Webdunia - Bharat's app for daily news and videos

Install App

ಐತಿಹಾಸಿಕ ರಹಸ್ಯ: ಲಕ್ಷ್ಮಣನ ಪ್ರಾಣ ಉಳಿಸಿದ ರಾವಣನ ತಾಯಿ

Webdunia
ಬುಧವಾರ, 20 ಆಗಸ್ಟ್ 2014 (18:46 IST)
ರಾಮಾಯಣದ ರಾಮ ಮತ್ತು ರಾವಣನ ಯುದ್ದ ನಡೆಯುತ್ತಿರುವ ಸಂದರ್ಭದಲ್ಲಿ ಲಕ್ಷ್ಮಣ ಪ್ರಜ್ಞೆತಪ್ಪಿದ್ದನು. ಆಗ ಹನುಮಾನ ಸಂಜೀವಿನಿ ಗಿಡವಿರುವ ಪರ್ವತವನ್ನೇ ತಂದ ನಂತರ, ರಾಜ ವೈದ್ಯನಾದ ಶ್ರೀ ಸುಶೈಣ " ಈ ಸಂಜೀವಿನಿಯನ್ನು ಕಲ್ಲಿನ ಮೇಲೆ ಅರೆಯಲು ಜೀವನದಲ್ಲಿ ಯಾವತ್ತು ರೋಧಿಸಿರದಂತಹ ವ್ಯಕ್ತಿಯ ಎರಡರಿಂದ ನಾಲ್ಕು ಹನಿ ಕಣ್ಣೀರು ಬೇಕು. ತಿಳಿಸಿದರು. ಇದರಿಂದ ರಾಮಪಡೆಗೆ ದೊಡ್ಡ ಸಮಸ್ಯೆ ಎದುರಾಯಿತು.. ಆಗ ರಾಜ ವೈದ್ಯ ಶ್ರೀ ಸುಶೈಣ್‌ ಅವರು, " ರಾವಣನ ತಾಯಿ ಕೈಕಶಿ ತಮ್ಮ ಜೀವನದಲ್ಲಿ ಯಾವತ್ತು ರೋಧಿಸಿಲ್ಲ.. ಒಂದು ವೇಳೆ ಆಕೆಯ ಕಣ್ಣಿರು ಲಭಿಸಿದರೆ ಶೀಘ್ರದಲ್ಲಿ ಲಕ್ಷ್ಮಣನಿಗೆ ಪ್ರಜ್ಞೆ ಬರುವುದು" ಎಂಬ ಉಪಾಯವನ್ನು ಹೇಳಿದರು. 
 
ಹನುಮಾನ ಲಂಕಾದ ರಾಜಭವನಕ್ಕೆ ಹೋಗಿ ರಾವಣನ ಮಾತೆಯನ್ನು ಕಂಡು " ಮಾತೆ, ನೀವು ಈಗ ಅಳಬೇಕಾಗುತ್ತದೆ. ನೀವು ಶೀಘ್ರದಲ್ಲಿ ಅತ್ತು ಬಿಡಿ. ನಿಮ್ಮ ಕಣ್ಣಿರಿನ ಎರಡು-ನಾಲ್ಕು ಹನಿಗಳು ಬೇಕಾಗಿದೆ" ಎಂದು ಕೋರಿದ್ದಾರೆ. 
 
ಹನುಮಾನ ಮಾತಿನಿಂದ ರಾವಣನ ತಾಯಿ ಕೋಪಗೊಂಡು " ಇಲ್ಲಿಂದ ಹೊರಟು ಹೋಗು, ನಾನೇಕೆ ಅಳಬೇಕು? ನಾನು ಯಾರೋ ಹೇಳಿದರೆಂದು ನಾನು ಅಳುವುದಿಲ್ಲ. ನೀನು ನಮ್ಮ ಶತ್ರುವಾಗಿದ್ದು, ಅಂತಹದರಲ್ಲಿ ನೀನು ನನ್ನನ್ನು ಅಳಿಸುವ ಸಾಹಸ ಮಾಡುತ್ತಿದ್ದಿಯಾ" ಎಂದು ಗುಡುಗಿದಳು. 
 
ಹನುಮಾನ ಬಹಳಷ್ಟು ವಿನಯಪೂರ್ವಕವಾಗಿ ಕೇಳಿಕೊಂಡರು ಕೈಕಶಿ ಅಳಲೇ ಇಲ್ಲ. ಆಗ, ಹನುಮಾನ ಎರಡು ದೊಡ್ಡ ಮೆಣಸಿನ ಕಾಯಿಗಳನ್ನು ರಾವಣನ ತಾಯಿಯ ದೊಡ್ಡ ದೊಡ್ಡ ರಾಕ್ಷಸಿ ಕಣ್ಣುಗಳಲ್ಲಿ ತುರುಕಿದನು, ತದ ನಂತರ ಆಕೆ ಚಿರುತ್ತಾ ಅಳತೊಡಗಿದಳು. ಇವಳ ಕಣ್ಣುಗಳಲ್ಲಿ ಧಾರಾಕಾರವಾಗಿ ಕಣ್ಣಿರು ಬರತೊಡಗಿತು. ಹನುಮಾನ ಕಾರ್ಯ ಯಶಸ್ವಿಯಾಯಿತೆಂದು ಪ್ರಸನ್ನನಾದನು.  ಶೀಘ್ರದಲ್ಲಿ ಕೈಕಶಿಯ ಕಣ್ಣಿರುಗಳನ್ನು ಸಂಗ್ರಹಿಸಿ ತನ್ನ ವಾಯು ವೇಗದಲ್ಲಿ ಲಕ್ಷ್ಮಣ ಪ್ರಜ್ಞೆ ತಪ್ಪಿ ಬಿದ್ದ ಸ್ಥಳಕ್ಕೆ ಹೋದ. ನಂತರ ರಾಜ ವೈದ್ಯರು ಸಂಜೀವಿನಿಯಲ್ಲಿ ಕಣ್ಣಿರು ಮಿಶ್ರಮಾಡಿ ಚೆನ್ನಾಗಿ ಅರೆದು ಲಕ್ಷ್ಮಣನಿಗೆ ಕುಡಿಸಿದಾಗ ಆತನಿಗೆ ಪ್ರಜ್ಞೆ ಬಂತು ಎಂದು ಪುರಾಣ ಕಥೆಗಳಲ್ಲಿ ಉಲ್ಲೇಖವಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments