Webdunia - Bharat's app for daily news and videos

Install App

ಪುರುಷರಲ್ಲಿ ಲೈಂಗಿಕ ಸಮಸ್ಯೆಗೆ ಕಾರಣಗಳೇನು?

Webdunia
ಭಾನುವಾರ, 30 ನವೆಂಬರ್ 2014 (14:35 IST)
ಲೈಂಗಿಕ ಸಮಸ್ಯೆ ಅಥವಾ ಲೈಂಗಿಕ ನಿಷ್ಕ್ರಿಯತೆ  ಲೈಂಗಿಕ ಸ್ಪಂದನೆ ಚಕ್ರದಲ್ಲಿ ಯಾವುದೇ ಹಂತದಲ್ಲಿ ಕಾಣುವ ಸಮಸ್ಯೆಯನ್ನು ಉಲ್ಲೇಖಿಸುತ್ತದೆ. ಲೈಂಗಿಕ ಚಟುವಟಿಕೆಯಿಂದ ದಂಪತಿಗೆ ತೃಪ್ತಿಯ ಅನುಭವ ಪಡೆಯುವುದು ಇದರಿಂದ ಅಸಾಧ್ಯವಾಗುತ್ತದೆ. ಲೈಂಗಿಕ ನಿಷ್ಕ್ರಿಯತೆ ಸಾಮಾನ್ಯವಾದ ಸಮಸ್ಯೆಯಾಗಿದೆ. ಲೈಂಗಿಕ ಸಲಹೆ ಸಂಸ್ಥೆಯ ಪ್ರಕಾರ, 10 ರಲ್ಲಿ ಒಬ್ಬ ಪುರುಷ ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಾನೆ.

ಆದರೆ ಅನೇಕ ಜನರು ಈ ವಿಷಯವನ್ನು ಚರ್ಚಿಸಲು ಹಿಂಜರಿಯುತ್ತಾರೆ. ಅದೃಷ್ಟವಶಾತ್ ಬಹುತೇಕ ಲೈಂಗಿಕ ನಿಷ್ಕ್ರಿಯತೆ ಪ್ರಕರಣಗಳನ್ನು ಗುಣಪಡಿಸಬಹುದು. ಆದ್ದರಿಂದ ನಿಮ್ಮ ವೈದ್ಯರಲ್ಲಿ ಅಥವಾ ಸಂಗಾತಿಯಲ್ಲಿ ಈ ವಿಷಯವನ್ನು ಮುಚ್ಚುಮರೆಯಿಲ್ಲದೇ ಹೇಳುವುದು ಅವಶ್ಯಕ.
 
ಲೈಂಗಿಕ ನಿಷ್ಕ್ರಿಯತೆ ದೈಹಿಕ ಅಥವಾ ಮಾನಸಿಕ ಸಮಸ್ಯೆಗಳಿಂದ ಹುಟ್ಟುತ್ತದೆ. ದೈಹಿಕ ಕಾರಣಗಳು: ಅನೇಕ ದೈಹಿಕ ಅಥವಾ ವೈದ್ಯಕೀಯ ಸ್ಥಿತಿಗಳು ಲೈಂಗಿಕ ಸುಖಕ್ಕೆ ಸಮಸ್ಯೆಗಳನ್ನು ಉಂಟುಮಾಡಬಹುದು. ಇವುಗಳಲ್ಲಿ ಮಧುಮೇಹ, ಹೃದಯ ಮತ್ತು ರಕ್ತನಾಳದ ಕಾಯಿಲೆಗಳು, ನರಗಳ ಅವ್ಯವಸ್ಥೆ, ಹಾರ್ಮೋನ್ ಅಸಮತೋಲನ, ಮೂತ್ರಪಿಂಡ ಅಥವಾ ಲಿವರ್ ವೈಫಲ್ಯದ ತೀವ್ರ ಕಾಯಿಲೆಗಳು, ಮದ್ಯಪಾನ ಮತ್ತು ಮಾದಕವಸ್ತು ಸೇವನೆ ಸೇರಿವೆ.

ಇದರ ಜೊತೆಗೆ ಕೆಲವು ಖಿನ್ನತೆನಿವಾರಕ ಔಷಧಿಗಳು ಸೇರಿದಂತೆ ಔಷಧಿಗಳ ಕೆಲವು ಅಡ್ಡಪರಿಣಾಮಗಳು ಲೈಂಗಿಕ ಆಸಕ್ತಿ ಮತ್ತು ನಿರ್ವಹಣೆಗೆ ತೊಡಕನ್ನುಂಟುಮಾಡುತ್ತದೆ.
 
ಮಾನಸಿಕ ಕಾರಣಗಳು: ಇವು ಕೆಲಸಕ್ಕೆ ಸಂಬಂಧಿಸಿದ ಒತ್ತಡ ಮತ್ತು ಆತಂಕ, ಲೈಂಗಿಕ ನಿರ್ವಹಣೆಯ ಬಗ್ಗೆ ಕಳವಳ, ವೈವಾಹಿಕ ಸಮಸ್ಯೆಗಳು, ಖಿನ್ನತೆ, ಅಪರಾಧಿ ಮನೋಭಾವ ಮತ್ತು ಹಿಂದಿನ ಲೈಂಗಿಕ ಆಘಾತದ ಪರಿಣಾಮಗಳು ಸೇರಿವೆ. ಇದರ ಜೊತೆಗೆ ಕೆಲವು ಖಿನ್ನತೆನಿವಾರಕ ಔಷಧಿಗಳು ಸೇರಿದಂತೆ ಔಷಧಿಗಳ ಕೆಲವು ಅಡ್ಡಪರಿಣಾಮಗಳು ಲೈಂಗಿಕ ಆಸಕ್ತಿ ಮತ್ತು ನಿರ್ವಹಣೆಗೆ ತೊಡಕನ್ನುಂಟುಮಾಡುತ್ತದೆ.
 
 ಲೈಂಗಿಕ ಸಮಸ್ಯೆಗಳಿಗೆ ಯಾರು ಗುರಿಯಾಗುತ್ತಾರೆ?
ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಲೈಂಗಿಕ ಸಮಸ್ಯೆ ಕಾಡುತ್ತದೆ. ವಯಸ್ಸಾದವರಿಗೆ ಲೈಂಗಿಕ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತದೆ. ವೃದ್ಧಾಪ್ಯದಿಂದ ಆರೋಗ್ಯದ ಸಮಸ್ಯೆಗಳು ಇದಕ್ಕೆ ಕಾರಣ.
 ಮುಂದಿನ ಪುಟ ನೋಡಿ 
 
 

ಪುರುಷರಿಗೆ ಲೈಂಗಿಕ ಸಮಸ್ಯೆಗಳು ಹೇಗೆ ಕಾಡುತ್ತದೆ?
ಪುರುಷರಲ್ಲಿ ಸಾಮಾನ್ಯವಾದ ಲೈಂಗಿಕ ಸಮಸ್ಯೆಗಳು ಸ್ಖಲನ ಸಮಸ್ಯೆಗಳು, ನಿಮಿರುವಿಕೆ ದೋಷ ಮತ್ತು ಲೈಂಗಿಕ ಆಸಕ್ತಿ ಕುಂಠಿತ.
 
ಸ್ಖಲನ ಸಮಸ್ಯೆಗಳು ಯಾವುದು?
ಶೀಘ್ರ ಸ್ಖಲನ:  ಸಂಭೋಗಕ್ಕೆ ಮುನ್ನವೇ ಉಂಟಾಗುವ ಸ್ಖಲನಕ್ಕೆ ಶೀಘ್ರಸ್ಖಲನ ಎನ್ನುತ್ತಾರೆ.
ಕುಂಠಿತ ಸ್ಖಲನ: ನಿಧಾನವಾದ ಸ್ಖಲನ ಉಂಟಾಗುವುದು

 
ಹಿಂಚಲನ ಸ್ಖಲನ:  ಕಾಮೋದ್ರೇಕದ ಸಂದರ್ಭದಲ್ಲಿ ಸ್ಖಲನವು ನಾಳದ ಮೂಲಕ ಹೊರಕ್ಕೆ ಬರುವ ಬದಲಿಗೆ ಕೋಶದೊಳಕ್ಕೆ ಸೇರುತ್ತದೆ. ಕೆಲವು ಪ್ರಕರಣಗಳಲ್ಲಿ ಶೀಘ್ರ ಮತ್ತು ಕುಂಠಿತ ಸ್ಖಲವು ಸಂಗಾತಿಯ ಬಗ್ಗೆ ಕಡಿಮೆ ಆಕರ್ಷಣೆ, ಹಿಂದಿನ ಆಘಾತಕಾರಿ ಘಟನೆಗಳು ಮತ್ತು ಮಾನಸಿಕ ಅಂಶಗಳು ಕೂಡ ಸೇರಿವೆ. ಲೈಂಗಿಕ ಸುಖವನ್ನು ಪಾಪದ್ದು ಎಂದು ಪರಿಗಣಿಸುವ ಕಠಿಣ ಧಾರ್ಮಿಕ ಪ್ರವೃತ್ತಿಯ ವ್ಯಕ್ತಿಗಳು ಇದರಲ್ಲಿ ಸೇರಿದ್ದಾರೆ.

ಶೀಘ್ರಸ್ಖಲನವು ಸಂಭೋಗದ ಸಮಯದಲ್ಲಿ ಪುರುಷನ ಕಾರ್ಯನಿರ್ವಹಣೆ ಬಗ್ಗೆ ಅಧೈರ್ಯದ ಸ್ಥಿತಿಯೂ ಕಾರಣವಾಗಬಹುದು. ಕೆಲವು ಖಿನ್ನತೆ ನಿವಾರಕ ಔಷಧಗಳು ಸ್ಖಲನದ ಮೇಲೆ ಪರಿಣಾಮ ಉಂಟುಮಾಡುತ್ತದೆ. 
 
ಹಿಂಚಲನ ಸ್ಖಲನವು ನರಗಳ ಹಾನಿಯಿಂದ ಬಳಲುವ ಕೆಲವು ಮಧುಮೇಹಿ ರೋಗಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಕೋಶದಲ್ಲಿ ಮತ್ತು ಕೋಶದ ತುದಿಯಲ್ಲಿ ನರಗಳ ಸಮಸ್ಯೆಗಳಿಂದ ಸ್ಖಲನ ಹಿಂಚಲನೆಯಿಂದ ಕೋಶದೊಳಕ್ಕೆ ಸೇರುತ್ತದೆ. ಕೆಲವು ಪುರುಷರಲ್ಲಿ ಹಿಂಚಲನ ಸ್ಖಲನವು ಕೋಶದ ತುದಿಯಲ್ಲಿ ಅಥವಾ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ ಬಳಿಕ ಸಂಭವಿಸುತ್ತದೆ. ಇದಲ್ಲದೆ ಖಿನ್ನತೆ ಚಿಕಿತ್ಸೆಗೆ ಬಳಸುವ ಕೆಲವು ಔಷಧಿಗಳು ಸ್ಖಲನಕ್ಕೆ ಸಮಸ್ಯೆ ಉಂಟುಮಾಡುತ್ತದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ