Webdunia - Bharat's app for daily news and videos

Install App

ರಸಗುಲ್ಲಾ ತಿಂದಿದಕ್ಕೆ ಮದುವೆಯೇ ಮುರಿದು ಹೋಯಿತು

Webdunia
ಗುರುವಾರ, 14 ಮೇ 2015 (17:23 IST)
ಬಿಹಾರದ ಗ್ರಾಮವೊಂದರಲ್ಲಿ ಆಯೋಜಿತವಾಗಿದ್ದ ಮದುವೆಯೊಂದು ಕ್ಷುಲ್ಲಕ ಕಾರಣಕ್ಕೆ ಮುರಿದು ಹೋಯಿತು. ವರ ಮಾನಸಿಕ ಅಸ್ವಸ್ಥನೆಂದು ತೀರ್ಮಾನಿಸಿದ ವಧು, ಆತನ ಜತೆ ಮದುವೆಯಾಗಲು ನಿರಾಕರಿಸಿದಳು. ಇಷ್ಟಕ್ಕೂ ವರ ಮಾಡಿದ ತಪ್ಪೇನು ಗೊತ್ತೇ? ತಟ್ಟೆ ತುಂಬ ಇದ್ದ ಗುಲಾಬ್ ಜಾಮೂನ್ ಮಧ್ಯದಲ್ಲಿ ಇಟ್ಟಿದ್ದ ಹಿಟ್ಟಿನಿಂದ ಮಾಡಿದ್ದ 'ರಸಗುಲ್ಲಾ' ತಿಂದಿದ್ದು. ಹೌದು ಇದು ವಾಸ್ತವವಾಗಿ ನಡೆದ ಘಟನೆ. 
 

 
ಎರಡು ಕಡೆಯವರು ಆಗಮಿಸಿ  ದ್ವಾರಪೂಜೆ ಮತ್ತು ಮದುವೆಯ ಇತರ ಸಂಪ್ರದಾಯಗಳನ್ನು ನಡೆಸಿ ಆಗಿತ್ತು. ಅಷ್ಟರಲ್ಲಿ ವಧುವಿನ ಸ್ನೇಹಿತೆಯರು ವರ ಮನೋಜ್ ಕುಮಾರ್‌ಗೆ ತಟ್ಟೆ ತುಂಬ ಕಾಲಾ ಜಾಮ್ ಎಂಬ ಸಿಹಿ ಪದಾರ್ಥವನ್ನು ನೀಡಿದರು. ತಟ್ಟೆಯ ಮಧ್ಯದಲ್ಲಿ ರಸಗುಲ್ಲಾದಂತೆ ಕಾಣುವ ಹಿಟ್ಟಿನಿಂದ ಮಾಡಿದ ತಿಂಡಿಯನ್ನು ಇಡಲಾಗಿತ್ತು. ವರ ಮಹಾಶಯ ಆ ರಸಗುಲ್ಲಾವನ್ನು ಎತ್ತಿಕೊಂಡು ತಿಂದಿದ್ದಾನೆ. ಆತ ರಸಗುಲ್ಲಾವನ್ನು ತಿಂದಿದ್ದು ವಧುವಿಗೆ ಅಸಹ್ಯವೆನಿಸಿದೆ. ಆತ ಮಾನಸಿಕ ಅಸ್ವಸ್ಥನೆಂದು ವಾದಿಸಿದ ಅವಳು ಮದುವೆಯನ್ನು ನಿರಾಕರಿಸಿದ್ದಾಳೆ. 
 
ಆಕೆಯ ಮನವೊಲಿಸಲು ಮತ್ತು ವರ ಸ್ವಸ್ಥನೆಂದು ತೋರಿಸಲು ಆತನ ಬಳಿ ನೋಟುಗಳನ್ನು ಕೊಟ್ಟು ಲೆಕ್ಕ ಮಾಡುವಂತೆ ಹೇಳಲಾಯಿತು. ಅದನ್ನಾತ ಸರಿಯಾಗಿಯೇ ಎಣಿಸಿ ತೋರಿಸಿದ. ಆದರೆ ವಧು ನಿರ್ಧಾರವನ್ನು ಬದಲಾಯಿಸಲಿಲ್ಲ. 
 
ಹೀಗಾಗಿ ಸ್ಥಳಕ್ಕೆ ಪೊಲೀಸರನ್ನು ಕರೆಸಲಾಯಿತು. ಆಕೆಯನ್ನು ಮದುವೆಗೆ ರಾಜೀ ಮಾಡುವುದು ಸಾಧ್ಯವಿಲ್ಲವೆಂಬುದು ಖಚಿತವಾದಾಗ ಪೊಲೀಸ್ ಮತ್ತು ಗ್ರಾಮ ಪಂಚಾಯತಿಯವರ ಮಧ್ಯಸ್ಥಿಕೆಯಲ್ಲಿ ಎರಡು ಕಡೆಯವರು ಪರಸ್ಪರ ನೀಡಿಕೊಂಡಿದ್ದ ಉಡುಗೊರೆಗಳನ್ನು ಹಿಂತಿರುಗಿಸಿಕೊಂಡರು. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಷ್ಟಚಾರದಿಂದ ಸರ್ಕಾರ ನಡೆಸುವ ಬದಲು ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ವಿಶ್ವೇಶ್ವರ ಹೆಗಡೆ

ಊಹಿಸಲಾಗದ ದುಃಖ, ಗಂಡಾಂತರ: ಕೋಡಿ ಶ್ರೀಗಳ ಶಾಕಿಂಗ್ ಭವಿಷ್ಯ

ಬಿಜೆಪಿ ಸೇರ್ಪಡೆ ಬಗ್ಗೆ ಅಪ್‌ಡೇಟ್‌ ನೀಡಿದ ಕೆ.ಎಸ್‌.ಈಶ್ವರಪ್ಪ: ಬಿಎಸ್‌ವೈಯನ್ನು ಹಾಡಿ ಹೊಗಳಿದ ಮಾಜಿ ಡಿಸಿಎಂ

ಕಾಂಗ್ರೆಸ್‌ ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾದ ಶಶಿ ತರೂರ್‌ಗೆ ಮತ್ತೊಂದು ಟಾಸ್ಕ್‌ ನೀಡಿದ ಪ್ರಧಾನಿ ನರೇಂದ್ರ ಮೋದಿ

Gold Price: ಪರಿಶುದ್ಧ ಚಿನ್ನದ ಬೆಲೆ ಇಂದು ಮತ್ತಷ್ಟು ಇಳಿಕೆ

Show comments