Select Your Language

Notifications

webdunia
webdunia
webdunia
webdunia

ಸೋನು ನಿಗಂ ಬೆಂಬಲಿಸಿ ಮಾತನಾಡಿದ್ದಕ್ಕೆ ಕೊಲೆ!

ಸೋನು ನಿಗಂ ಬೆಂಬಲಿಸಿ ಮಾತನಾಡಿದ್ದಕ್ಕೆ ಕೊಲೆ!
Mumbai , ಶುಕ್ರವಾರ, 21 ಏಪ್ರಿಲ್ 2017 (07:58 IST)
ಮುಂಬೈ: ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಇಟ್ಟು ಪ್ರಾರ್ಥನೆ ಮಾಡಿ ತೊಂದರೆ ಕೊಡಬಾರದು ಎಂದು ಟ್ವೀಟ್ ಮಾಡಿದ್ದ ಖ್ಯಾತ ಗಾಯಕ ಸೋನು ನಿಗಂಗೆ ಮುಸ್ಲಿಂ ಧರ್ಮಗುರುಗಳಿಂದ ಎಚ್ಚರಿಕೆ ಬಂದಿತ್ತು. ಇದೀಗ ಸೋನು ಬೆಂಬಲಿಸಿ ಮಾತನಾಡಿದ್ದಕ್ಕೆ ವ್ಯಕ್ತಿಯೊಬ್ಬ ಕೊಲೆಯಾಗಿದ್ದಾನೆ.

 
ಮಧ್ಯಪ್ರದೇಶದ ಉಜ್ಜೈನ್ ಎಂಬಲ್ಲಿ ಸೋನು ಟ್ವೀಟ್ ಬಗ್ಗೆ ಚರ್ಚೆಗಳು ನಡೆಯುತ್ತಿದ್ದಾಗ, ಎರಡು ಗುಂಪುಗಳ ನಡುವೆ ವಾದ ವಿವಾದ ತಾರಕಕ್ಕೇರಿ ಫೈಝಾನ್ ಖಾನ್ ಎಂಬಾತ ಶಿವಂ ಎಂಬಾತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಫೈಝಾನ್ ಜತೆಗೆ ಹಲವು ಜನ ಸ್ನೇಹಿತರೂ ಕೃತ್ಯಕ್ಕೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಮಂಜು ಗಡ್ಡೆ ನೋಡಲು ಮುಗಿಬಿದ್ದ ಜನ! ಅಂತಹದ್ದೇನಿತ್ತು ಅಲ್ಲಿ?!