Webdunia - Bharat's app for daily news and videos

Install App

ಪಟೇಲ್ ಸಮುದಾಯದ ಆಶಾಕಿರಣ ಹಾರ್ದಿಕ್‌ಗೆ ಅಂಟಿದ ಕಳಂಕ

Webdunia
ಬುಧವಾರ, 2 ಸೆಪ್ಟಂಬರ್ 2015 (16:37 IST)
-ಗುಣವರ್ಧನ ಶೆಟ್ಟಿ 
 22 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ಗುಜರಾತಿನ ಯುವಕರಿಗೆ ಆಶಾದೀಪವಾಗಿ ಹೊರಹೊಮ್ಮಿದ್ದರು.  ಪಟೇಲ್ ಸಮುದಾಯಕ್ಕೆ ಸೇರಿದ ಹಾರ್ದಿಕ್ ಪಟೇಲ್ ಒಬಿಸಿ ಕೆಟಗರಿಯಲ್ಲಿ ತಮ್ಮ ಸಮುದಾಯದ ಜನರಿಗೆ  ಸರ್ಕಾರಿ ಉದ್ಯೋಗಗಳಲ್ಲಿ ಮತ್ತು ಕಾಲೇಜುಗಳಲ್ಲಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಚಳವಳಿ ಹೂಡಿದ್ದಾರೆ. ಕಳೆದ 40 ದಿನಗಳಿಂದ ಗುಜರಾತ್ ರಾಜಕೀಯದಲ್ಲಿ ತಮ್ಮ ಉಪಸ್ಥಿತಿಯನ್ನು ಸಾರಿ ಹೇಳಿದ ಹಾರ್ದಿಕ್ ಕಾಂಗ್ರೆಸ್‌ ಪಕ್ಷಕ್ಕೆ ನಿಕಟವಾಗಿದ್ದಾರೆಂದು ಹೇಳಲಾಗುತ್ತಿದೆ.ಆದರೆ ತಮಗೆ ಯಾವುದೇ ರಾಜಕೀಯ ಸಂಬಂಧ ಇಲ್ಲ ಎಂದು ಪಟೇಲ್ ಹೇಳಿದ್ದಾರೆ.

ಹಾರ್ದಿಕ್ ತಂದೆ ಭಾರತಿಬಾಯಿ ಪಟೇಲ್ ಮಧ್ಯಮ ಮಟ್ಟದ ಬಿಜೆಪಿ ಕಾರ್ಯಕರ್ತ. ಕಳೆದ ಕೆಲವು ದಿನಗಳಿಂದ ಪಟೇಲ್ ಸಮುದಾಯದ ಆಶಾಕಿರಣವಾಗಿ ಹಾರ್ದಿಕ್ ಮಿಂಚಿದ್ದಾರೆ.  ಅವರ ಬೆಂಬಲಿಗರು ಹಾರ್ದಿಕ್‌ನನ್ನು ನವ ಮೋದಿ ಎಂದು ಕರೆದಿದ್ದಾರೆ.

ಕೆಲವರು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಜತೆ ಅವರನ್ನು  ಹೋಲಿಸಿದ್ದಾರೆ. ಅವರಂತೆ ತಾನಾಗಬೇಕು ಎಂಬ ಹಂಬಲವನ್ನೂ ಹಂಬಲವನ್ನು ಹಾರ್ದಿಕ್ ಹೊಂದಿದ್ದಾರೆ.ಕಳೆದ ಒಂದು ತಿಂಗಳಿಂದ ಗುಜರಾತಿನ 12 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮೀಸಲಾತಿ ಕುರಿತು ತಮ್ಮ ಧ್ವನಿ ಎತ್ತಿದ್ದಾರೆ.

 ಯಾವುದೇ ಕೃಷಿಭೂಮಿ ಹೊಂದಿರದ ಕೃಷಿ ಕಾರ್ಮಿಕರಿಗೆ ಶೇ. 5 ಕೋಟಾ ನೀಡಬೇಕೆಂದು ಕೂಡ ಹಾರ್ದಿಕ್ ಹೋರಾಟ ನಡೆಸಿದ್ದಾರೆ. ಬಿಸಿರಕ್ತದ ಯುವಕ ಹಾರ್ದಿಕ್ ಗುಜರಾತಿನ ರಾಜಕೀಯದಲ್ಲಿ ಒಂದು ಶಕ್ತಿಯಾಗಿ ಬೆಳೆಯುವ ಎಲ್ಲಾ ಲಕ್ಷಣವನ್ನು ತೋರಿಸಿದ್ದಾರೆ.  ಆದರೆ ಹಾರ್ದಿಕ್ ವರ್ಚಸ್ಸಿಗೆ ಈಗ ಕಳಂಕವೊಂದು ಅಂಟಿಕೊಂಡಿದೆ. ಹಾರ್ದಿಕ್ ಪಟೇಲ್ ಅವರು ಯುವತಿಯೊಂದಿಗೆ ಅಶ್ಲೀಲ ಭಂಗಿಯಲ್ಲಿ ಸರಸವಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಹಾರ್ದಿಕ್‌ದ್ದಲ್ಲ. ಅವರ ಹೆಸರಿಗೆ ಮಸಿಬಳಿಯುವುದಕ್ಕೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ ಎಂದು ಬೆಂಬಲಿಗರು ಹೇಳಿದ್ದಾರೆ.

ಹಾರ್ದಿಕ್ ಉತ್ಸಾಹವನ್ನು, ಹೋರಾಟವನ್ನು  ಮೊಳಕೆಯಲ್ಲಿಯೇ ಚಿವುಟಿಹಾಕುವ ಪ್ರಯತ್ನವೊಂದು ನಡೆಯುತ್ತಿರಬಹುದೆಂಬ ಸಂಶಯ ಆವರಿಸಿದೆ. ಆದರೂ ಸರ್ದಾರ್ ಪಟೇಲ್ ರೀತಿ ಖ್ಯಾತರಾಗಬೇಕೆಂಬ ಹಾರ್ದಿಕ್ ಆಸೆಗೆ ಈಗ ತಣ್ಣೀರೆರಚಿದಂತಾಗಿದೆ.  ಸ್ವಚ್ಛ ಚಾರಿತ್ರ್ಯದ ವ್ಯಕ್ತಿಯನ್ನು ಮಾತ್ರ ಜನರು ನಾಯಕನನ್ನಾಗಿ ಬಯಸುವುದರಿಂದ ಹಾರ್ದಿಕ್ ಆ ಕಳಂಕದಿಂದ ಹೊರಬರಬೇಕಾಗಿದೆ. ವಿಡಿಯೋ ನಕಲಿಯಾಗಿದ್ದು, ಅದರಲ್ಲಿರುವ  ವ್ಯಕ್ತಿ ತಾವಲ್ಲ ಎಂದು ಸಾಬೀತು ಮಾಡಬೇಕಾದ ಹೊಣೆಗಾರಿಕೆ ಹಾರ್ದಿಕ್ ಮೇಲೆ ಬಿದ್ದಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments