತ್ತಾಳೆ. ಈಕೆಗೆ ಅಡುಗೆ ಮಾಡಲು ಸಮಯ ಸಿಗುವುದಿಲ್ಲವಂತೆ ಅದಕ್ಕಾಗಿ ನಾಯಿಗಳಿಗೆ ನೀಡುವ ಸ್ನ್ಯಾಕ್ಸ್‌ ಈಕೆ ತಿನ್ನುತ್ತಾಳೆ. 

Share this Story:

Follow Webdunia kannada