ಕಾರ್ ಗುದ್ದಿ ದೆವ್ವದ ಸ್ಥಿತಿ ಗಂಭೀರ (ವೀಡಿಯೋ)

Webdunia
ಸೋಮವಾರ, 3 ಆಗಸ್ಟ್ 2015 (14:02 IST)
ಮಧ್ಯರಾತ್ರಿಯಲ್ಲಿ ನೀವೊಬ್ಬರೇ ಕಾರ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ದೆವ್ವವೊಂದು ಕಾರ್ ನಿಲ್ಲಿಸಲೆತ್ನಿಸಿದರೆ ನೀವೇನು ಮಾಡುತ್ತೀರಾ? ನಡುರಾತ್ರಿಯಲ್ಲಿ ಕಾರ್ ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನ ಜತೆ ಇದು ನಡೆದಿದೆ. ಅದಕ್ಕೆ ಆತನೇನು ಮಾಡಿದ ಎನ್ನುತ್ತೀರಾ? ಮುಂದೆ ಓದಿ.
 

 
ವ್ಯಕ್ತಿಯೊಬ್ಬ ಕಾರ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಉದ್ದನೆಯ ಕಪ್ಪು ಕೂದಲಿನ, ಬಿಳಿ ಬಟ್ಟೆ ಧರಿಸಿದ್ದ ದೆವ್ವವೊಂದು ಕಾರ್ ಮುಂದೆ ಬಂದು ನಿಂತಿದೆ. ಬೆಚ್ಚಿ ಬಿದ್ದ ಆತ ಕಾರನ್ನು ಹಿಂದಕ್ಕೆ ಚಲಾಯಿಸಿದ್ದಾನೆ. ನೋಡಿದರೆ ಅಲ್ಲೂ ಒಂದು ದೆವ್ವ. ಮುಂದೇನು ಮಾಡಬೇಕು ಎನ್ನುವಷ್ಟರಲ್ಲಿ ಅದು ಕಾರ್ ಹಿಡಿದುಕೊಂಡು ಓಡಿ ಬರಲೆತ್ನಿಸಿದೆ. ಈ ಸಮಯದಲ್ಲಿ ಏನು ಮಾಡಬೇಕು ಎಂದು ತೋಚದ ಕಾರು ಡ್ರೈವರ್ ನೇರವಾಗಿ ಮುಂದುಗಡೆ ಇದ್ದ ದೆವ್ವಕ್ಕೆ ಗುದ್ದಿದ್ದಾನೆ. ಪರಿಣಾಮ ದೆವ್ವ ಮನುಷ್ಯ ಧ್ವನಿಯಲ್ಲಿ ಕಿರುಚುತ್ತ ನೆಲಕ್ಕುರುಳಿದೆ. ಆಗ ಇನ್ನೊಂದು ದೆವ್ವ ಕೆಳಕ್ಕೆ ಬಿದ್ದ ದೆವ್ವದ ರಕ್ಷಣೆಗೆ ಧಾವಿಸಿದೆ. ಇದು ನಡೆದಿರುವುವುದು ಸತ್ಯ . ಆದರೆ ದೆವ್ವ ಮಾತ್ರ ನಕಲಿ.
 
ಈ ಘಟನೆಯ ವಾಸ್ತವ ಏನೆಂದರೆ ಗುಂಪೊಂದು ದೆವ್ವದ  ರೀತಿಯಲ್ಲಿ ವೇಷ ತೊಟ್ಟು  ರಾತ್ರಿ ಓಡಾಡುತ್ತಿದ್ದವರನ್ನು ಹೆದರಿಸುತ್ತಿತ್ತು. ಈ ಚೆಲ್ಲಾಟವೀಗ ಅಪಘಾತದಲ್ಲಿ ಅಂತ್ಯ ಕಂಡಿದೆ. 
 
ಈ ದೆವ್ವದ ವೀಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಇದು ನಡೆದಿರುವುದು ಎಲ್ಲಿ ಎಂಬ ಮಾಹಿತಿ ಮಾತ್ರ ಸಿಕ್ಕಿಲ್ಲ. 
 
ಕಾರ್ ಗುದ್ದಿ ದೆವ್ವದ ಸ್ಥಿತಿ ಗಂಭೀರ (ವೀಡಿಯೋ)

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

25 ಪ್ರಕರಣಗಳಲ್ಲಿ ನ್ಯಾಯಾಲಯದ ವಾರೆಂಟ್ ತಪ್ಪಿಸಿ ಪರಾರಿಯಾಗಿದ್ದವ ಕೊನೆಗೂ ಅರೆಸ್ಟ್‌

MGNREGA ಮರುನಾಮಕರಣದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಕಿಡಿ, ನಾಳೆಯಿಂದ ಪ್ರತಿಭಟನೆ

ದಿಡೀರನೆ ದೆಹಲಿ ಜನತೆ ಬಳಿ ಕ್ಷಮೆಯಾಚಿಸಿದ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ

ಸಿಡ್ನಿ ಗುಂಡಿನ ದಾಳಿಕೋರರಲ್ಲಿ ಒಬ್ಬಾತ ಹೈದರಾಬಾದ್‌ ಮೂಲದವ, ಇಲ್ಲಿದೆ ಮಾಹಿತಿ

ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದಲ್ಲಿ ಧಾಂದಲೆ: ಪ.ಬಂಗಾಳ ರಾಜಕೀಯದಲ್ಲಿ ಭಾರೀ ಬೆಳವಣಿಗೆ

Show comments