Select Your Language

Notifications

webdunia
webdunia
webdunia
webdunia

ಇಂದು ಪೂರ್ಣ ಚಂದ್ರಗ್ರಹಣ: 'ರಕ್ತ ಚಂದ್ರ' ದರ್ಶನ

ಇಂದು ಪೂರ್ಣ ಚಂದ್ರಗ್ರಹಣ: 'ರಕ್ತ ಚಂದ್ರ' ದರ್ಶನ
ಹೈದರಬಾದ್‌ , ಬುಧವಾರ, 8 ಅಕ್ಟೋಬರ್ 2014 (13:20 IST)
ಈ ವರ್ಷದ ಎರಡನೆಯ ಹಾಗೂ ಕೊನೆಯ ಚಂದ್ರಗ್ರಹಣ ಅಕ್ಟೋಬರ್ 8,  ಬುಧವಾರ( ಇಂದು) ಸಂಭವಿಸಲಿದೆ.  

ಪೂರ್ವ ಸಮಯ ವಲಯದ ಸೂರ್ಯೋದಯಕ್ಕೆ ಮುಂಚೆ ಮತ್ತು ಪಶ್ಚಿಮ ಕರಾವಳಿಯ ಮಧ್ಯರಾತ್ರಿಯ ಸಮಯದಲ್ಲಿ ಗ್ರಹಣ ಸಂಭವಿಸಲಿದೆ.
 
ಈ ಸಮಯದಲ್ಲಿ  ಚಂದ್ರ ತಾಮ್ರ ಕೆಂಪು ವರ್ಣದಲ್ಲಿ ಕಾಣಿಸಿಕೊಳ್ಳುವುದರಿಂದ ಇದನ್ನು "ರಕ್ತ ಚಂದ್ರ" ಎಂದು ಕರೆಯಲಾಗುವುದು. 
 
ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1.43 ರ ಸಮಯದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಆವರಿಸತೊಡಗುತ್ತದೆ. 3.54 ರಿಂದ ಗ್ರಹಣವು ಪ್ರಾರಂಭವಾಗಿ ಸಾಯಂಕಾರ 7.05 ಕ್ಕೆ ಕೊನೆಗೊಳ್ಳಲಿದೆ ಎಂದು ಮುಂಬೈ ನೆಹರೂ ತಾರಾಲಯದ ನಿರ್ದೇಶಕ  ಅರವಿಂದ ಪರಾಂಜಪೆ ತಿಳಿಸಿದ್ದಾರೆ.
 
ಕಳೆದ ಎಪ್ರಿಲ್‌ 15ರಂದು ಈ ವರ್ಷದ ಮೊದಲ ಚಂದ್ರಗ್ರಹಣ ನಡೆದಿತ್ತು.
 
ಸೂರ್ಯ, ಭೂಮಿ ಮತ್ತು ಚಂದ್ರ  ಒಂದೇ ಸರಳ ರೇಖೆಯಲ್ಲಿ ಬಂದಾಗ, ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರ ಗ್ರಹಣ ಉಂಟಾಗುತ್ತದೆ.

Share this Story:

Follow Webdunia kannada