Webdunia - Bharat's app for daily news and videos

Install App

ಈ ಕೀಟದಿಂದ ಸೆಕ್ಸ್‌ ಪವರ್‌ ಹೆಚ್ಚುತ್ತದೆ. ಇದರ ಬೆಲೆ 7 ಲಕ್ಷ

Webdunia
ಗುರುವಾರ, 31 ಜುಲೈ 2014 (18:38 IST)
ಉತ್ತರಾಖಂಡ ರಾಜ್ಯಗಳಲ್ಲಿ ಸಾಧಾರಣವಾಗಿ ಕಂಡುಬರುವ ಒಂದು ಕೀಟದಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುವ ಅಧ್ಬುತ ಶಕ್ತಿಯಿರುವುದರಿಂದ ಈ ದಿನಗಳಲ್ಲಿ 7 ರಿಂದ 8 ಲಕ್ಷ ರೂಪಾಯಿವರೆಗೆ ಮಾರಾಟವಾಗುತ್ತಿದೆ. 
 
ಬದ್ರಿನಾಥ್‌‌ದಿಂದ ಜೋಶೀಮಠ್‌ ರಸ್ತೆಯಲ್ಲಿ ಸಿಗುವ ಈ ಕೀಟ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿರುವ ಹಿಂದಿರುವ ರಹಸ್ಯವೇನೆಂದರೆ,ಕೀಟದಲ್ಲಿ ಲೈಂಗಿಕತೆ ವೃದ್ಧಿಸುವ ಶಕ್ತಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತರಾಖಂಡದ ವನ್ಯ ಜೀವಿಗಳ ಮಾಂಸಕ್ಕಿರುವ ಬೇಡಿಕೆಯಂತೆ ಈ ಕೀಟಕ್ಕೆ ಕೂಡಾ ಭಾರಿ ಬೇಡಿಕೆ ಬಂದಿದೆ.
 
ವನ್ಯ ವಿಭಾಗದ ಮೂಲಗಳ ಪ್ರಕಾರ, ದಶೋಲಿ ಕ್ಷೇತ್ರದ ಬುಗ್ಯಾಲಿ ಪ್ರದೇಶದಲ್ಲಿ ಗ್ರಾಮೀಣ ಭಾಗದ ಜನರು ಜೀವಂತವಾಗಿ ಕೀಟಗಳನ್ನು ಹಿಡಿದುಕೊಟ್ಟಲ್ಲಿ ಕೀಟಗಳನ್ನು ಭಾರಿ ಮೊತ್ತಕ್ಕೆ ಖರೀದಿಸುಪ ವ್ಯಾಪಾರಿಗಳು,ಅವುಗಳನ್ನು ಐಸ್‌ ಬಾಕ್ಸ್‌ನಲ್ಲಿ ಇಟ್ಟು ಜೀವಂತ ಹುಳಗಳನ್ನು ಚೀನಾ ಸಹಿತ ಇತರ ದೇಶಗಳಿಗೆ ರವಾನಿಸುತ್ತಿದ್ದಾರೆ ಎನ್ನಲಾಗಿದೆ. 
 
ಚಮೋಲಿ ಜನಪದದಲ್ಲಿ ಜೋಶಿಮಠ್, ಕಾನೀತಿ ಮತ್ತು ಮಾಣಾ ಘಾಟಿ, ತಪೋವನ್, ಕರಛೋ, ಉರ್ಗಮ ಪಾಣಾ, ಇರಾಣಿ, ಝೀಝೀ, ಘುನಿ, ದೆವಾಲ, ವಾಣಾ, ಕನೋಲ್‌ ಇತ್ಯಾದಿ ಎತ್ತರದ ಪ್ರದೇಶಗಳಲ್ಲಿ ಈ ಹುಳುಗಳು ಲಭಿಸುತ್ತವೆ. 
 
ಸ್ಥಳೀಯ ಗ್ರಾಮೀಣ ಜನರು ಮೇ ಮತ್ತು ಜೂನ್‌‌ ತಿಂಗಳಲ್ಲಿ ಕ್ಯಾಂಪ್‌ ಹಾಕಿ ಹುಳುಗಳನ್ನು ಹುಡುಕುತ್ತಾರೆ. ಈ ಹುಳುವಿನ ಬಟಾನಿಕಲ್ ಹೆಸರು ಯಾರಸಗಂಬೂ ಎಂದಿದೆ. 
 
ವರ್ಷದ ಹೆಚ್ಚು ದಿನಗಳಲ್ಲಿ ಹಿಮದಿಂದಾವೃತವಾದ ಕ್ಷೇತ್ರಗಳಲ್ಲಿ ಮೂರರಿಂದ ನಾಲ್ಕು ಸಾವಿರ ಮೀಟರ್‌‌ ಎತ್ತರದಲ್ಲಿ  ಈ ಹುಳವಿರುತ್ತವೆ. ಬೇಸಿಗೆ ಕಾಲದಲ್ಲಿ ಹಿಮ ಕರಗಿದಾಗ ಈ ಹುಳು ಸಾಯುತ್ತದೆ ಮತ್ತು ಇದರ ಲಾರ್ವದಿಂದ ಒಂದು ಔಷಧ ಸಿದ್ದವಾಗುತ್ತದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ