Select Your Language

Notifications

webdunia
webdunia
webdunia
webdunia

ಸತ್ತಿದ್ದಾಳೆ ಅಂದುಕೊಂಡವಳು ಪ್ರತ್ಯಕ್ಷವಾದಳು; ಕೊಲೆ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಪತಿ ಬಿಡುಗಡೆ

ಸತ್ತಿದ್ದಾಳೆ ಅಂದುಕೊಂಡವಳು ಪ್ರತ್ಯಕ್ಷವಾದಳು; ಕೊಲೆ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಪತಿ ಬಿಡುಗಡೆ
ಶೈಖ್‌ಪುರ , ಶುಕ್ರವಾರ, 13 ಮಾರ್ಚ್ 2015 (16:44 IST)
ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪದ ಮೇಲೆ ಕಳೆದ 6 ತಿಂಗಳಿಂದ ಬಂಧಿತನಾಗಿದ್ದ ಅಮಾಯಕ ಪತಿಯೊಬ್ಬ ಪತ್ನಿ ಜೀವಂತವಾಗಿದ್ದಾಳೆ ಎಂದು ಸಾಬೀತಾಗಿದ್ದರಿಂದ ಬಿಡುಗಡೆಯ ಭಾಗ್ಯ ಕಂಡಿದ್ದಾನೆ. ಈ ಘಟನೆ ನಡೆದಿರುವುದು ಬಿಹಾರದ ಶೈಖ್‌ಪುರ ಜಿಲ್ಲೆಯಲ್ಲಿ.
ಕಳೆದ ಜುಲೈ ತಿಂಗಳಲ್ಲಿ ಕೆಲಸ ಹುಡುಕಿಕೊಂಡು ತಮ್ಮ ಊರಿನಿಂದ ಅಹಮದಾಬಾದ್ ಕಡೆ ಹೊರಟಿದ್ದ ದಂಪತಿಗಳು ರೈಲಿನ ಬೇರೆ ಬೇರೆ ಬೋಗಿಗಳಲ್ಲಿ  ಪ್ರಯಾಣಿಸಿದ್ದರು. ತಲುಪಬೇಕಾದ ಸ್ಥಳದಲ್ಲಿ ಇಳಿದುಕೊಂಡ ಪತಿ ತನ್ನ ಹೆಂಡತಿಯನ್ನು ಹುಡುಕಲಾಗಿ ಅನಕ್ಷರಸ್ಥೆಯಾಗಿದ್ದ ಆಕೆ ಕಾಣಸಿಗಲೇ ಇಲ್ಲ ಎಂದು ಪೊಲೀಸ್ ಅಧೀಕ್ಷಕ ಧೀರಜ್ ಕುಮಾರ್ ತಿಳಿಸಿದ್ದಾರೆ. 
 
ವಿಷಯ ತಿಳಿದ ಮಹಿಳೆಯ ತಂದೆ  ತನ್ನ ಅಳಿಯನೇ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ದೂರು ನೀಡಿದ. ಪರಿಣಾಮ ಪೊಲೀಸರು ಆತನನ್ನು ಬಂಧಿಸಿದರು. 
 
ಕೊನೆಗೂ ನಾಪತ್ತೆಯಾದ ಮಹಿಳೆ ಅಹಮದಾಬಾದ್‌ನಲ್ಲಿ ಪತ್ತೆಯಾದಳು.ಎರಡು ದಿನಗಳ ತರುವಾಯ ಆಕೆಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರು ಪಡಿಸಲಾಯಿತು. ಆಕೆಯ ಹೇಳಿಕೆಯನ್ನು ದಾಖಲಿಸಿದ ನ್ಯಾಯಾಧೀಶರು ನಿರಪರಾಧಿ ಪತಿಯನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದರು. 

Share this Story:

Follow Webdunia kannada