Select Your Language

Notifications

webdunia
webdunia
webdunia
webdunia

ಕನ್ಯಾಲಗ್ನದವರಿಗೆ ಸೂರ್ಯ,ಚಂದ್ರ ನೀಡುವ ಫಲ

ಕನ್ಯಾಲಗ್ನದವರಿಗೆ ಸೂರ್ಯ,ಚಂದ್ರ ನೀಡುವ ಫಲ
ಚೆನ್ನೈ , ಶುಕ್ರವಾರ, 21 ನವೆಂಬರ್ 2014 (16:15 IST)
ಸೂರ್ಯ:ಈ ಲಗ್ನದಲ್ಲಿ ಜನಿಸಿದವರಿಗೆ ಸೂರ್ಯನು ವ್ಯಯಾಧಿಪತಿಯಾಗಿರುತ್ತಾನೆ.ಇವನು ಲಗ್ನದಲ್ಲಿದ್ದರೆ ಗಂಡಸಾಗಿದ್ದರೂ ಹೆಂಗಸರಂತೆ ಸ್ವರೂಪ ಹಾಗೂ ನಾಚಿಕೆ ಸ್ವಭಾವವುಳ್ಳವರಾಗಿರುತ್ತಾರೆ.ಮಾತಿನಲ್ಲಿ ಇತರರನ್ನು ಆಕರ್ಷಿಸುತ್ತಾರೆ.
 
ಹೆಚ್ಚು ವಿದ್ಯಾವಂತರಾಗುತ್ತಾರೆ.ಪಾಂಡಿತ್ಯವನ್ನು ಪಡೆದಿರುತ್ತಾರೆ.ಅಲ್ಲದೆ ಸಂಗೀತ ಮತ್ತು ಬರಹರದಲ್ಲಿ ಇವರು ಹೆಚ್ಚು ಪ್ರಗತಿ ಹೊಂದುತ್ತಾರೆ.ಮನೋಧೈರ್ಯ ಸ್ವಲ್ಪ ಕಡಿಮೆ ಇರುತ್ತದೆ.ಲಗ್ನಾಧಿಪತಿ ಬುಧನಿಗೆ ಸೂರ್ಯ ಮಿತ್ರನಾಗಿರುವುದರಿಂದ ವ್ಯಯಾಧಿಪತ್ಯ ಪಡೆದಿದ್ದರೂ ಈ ಜಾತಕರಿಗೆ ಕೆಡುಕನ್ನುಂಟು ಮಾಡುವುದಿಲ್ಲ.ಸೂರ್ಯ,ಬುಧ ಇವರಿಬ್ಬರೂ ಸೇರಿ ಸೂರ್ಯದಶೆಯಲ್ಲಿ ಹೆಚ್ಚಿನ ಯೋಗವನ್ನು ಉಚ್ಛಸ್ಠಾನ ಪಡೆಯುತ್ತಾನೆ.
 
ತಂದೆಗೂ ಜಾತಕರಿಗೂ ಸಂಪರ್ಕವು ಅನ್ಯೋನ್ಯವಾಗಿರುವುದಿಲ್ಲ.ಎರಡನೇ ಸ್ಥಾನವಾದ ಕನ್ಯೆಯಲ್ಲಿ ನೀಚನಾದರೆ ಕುಟುಂಬದಲ್ಲಿ ಸಮಸ್ಯೆಗಳುಂಟಾಗುತ್ತವೆ.
 
ಸೂರ್ಯನು ಏಳನೇ ಸ್ಥಾನದಲ್ಲಿದ್ದರೆ ಮಡದಿಯ ವಿಷಯದಲ್ಲಿ ಸಮಸ್ಯೆಗಳು ತಲೆದೋರುತ್ತವೆ.ಗಂಡಹೆಂಡಿರ ಮಧ್ಯೆ ಮನಸ್ತಾಪವುಂಟಾಗುತ್ತದೆ.ಸೂರ್ಯನು ಈ ಲಗ್ನ ಜಾತಕರಿಗೆ 3,6,8,11,12ಈ ಸ್ಥಾನಗಳಲ್ಲಿದ್ದಾಗ ಶುಭಫಲಗಳನ್ನು ನೀಡುತ್ತಾನೆ.
 
ಕನ್ಯಾಲಗ್ನದವರಿಗೆ ಚಂದ್ರ ಲಾಭಾಧಿಪತ್ಯವನ್ನು ಪಡೆದಿರುತ್ತಾನೆ.ಇವನು ಲಗ್ನದಲ್ಲಿ ನಿಂತರೆ ಜಾತಕರು ನಾಚಿಕೆ ಪಡುವ ಸ್ವಭಾವದವರಾಗಿರುತ್ತಾರೆ.ಜೀವನದಲ್ಲಿ ಯಾವುದೇ ಸ್ಥಿರವನ್ನು ಪಡೆಯುವುದಿಲ್ಲ.ಒಂದೇ ಜಾಗದಲ್ಲಿ ವಾಸವಾಗಿರದೆ ಹಲವಾರು ಊರುಗಳಿಗೆ ಹೋಗುತ್ತಾರೆ.ಪುತ್ರಭಾಗ್ಯದಲ್ಲಿಯೂ ಕೊರತೆಯಿರುತ್ತದೆ.ಲಗ್ನದಲ್ಲಿರುವ ಚಂದ್ರನನ್ನು ಗುರು ದೃಷ್ಟಿಸಿದರೆ,ಉನ್ನತ ಹುದ್ದೆಯನ್ನು ವಹಿಸಿಕೊಳ್ಳುವವರಾಗುತ್ತಾರೆ.ಬುಧನು ದೃಷ್ಟಿಸಿದರೆ ರಾಜಕೀಯದಲ್ಲಿ ಪಾಲ್ಗೊಂಡು ಒಳ್ಳೆಯ ಶ್ರೀಮಂತಿಕೆ ಪಡೆಯುತ್ತಾರೆ.
 
ಚಂದ್ರನು 11ನೇ ಸ್ಥಾನದಲ್ಲಿದ್ದು ಅವನ ದಶೆ ಮೊದಲನೆಯದಾಗಿ ಬರುವುದು ಒಳ್ಳೆಯದಲ್ಲ.ಅದರಿಂದ ಬಾಲಾರಿಷ್ಟ ದೋಷವಿರುತ್ತದೆ 2,3ದಶೆಗಳಾದರೆ 9ನೇ ಸ್ಥಾನವಾದ ವೃಷಭದಲ್ಲಿ ಉಚ್ಛನಾದರೆ ಯೋಗಫಲಗಳು ಸಿದ್ದಿಸುತ್ತವೆ.ಅಲ್ಲದೆ ಇವನೊಂದಿಗೆ ಶುಕ್ರ ಸಂಪರ್ಕವಾದರೆ ಪ್ರಬಲ ರಾಜಯೋಗವಿರುತ್ತದೆ.3ನೇ ಸ್ಥಾನವಾದ ವೃಶ್ಚಿಕದಲ್ಲಿ ನೀಚನಾದರೂ ಶುಭಫಲಗಳೇ ಇರುತ್ತವೆ.5ನೇ ಸ್ಥಾನದಲ್ಲಿದ್ದರೆ ವ್ಯವಸಾಯ ಕ್ಷೇತ್ರದಲ್ಲಿ ಪ್ರಗತಿ ಪಡೆಯುತ್ತಾರೆ.

Share this Story:

Follow Webdunia kannada