Webdunia - Bharat's app for daily news and videos

Install App

ಮನೆಯಂಗಳದಲ್ಲೇ ಕ್ಯಾಬೇಜ್, ಕಾಲಿಫ್ಲವರ್ ಬೆಳೆಯಬಹುದು, ಹೇಗೆ ನೀವೇ ನೋಡಿ

Krishnaveni K
ಶುಕ್ರವಾರ, 17 ಜನವರಿ 2025 (16:09 IST)
ಇವರು ಡಾ ರವಿಶಂಕರ್ ಕುಳಮರ್ವ. ವೃತ್ತಿಯಲ್ಲಿ ವೈದ್ಯರಾಗಿದ್ದರೂ ಕೃಷಿಯಲ್ಲಿ ಆಸಕ್ತಿ ಹೊಂದಿದ್ದಾರೆ. ತಮ್ಮ ಮನೆಯಂಗಳದಲ್ಲೇ ದಕ್ಷಿಣ ಕನ್ನಡದಲ್ಲಿ ಅಪರೂಪದ ಬೆಳೆಯಾಗಿರುವ ಕ್ಯಾಬೇಜ್, ನವಿಲುಕೋಸು, ಹೂಕೋಸು ಬೆಳೆದು ಸೈ ಎನಿಸಿಕೊಂಡಿದ್ದಾರೆ. ನೀವೂ ಮನೆಯಲ್ಲಿಯೇ ಸುಲಭವಾಗಿ ಈ ತರಕಾರಿಗಳನ್ನು ಬೆಳೆಯಬೇಕೆಂದರೆ ಅವರು ಒಂದಿಷ್ಟು ಸಲಹೆ ನೀಡಿದ್ದಾರೆ ನೋಡಿ.
 

ಹೂಕೋಸು, ಕ್ಯಾಬೇಜ್ ಅಥವಾ ಎಲೆಕೋಸು ಎರಡೂ ಚಳಿಗಾಲದ ತರಕಾರಿಗಳು. ಅದೂ ದಕ್ಷಿಣ ಕನ್ನಡ, ಕರಾವಳಿ ಜಿಲ್ಲೆಗಳಲ್ಲಿ ಇದನ್ನು ಬೆಳೆಯುವುದು ತೀರಾ ಕಡಿಮೆ. ಇದನ್ನು ದಕ್ಷಿಣ ಭಾರತದ ತಾಪಮಾನದಲ್ಲಿ ಬೆಳೆಯಬೇಕೆಂದರೆ ಈ ಸೀಸನ್ ನಲ್ಲೇ ಬೆಳೆಯುವುದು ಬೆಸ್ಟ್. ಆನ್ ಲೈನ್ ಮೂಲಕ ಇಲ್ಲವೇ ಪರಿಚಯದ ಕೃಷಿಕರೊಬ್ಬರಿಂದ ಗಿಡ ತಂದು ನೆಟ್ಟಿದ್ದಾರೆ. ಗ್ರೋ ಬ್ಯಾಗ್ ನಲ್ಲೂ ಇದನ್ನು ಬೆಳೆಯಬಹುದಾಗಿದೆ. ಆದರೆ ಅವರು ಸದ್ಯಕ್ಕೆ ನೆಲದಲ್ಲೇ ಗಿಡ ಬೆಳೆಸಿದ್ದಾರೆ.

ಗಿಡ ನೆಡಲು ಬೆಸ್ಟ್ ಟೈಂ ಯಾವುದು?
ಈ ಗಿಡಗಳನ್ನು ನೆಡಲು ಬೆಸ್ಟ್ ಟೈಂ ಎಂದರೆ ಅಕ್ಟೋಬರ್ ನಲ್ಲಿ. ಚಳಿ ಇನ್ನೇನು ಆರಂಭವಾಗುವ ಸಂದರ್ಭದಲ್ಲಿ ಗಿಡ ನೆಟ್ಟರೆ ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುವ ಹೊತ್ತಿಗೆ ಕಟಾವಿಗೆ ಬರುತ್ತದೆ. ಎರೆಹುಳದ ಗೊಬ್ಬರ ಇದಕ್ಕೆ ಬೆಸ್ಟ್ ಪೋಷಕಾಂಶ.  30 ದಿನಕ್ಕೊಮ್ಮೆ ಎರೆಹುಳ ಗೊಬ್ಬರ ಹಾಕುತ್ತಿದ್ದರೆ ಸಾಕು. ಕ್ಯಾಬೇಜ್ ಬೆಳೆದು ಕಟಾವಿಗೆ ಬರಲು 90 ರಿಂದ 120 ದಿನ ಬೇಕು. ಕಾಲಿಫ್ಲವರ್ ಅಥವಾ ಹೂಕೋಸು ಬೆಳೆದು ಸಿಗಲು 90 ದಿನ ಬೇಕು. ನವಿಲು ಕೋಸು 45 ರಿಂದ 60 ದಿನಗಳೊಳಗಾಗಿ ಬೆಳೆ ಮುಗಿಯುತ್ತದೆ. 

ಹುಳ ಬಾರದಂತೆ ಆರೈಕೆ ಹೇಗೆ?
ಪ್ರತಿ ದಿನ ಬೆಳಿಗ್ಗಿನ ಹೊತ್ತು ನೀರು ಹಾಯಿಸಬೇಕು. ಇನ್ನು ಹುಳ, ಹುಪ್ಪಟೆಗಳ ಕಾಟ ತಪ್ಪಿಸಲು ಕಹಿಬೇವಿನ ಎಣ್ಣೆ, ಸೋಪ್ ಪೌಡರ್ ನೀರಿಗೆ ಹಾಕಿ ಮಿಕ್ಸ್ ಮಾಡಿ 15 ದಿನಕ್ಕೊಮ್ಮೆ ಸ್ಪ್ರೇ ಮಾಡಬೇಕಾಗುತ್ತದೆ. ಸಾವಯವ ರೀತಿಯಲ್ಲಿ ಮನೆಯಲ್ಲೇ ಸುಲಭವಾಗಿ ಕ್ಯಾಬೇಜ್, ಕಾಲಿಫ್ಲವರ್ ನ್ನು ಈ ರೀತಿ ಬೆಳೆಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೆ.1ರಂದು ಧರ್ಮಸ್ಥಳ ಚಲೋ, ಬೃಹತ್ ಸಮಾವೇಶ:ವಿಜಯೇಂದ್ರ

ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ: ಎಸ್.ಆರ್.ವಿಶ್ವನಾಥ್

ಟಿಪ್ಪು ಸುಲ್ತಾನ್ ದಸರಾ ಮಾಡಿದ್ರು: ತನ್ವೀರ್ ಸೇಠ್ ಹೇಳಿಕೆ

ಬಾನು ಮುಷ್ತಾಕ್ ಹಿಂದೂ ಸಂಸ್ಕೃತಿ ಒಪ್ಪಿ ಬರ್ತಾರಾ: ಬಿವೈ ವಿಜಯೇಂದ್ರ

ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿಗೆ ಸೂಚಿಸಿದ ದೆಹಲಿ ನಾಯಕ ಯಾರು: ತೇಜಸ್ವಿ ಸೂರ್ಯ

ಮುಂದಿನ ಸುದ್ದಿ
Show comments