Select Your Language

Notifications

webdunia
webdunia
webdunia
webdunia

ಮೊಸಳೆಯೊಂದಿಗೆ ವಿವಾಹವಾದ ಮೆಕ್ಸಿಕನ್ ಮೇಯರ್

ಮೊಸಳೆಯೊಂದಿಗೆ ವಿವಾಹವಾದ ಮೆಕ್ಸಿಕನ್ ಮೇಯರ್
ಮೆಕ್ಸಿಕೋ , ಶನಿವಾರ, 12 ಜುಲೈ 2014 (17:56 IST)
ನೀವು ವಿಚಿತ್ರ ಮದುವೆಗಳ ಬಗ್ಗೆ ಕೇಳಿರುತ್ತಿರಿ. ಆದರೆ ಈ ತರಹದ ಮದುವೆ ಬಗ್ಗೆ ಕೇಳಿರಲಿಕ್ಕಿಲ್ಲ. ಏಕೆಂದರೆ ಮೆಕ್ಸಿಕೋದಲ್ಲಿ ಒಂದು ನಗರದ ಮೇಯರ್‌‌ನ ಮದುವೆ ವಿಚಿತ್ರವಾಗಿ ನಡೆದಿದೆ. ಕೇಳಿದರೆ ನೀವು ಕೂಡ ಆಶ್ಚರ್ಯಚಕಿತರಾಗುವಿರಿ. ಈ ಮದುವೆಯ ವಿಡಿಯೋ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. 
 
ಮೆಕ್ಸಿಕನ್‌ ಫಿಸಿಂಗ್‌‌ ಟೌನ್‌ನ ಮೇಯರ್‌‌ ಜೋಎಲ್‌ ಬೆಸ್ಕಬೆಜ್‌ ಯಾವುದೇ ಹುಡುಗಿ ಜೊತೆಗೆ ಮದುವೆ ಮಾಡಿಕೊಂಡಿಲ್ಲ. ಆದರೆ ಒಂದು ಮೊಸಳೆ ಜೊತೆಗೆ ಮದುವೆ ಮಾಡಿಕೊಂಡಿದ್ದಾನೆ. ಈ ಹೊಸ ಮದುಮಮಗಳ ಜೊತೆಗೆ ಖುಷಿಯಾಗಿದ್ದೇನೆ ಎಂದು ಜೊಯೆಲ್‌ ಹೇಳಿಕೊಂಡಿದ್ದಾನೆ. 
 
ಮನುಷ್ಯನ ಮತ್ತು ಮೊಸಳೆಯ ಮದುವೆ ಪೆಡ್ರೋ ಹೂಮೆಲುನಾ ಕಸ್ಬೆಯಲ್ಲಿ ಭವ್ಯ ರೀತಿಯಲ್ಲಿ  ನೆರವೇರಿಸಲಾಯಿತು. ಇದರಲ್ಲಿ ಸಾಕಷ್ಟು ಜನರು ಆಗಮಿಸಿದ್ದರು ಮತ್ತು ಇದರ ಆನಂದ ಅನುಭವಿಸಿದ್ದರು. ಮದುವೆಯ ಸಮಯದಲ್ಲಿ ಮೊಸಳೆಗೆ ಬಿಳಿ ಬಣ್ಣದ ಗೌನ್ ಉಡಿಸಲಾಗಿತ್ತು ಮತ್ತು ಉಂಗುರ ಕೂರ ತೊಡಿಸಲಾಗಿತ್ತು. 
 
ಈ ಸಂದಂರ್ಭದಲ್ಲಿ ಜೊಯೆಲ್‌ ತನ್ನ ಮೊಸಳೆ ಪತ್ನಿಯ ಜೊತೆಗೆ ಬ್ಯಾಂಡ್‌ ಜೊತೆಗೆ ಡ್ಯಾನ್ಸ್‌‌ ಕೂಡ ಮಾಡಿದರು. 

Share this Story:

Follow Webdunia kannada