Select Your Language

Notifications

webdunia
webdunia
webdunia
webdunia

ನಗ್ನ ಚಿತ್ರಗಳನ್ನು ಅಪ್ಲೋಡ್ ಮಾಡಿದ ಶಿಕ್ಷಕಿ ರಾಜೀನಾಮೆಗೆ ಒತ್ತಾಯ

ನಗ್ನ ಚಿತ್ರಗಳನ್ನು ಅಪ್ಲೋಡ್ ಮಾಡಿದ ಶಿಕ್ಷಕಿ ರಾಜೀನಾಮೆಗೆ ಒತ್ತಾಯ
ಲಂಡನ್‌‌ , ಬುಧವಾರ, 20 ಆಗಸ್ಟ್ 2014 (20:12 IST)
ರಷ್ಯಾದ ಸಂಗೀತ ಶಿಕ್ಷಕಿಯೊಬ್ಬಳು ತಪ್ಪಿನಿಂದಾಗಿ ತನ್ನ ನಗ್ನ ಸೆಲ್ಫಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾಳೆ. ಇದೀಗ ಶಾಲಾ ಅಧಿಕಾರಿಗಳು ಆಕೆಯ ರಾಜಿನಾಮೆ ಕೇಳುತ್ತಿದ್ದಾರೆ. ಆದರೆ,ನಾನು ಉದ್ದೇಶಪೂರ್ವಕವಾಗಿ ಯಾವುದೇ ತಪ್ಪು ಮಾಡಿಲ್ಲವಾದ್ದರಿಂದ ರಾಜೀನಾಮೆ ನೀಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾಳೆ.
 
 ಸೋಶಿಯಲ್‌ ನೆಟ್‌‌ವರ್ಕಿಂಗ್‌ ಸೈಟ್‌‌‌‌‌ ವಕೊನ್ಟೆಕ್‌‌‌‌‌ನಲ್ಲಿ ಆಕಸ್ಮಿಕವಾಗಿ ತನ್ನ ನಗ್ನ ಚಿತ್ರಗಳನ್ನು ಪೊಸ್ಟ್‌ ಮಾಡಿದ್ದೇನೆ ಎಂದು ರಷ್ಯಾದ ತವೆರ್‌ ನಗರದಲ್ಲಿರುವ ಎಲೆನಾ ಕೊರ್ನಿಶೋಕ್ನೊವಾ(40) ಹೆಸರಿನ ಶಿಕ್ಷಕಿ ಹೇಳಿದ್ದಾಳೆ. ವಿಧ್ಯಾರ್ಥಿಗಳು ಮತ್ತು ಸಹದ್ಯೋಗಿಗಳು ಸೈಟ್‌‌‌ನಲ್ಲಿ ಆಕೆಯ ನಗ್ನ ಸೆಲ್ಫಿ ಚಿತ್ರಗಳನ್ನು ನೋಡಿ, ಶಾಲೆಯ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 
 
ಅಂಗ ಪ್ರದರ್ಶನ ಮಾಡುವುದು ಕೆಟ್ಟದಲ್ಲ ಮತ್ತು ನನ್ನ ಜೀವನ ಇತರ ಸಹೋದ್ಯೊಗಿಗಳಿಗಿಂತ ಉತ್ತಮವಾಗಿದೆ ಎಂದು ಅಧ್ಯಾಪಕಿ ತಿಳಿಸಿದ್ದಾಳೆ. 
 
ಅವಳ ಪ್ರಕಾರ, ಆಕೆ ಕೇವಲ ಸ್ಪೇನ್‌‌ನಲ್ಲಿದ್ದಾಗ ರಜೆಯ ಸಂದರ್ಭದಲ್ಲಿ ತೆಗೆದುಕೊಂಡ ಫೋಟೊಗಳನ್ನು  ತನ್ನ ಆಪ್ತ ಸ್ನೇಹಿತರಿಗೆ ಮಾತ್ರ ಸೆಲ್ಫಿ ತೋರಿಸಲು ಇಚ್ಛಿಸುತ್ತಿದ್ದಳು. ಆದರೆ, ಶಾಲಾ ಆಡಳಿತ ಮಂಡಳಿ ಆಗಸ್ಟ್‌‌ 25 ರವರೆಗೆ ಶಿಕ್ಷಕಿ ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ಆಕೆಯನ್ನು ಒತ್ತಾಯ ಪೂರ್ವಕವಾಗಿ ಕೆಲಸದಿಂದ ತೆಗೆದುಹಾಕಲಾಗುವುದು ಎಂದು ಎಚ್ಚರಿಸಿದೆ.  

Share this Story:

Follow Webdunia kannada