Select Your Language

Notifications

webdunia
webdunia
webdunia
webdunia

ಕೋಳಿಗಳ ಜತೆ ಹುಂಜದ 'ಫ್ಲರ್ಟಿಂಗ್' :ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

ಕೋಳಿಗಳ ಜತೆ ಹುಂಜದ 'ಫ್ಲರ್ಟಿಂಗ್' :ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು
ಲಖನೌ , ಸೋಮವಾರ, 12 ಜನವರಿ 2015 (17:17 IST)
ಉತ್ತರ ಪ್ರದೇಶದ ಲಖೀಮಪುರ ಖೇರಿ ಜಿಲ್ಲೆಯಲ್ಲಿ ವಿಲಕ್ಷಣಕಾರಿಯಾದ ಪ್ರಕರಣೊಂದು ಬೆಳಕಿಗೆ ಬಂದಿದೆ. ಪಕ್ಕದ ಮನೆ ಕೋಳಿ ತಮ್ಮ ಮನೆಯ ಕೋಳಿಗೆ ನೀಡುತ್ತಿದ್ದ ವಿಪರೀತ ಕಾಟದಿಂದ ರೋಸಿ ಹೋಗಿದ್ದ ದಂಪತಿಗಳಿಬ್ಬರು ಪೊಲೀಸ್ ಠಾಣೆಗೆ ಹೋಗಿ ಈ ಕುರಿತು ದೂರು ದಾಖಲಿಸಿದ್ದಾರೆ. 
 
ನಿಘಾಸನ್ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪಕ್ಕದ ಮನೆಯ ನಿವಾಸಿ ರಾಮು ಎಂಬುವವರಿಗೆ ಸೇರಿದ ಹುಂಜ ನಮ್ಮ ಮನೆಯ ಹಿಂದೆ ನಿರ್ಮಾಣ ಮಾಡಿರುವ ಗೂಡಿನೊಳಕ್ಕೆ ಹೊಕ್ಕು ನಾವು ಸಾಕಿರುವ ಕೋಳಿಗಳಿಗೆ ವಿಪರೀತ ಹಿಂಸೆ ನೀಡುತ್ತಿದೆ. ಇಲ್ಲಿಯವರೆಗೆ ಸುಮಾರು 6-7 ಕೋಳಿಗಳಿಗೆ ಇದು ವಿಪರೀತ ತೊಂದರೆ ನೀಡಿದೆ ಎಂದು ಈಶ್ವರ್‌ದಿನ್  ಮತ್ತು ಅವರ ಪತ್ನಿ ರಾಮಗುನಿ ಎಂಬುವವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. 
 
 ಜನವರಿ 9 ರಂದು ರಾತ್ರಿ ಈ  ಪ್ರಕರಣವನ್ನು ದಾಖಲಿಸಲಾಗಿದೆ. ಹುಂಜ ಮತ್ತು ಕೋಳಿಗ ಜಗಳದ ಕಾರಣದಿಂದ ಎರಡು ಕುಟುಂಬಗಳ ನಡುವಿನ ಸಂಬಂಧ ಹಳಸಿ ಹೋಗಿದೆ. ಸದಾ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆಯುತ್ತಿರುತ್ತದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ಸಹ ಬೇಸತ್ತಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದ ತನಿಖೆ ಪ್ರಾರಂಭಿಸಲಾಗಿದೆ ಎಂದು ನಿಘಾಸನ್ ಪೊಲೀಸ್ ಠಾಣೆಯ ಅಧಿಕಾರಿ ರಾಮ್ ಕುಮಾರ್ ಯಾದವ್ ತಿಳಿಸಿದ್ದಾರೆ. 

Share this Story:

Follow Webdunia kannada