Webdunia - Bharat's app for daily news and videos

Install App

ನಾಲ್ಕು ರಾಜ್ಯದ ಈ ಸೊಸೆಗೆ 11 ಪತಿಯಂದಿರು

Webdunia
ಸೋಮವಾರ, 19 ಡಿಸೆಂಬರ್ 2016 (11:16 IST)
ನೀವು ಐದು ಗಂಡದಿರನ್ನು ಹೊಂದಿದ್ದ ಪಾಂಚಾಲಿ ಬಗ್ಗೆ ಮಹಾಭಾರತದಲ್ಲಿ ಓದಿರುತ್ತೀರಾ. ಆಕೆ ಮಹಾಪತಿವ್ರತೆ ಎಂಬ ಹೆಗ್ಗಳಿಕೆಯನ್ನು ಸಹ ಹೊಂದಿದ್ದಾಳೆ. ಅದೆಲ್ಲ ಪುರಾಣದಲ್ಲಾಯಿತು. ಈ ಆಧುನಿಕ ಕಾಲದಲ್ಲಿ ಕೂಡ ಒಂದಲ್ಲ, ಎರಡಲ್ಲ ಬರೊಬ್ಬರಿ 11 ಜನರನ್ನು ಮದುವೆಯಾದ ಹೆಣ್ಣಿದ್ದಾಳೆ ಎಂದರೆ ನಂಬುತ್ತೀರಾ?
ಹೌದು ನೊಯ್ಡಾದ ಧನಪಿಶಾಚಿ ಮಹಿಳೆಯೋರ್ವಳು 11 ಯುವಕರನ್ನು ಮದುವೆಯಾಗಿ ವಂಚಿಸಿದ್ದಾಳೆ.  ಆಕೆಯ ಈ ವಂಚನೆ ಕೃತ್ಯ ಈಗ ಹೊರಬಿದ್ದಿದ್ದು ಮತ್ತೀಗ ಜೈಲಿನ ಕಂಬಿಯನ್ನು ಎಣಿಸುತ್ತಿದ್ದಾಳೆ. 
 
ಆರೋಪಿಯನ್ನು ಮೇಘಾ ಭಾರ್ಗವ್(28) ಎಂದು ಗುರುತಿಸಲಾಗಿದ್ದು ಆಕೆ  ಜತೆ ಸಹೋದರಿ ಮತ್ತು ಭಾವನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. 
 
ವಂಚನೆಯ ಉದ್ದೇಶದಿಂದ ಮದುವೆಯಾಗುತ್ತಿದ್ದ ಮೇಘಾ ಕೆಲ ದಿನಗಳ ಬಳಿಕ ಧನಕನಕವನ್ನು ಲಪಟಾಯಿಸಿಕೊಂಡು ಪತಿಯನ್ನು ಬರ್ಬಾದ್ ಮಾಡಿ ಅಲ್ಲಿಂದ ಪರಾರಿಯಾಗುತ್ತಿದ್ದಳು. ಆದರೆ ಆಕೆಯ ಬಗ್ಗೆ ಆಕೆಯ ಮೋಸಕ್ಕೆ 4ನೇ ಬಲಿಯಾದ ಕೇರಳದ ಕೊಚ್ಚಿ ನಿವಾಸಿ ಲಾರೆನ್ ಜಸ್ಟೀಸ್ ಎಂಬುವವರು ಕಳೆದ ಅಕ್ಟೋಬರ್ ತಿಂಗಳಲ್ಲಿ ತನ್ನ ಪತ್ನಿ ಮೇಘಾ 15 ಲಕ್ಷ ನಗದು ಮತ್ತು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾಗಿ ದೂರಿನಲ್ಲಿ ಹೇಳಿದ್ದರು. ಆತನನ್ನು ಬಿಟ್ಟರೆ ಮತ್ಯಾರು ಕೂಡ ಆಕೆಯ ವಿರುದ್ಧ ದೂರು ದಾಖಲಿಸದಿರುವುದು ವಿಚಿತ್ರ. 
 
ಎರಡು ತಿಂಗಳುಗಳ ಕಾಲ ಆಕೆಗಾಗಿ ಹುಡುಕಾಟ ನಡೆಸಿದ ತನಿಖೆ ನಡೆಸಿದ ಬಳಿಕ ಬಿಚ್ಚಿಟ್ಟುಕೊಂಡ ಸತ್ಯ ಮಾತ್ರ ಪೊಲೀಸರನ್ನೇ ದಂಗು ಬಡಿಸಿತ್ತು. ಆಕೆ ಕೇರಳದಲ್ಲಿ ಬರೊಬ್ಬರಿ ನಾಲ್ವರನ್ನು ಮದುವೆಯಾದರೆ, ಪುಣೆ, ಇಂದೋರ್, ಮುಂಬೈ, ರಾಜಸ್ಥಾನ ಸೇರಿದಂತೆ ಅನೇಕ ಕಡೆಗಳಲ್ಲಿ ಒಟ್ಟು 11 ಜನರನ್ನು ವಿವಾಹವಾಗಿ ಮೋಸ ಮಾಡಿದ್ದಳು ಎಂದು ತಿಳಿದು ಬಂದಿದೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್ ದಾಳಿಗೆ ಗಟ್ಟಿಯಾಗಿ ನಿಲ್ಲುವಂತೆ ಇರಾನ್ ನಾಯಕ ಖಮೇನಿ ಜನತೆಗೆ ಸಂದೇಶ

ಇರಾನ್ ಬೆನ್ನಲ್ಲೇ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಮುಂದಾದ ಕೇಂದ್ರ ಸರ್ಕಾರ

ರಾಹುಲ್ ಗಾಂಧಿ ಜನ್ಮದಿನಕ್ಕೆ ಡಿಕೆಶಿಯಿಂದ ಕಣ್ಣುಗಳೇ ಗಿಫ್ಟ್

Sonia Gandhi: ಹಿರಿಯ ನಾಯಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌

Air India Plane Crash: ತಾಯ್ನಾಡಿಗೆ ತಲುಪಿದ ಸಿಬ್ಬಂದಿ ಲಾಮ್‌ನುಂಥೆಮ್‌ ಮೃತದೇಹ

ಮುಂದಿನ ಸುದ್ದಿ
Show comments