ವೀರಶೈವ ಲಿಂಗಾಯತರನ್ನೇ ಸಿಎಂ ಮಾಡಿ: ಮೋದಿಗೆ ಮನವಿಗೆ ನಿರ್ಧಾರ

Webdunia
ಬುಧವಾರ, 21 ಜುಲೈ 2021 (14:11 IST)
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಂಗಳವಾರ ಭೇಟಿ ಮಾಡಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಾಧು ಸಂತರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಸುಮಾರು ಮೂನ್ನೂರರಿಂದ ನಾನೂರು ಸಾಧು ಸಂತರನ್ನು ಸೇರಿಸಿ ಮಂದಿಯನ್ನು ಭೇಟಿ ಮಾಡಿ ಸಿಎಂ ಬದಲಾವಣೆ ಕುರಿತು ಚರ್ಚಿಸಲಿದ್ದೇವೆ ಎಂದರು.
ಮುಖ್ಯಮಂತ್ರಿ ಬದಲಾವಣೆ ಖಚಿತ ಅನ್ನುವುದಾದರೆ ವೀರೇಶ್ವರ ಲಿಂಗಾಯತ ಸಮಾಜದವರನ್ನು ಹೊರತು ಪಡಿಸಿ ಬೇರೆಯವರನ್ನು ಸಿಎಂ ಮಾಡಬಾರದು. ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ ಮತ್ತು ಅರವಿಂದ ಬೆಲ್ಲದ್ ಅವರನ್ನು ಸಿ‌ಎಂ ಮಾಡಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ವೀರಶೈವ ಲಿಂಗಾಯತ ಸಮುದಾಯರವರ ಬೆಂಬಲದಿಂದ ಮಾತ್ರ ಸಾಧ್ಯ. ಆದ್ದರಿಂದ 5 ಬಾರಿ ಗೆದ್ದಿರುವ ಬಸವರಾಜ್ ಬೊಮ್ಮಾಯಿ ಅವರಿಗೂ ಅನುಭವವಿದೆ. ಅರವಿಂದ ಬೆಲ್ಲದ್ ಇಂಜಿನಿಯರ್ ಇದ್ದಾರೆ. ಮುರುಗೇಶ್ ನಿರಾಣಿ ಸಹ ಉದ್ಯಮಿಯಾಗಿ ಅನುಭವವಿದೆ ಎಂದು ಅವರು ಹೇಳಿದರು.
ಒಂದು ವೇಳೆ ನಮ್ಮ ಸಮಾಜದವರನ್ನ ಮುಖ್ಯ ಮಂತ್ರಿ ಮಾಡದಿದ್ದರೆ .ಅಖಿಲ ಭಾರತ ಸಾದು ಸಂತರ ಸಂಘದಿಂದ ಹೋರಾಟ ಮಾಡಲಾಗುವುದು. ಮುಂದಿನ ವಾರ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೇಟಿ ರಾಜ್ಯದ ವೀರಶೈವ ಲಿಂಗಾಯತ ಸ್ವಾಮೀಜಿ ಅವರ ಅಭಿಪ್ರಾಯ ತಿಳಿಸುವುದಾಗಿ ಶಾಂತವೀರ ಸ್ವಾಮೀಜಿ ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿ ಮಾತಿಗೆ ನಕ್ಕ ವಿಪಕ್ಷ ಸದಸ್ಯರು: ನಿಮ್ಮದೇ ನಾಯಕನ ಮಾತಿಗೆ ನಗ್ತಿದ್ದೀರಾ ಎಂದ ಸ್ಪೀಕರ್ Video

ಕಾಂಗ್ರೆಸ್ ಈ ನಿಲುವಿನ ಹಿಂದಿದೆ ವಿಪಕ್ಷವನ್ನು ಮಟ್ಟ ಹಾಕುವ ತಂತ್ರ: ವಿಜಯೇಂದ್ರ

ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯ ಎಂಬ ಕೈ ನಾಯಕರ ಆರೋಪಕ್ಕೆ ಪ್ರಹ್ಲಾದ್ ಜೋಶಿ ಸ್ಪಷ್ಟನೆ

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ 10 ವರ್ಷಗಳ ಜೈಲು ಶಿಕ್ಷೆ

ಸಿಜೆ ರಾಯ್‌ ಆತಹತ್ಯೆ ಪ್ರಕರಣ, ಈ ಅಂಶಗಳೇ ತನಿಖೆಗೆ ಪ್ರಮುಖ ಸಾಕ್ಷ್ಯಗಳು

ಮುಂದಿನ ಸುದ್ದಿ
Show comments