Select Your Language

Notifications

webdunia
webdunia
webdunia
webdunia

ನಿಮ್ಮ ಗುಪ್ತಾಂಗದ ಸೈಜ್‌ ಹೆಚ್ಚಾಗಬೇಕಾ ?

ನಿಮ್ಮ ಗುಪ್ತಾಂಗದ ಸೈಜ್‌ ಹೆಚ್ಚಾಗಬೇಕಾ ?
ಚೆನ್ನೈ , ಶನಿವಾರ, 28 ಜೂನ್ 2014 (17:00 IST)
ಸ್ಮೋಕಿಂಗ್‌‌ ಮಾಡುವುದನ್ನು ಬಿಟ್ಟು ಬಿಡಿ: ಸಿಗರೇಟಿನ ಸಣ್ಣ ಸಣ್ಣ ಕಣಗಳು ನರಗಳನ್ನು ಬ್ಲಾಕ್‌ ಮಾಡುತ್ತವೆ. ಇದರಿಂದ ಶರೀರದಲ್ಲಿ ರಕ್ತ ಸಂಚಲನೆ ನಿಲ್ಲುತ್ತದೆ ಮತ್ತು ಶರೀರ ಸರಿಯಾದ ರೀತಿಯಲ್ಲಿ ವಿಕಸಿತವಾಗುವುದಿಲ್ಲ. ಇದು ಲಿಂಗದ ಮೇಲೂ ಕೂಡ ಪರಿಣಾಮ ಬೀರುತ್ತದೆ. ಲಿಂಗದಡೆಗೆ ರಕ್ತಸಂಚಾರ ನಿಂತರೆ ಲೈಂಗಿಕ ಕ್ರಿಯೆ ಸರಿಯಾಗಿ ಆಗುವುದಿಲ್ಲ, ಆದ್ದರಿಂದ ಸಿಗರೇಟು ಸೇದುವುದನ್ನು ಬಿಟ್ಟು ಬಿಡಿ. 
 
ನಿಯಮಿತವಾಗಿ ವ್ಯಾಯಾಮ ಮಾಡಿ: ಕೇವಲ ಮಸಲ್ಸ್‌‌ ಮತ್ತು ತೂಕ ಇಳಿಕೆಗೆ ಜಿಮ್‌‌‌‌ಗೆ ಹೋಗುವುದಲ್ಲ. ನೀವು ನಿಮ್ಮ ಲಿಂಗದ ಸೈಜ್‌ ದೊಡ್ಡದಾಗಿ ಮಾಡಿಕೊಳ್ಳಬೇಕೆಂದರೂ ಕೂಡ ಜಿಮ್‌‌ಗೆ ಹೋಗಿ. ಇದರಿಂದ ನರಗಳಲ್ಲಿನ ರಸ್ತೆ ಸುಗಮವಾಗುತ್ತದೆ ಮತ್ತು ರಕ್ತ ಸಂಚಾರ ಸರಿಯಾಗಿ ಆಗಿ ಲಿಂಗ ದಪ್ಪವಾಗಲು ಸಹಾಯ ಮಾಡುತ್ತದೆ.  
  
ಹೆಚ್ಚು ತರಕಾರಿ ಮತ್ತು ಹಣ್ಣುಗಳನ್ನು ತಿನ್ನಿ: ತರಕಾರಿ ಮತ್ತು ಹಣ್ಣುಗಳಲ್ಲಿ ಆಂಟಿ-ಆಕ್ಸಿಡೆಂಟ್‌ ಹೆಚ್ಚಿಗೆ ಇರುತ್ತವೆ. ಇದು ಕಂಪಾವುಂಡ್‌ ನರಗಳಲ್ಲಿರುವ ರೆಡಿಕಲ್ಸ್‌‌‌ ವಿರುದ್ದ ಹೋರಾಡುತ್ತವೆ ಮತ್ತು ನರಗಳನ್ನು ಬಲಿಷ್ಠವನ್ನಾಗಿಸುತ್ತದೆ. ಇದರಿಂದ ನಿಮ್ಮ ಲಿಂಗದ ನರಗಳು ಕೂಡ ಬಲಿಷ್ಠವಾಗುತ್ತವೆ. 
 
ಹೊಟ್ಟೆಯ ದಪ್ಪ ಕರಗಿಸಿ: ಹೊಟ್ಟೆ ದೊಡ್ಡದಾದರೆ ಲಿಂಗ ಚಿಕ್ಕದ್ದಾಗಿ ಕಾಣುತ್ತದೆ. ಒಂದು ವೇಳೆ ನಿಮ್ಮ ಲಿಂಗ ದೊಡ್ಡದಾಗಿದ್ದರೂ ಕೂಡ ನಿಮ್ಮ ಹೊಟ್ಟೆಯ ಎದುರು ಅದು ಚಿಕ್ಕದ್ದಾಗಿ ಕಾಣುತ್ತದೆ. ಇದಕ್ಕಾಗಿ ಹೊಟ್ಟೆಯ ದಪ್ಪ ಕಡಿಮೆ ಮಾಡಿಕೊಳ್ಳಿ.

Share this Story:

Follow Webdunia kannada