Select Your Language

Notifications

webdunia
webdunia
webdunia
webdunia

ಗಣೇಶೋತ್ಸವ: ಗಣೇಶನ ಸ್ಥಾಪನೆಗೆ ಶುಭ ಮತ್ತು ಮಂಗಲಕಾರಿ ಮುಹೂರ್ತ ಯಾವುದು ಗೊತ್ತಾ?

ಗಣೇಶೋತ್ಸವ: ಗಣೇಶನ ಸ್ಥಾಪನೆಗೆ ಶುಭ ಮತ್ತು ಮಂಗಲಕಾರಿ ಮುಹೂರ್ತ ಯಾವುದು ಗೊತ್ತಾ?
ಚೆನ್ನೈ , ಶುಕ್ರವಾರ, 29 ಆಗಸ್ಟ್ 2014 (10:01 IST)
ಇಂದು  ಗಣೇಶನ ಸ್ಥಾಪನೆ ಮಾಡಲಾಗುವುದು. ಗಣೇಶನ ವಿಸರ್ಜನೆ ಸೋಮವಾರ, 8 ಸೆಪ್ಟೆಂಬರ್‌‌ವರೆಗೆ ನಡೆಯಲಿದೆ. ಈ ರೀತಿಯಾಗಿ 11 ದಿನಗಳವರೆಗೆ ಗಣೇಶೋತ್ಸವ ನಡೆಯುತ್ತದೆ. ಗಣೇಶನ ಸ್ಥಾಪನೆ ಶುಭ ಮುಹೂರ್ತದಲ್ಲಿಯೇ ಮಾಡಬೇಕು. ದೇವತೆಗಳ ದೇವ ಭಗವಾನ್ ಗಣೇಶ ಎಲ್ಲಾ ಶುಭ ಕಾರ್ಯಗಳಲ್ಲಿ ಪ್ರಥಮ ಪೂಜಿತನಾಗುತ್ತಾನೆ. ಈ ಬಾರಿ ಗಣೇಶನ ಸ್ಥಾಪನೆ ಶುಕ್ರವಾರ ಆಗಲಿದೆ. ಈ ದಿನ ಹಸ್ತ ನಕ್ಷತ್ರ, ಶುಭ ಯೋಗ ಮತ್ತು ಕರಣ ವಣಿಜ ಇರುವುದರಿಂದ ಈ ಅತ್ಯಂತ ಶುಭವಾಗಿದೆ. 
 
ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯ ದಿನದಂದು ಮಾತೆ ಪಾರ್ವತಿಯ  ಮೈಮೇಲಿನ ಸುಗಂಧ ದ್ರವ್ಯಗಳಿಂದ ಭಗವಾನ ಗಣೇಶನ ಸೃಷ್ಟಿಯಾಯಿತು. ಮಧ್ಯಾನ ಗಣೇಶನ ಜನವಾಗಿದ್ದರಿಂದ ಗಣೇಶನ ಸ್ಥಾಪನೆ ಶುಭ, ಲಾಭ, ಅಮೃತಲ್ಲಿ ಮಧ್ಯಾನ ಸ್ಥಾಪನೆ ಮಾಡಲಾಗುತ್ತದೆ. 
 
ಶುಭ ಮಂಗಲಕಾರಿ ಮುಹೂರ್ತ: ಈ ಬಾರಿ ಶುಭ ಚೌಘಡಿಯಾ ಮಧ್ಯಾಹ್ನ 12.10ರಿಂದ 1.25ರವರೆಗೆ ಇರಲಿದೆ. ಈ ಸಮಯದಲ್ಲಿ ಗಣೇಶನ ಸ್ಥಾಪನೆ ಮಾಡುವುದು ಶುಭವಾಗಿರುತ್ತದೆ. 
 
ಈ ದಿನ ರಾತ್ರಿ ಚಂದ್ರನನ್ನು ನೋಡಬಾರದು ಎನ್ನಲಾಗುತ್ತದೆ. ಚಂದ್ರನನ್ನು ನೋಡಿದರೆ ಅಪವಾದ ತಪ್ಪಿದ್ದಲ್ಲ. ಒಂದು ವೇಳೆ ಚಂದ್ರನನ್ನು ನೋಡಿದರೆ, ನಿವಾರಣೆಗಾಗಿ  ಸ್ಯಮಂತಕನ ಕಥೆ ಶ್ರವಣ ಮಾಡಬೇಕಾಗುವುದು ಅವಶ್ಯಕವಾಗಿದೆ
 
ಪೂಜೆ ಮಾಡುವ ವಿಧಾನ: ಸ್ನಾನವನ್ನು ಮಾಡಿ ' ಮಮ್‌ ಸರ್ವಕರ್ಮಸಿದ್ದಿಯೆ ಸಿದ್ದಿವಿನಾಯಕಪೂಜನಮಃ ಕರಿಷ್ಯೆ'ಯ ಸಂಕಲ್ಪ ಮಾಡಿ, ಸ್ವಸ್ತಿಕ ಮಂಡಲದಲ್ಲಿ ಪ್ರತ್ಯಕ್ಷ ಅಥವಾ ಸ್ವರ್ಣಾದಿ ನಿರ್ಮಿತ ಮೂರ್ತಿ ಸ್ಥಾಪನೆ ಮಾಡಿ ವಿಧಿವಿಧಾನಗಳಿಂದ ಪೂಜೆ ಮಾಡಿ ಮತ್ತು 12 ಹೆಸರಿನ ಪೂಜೆ ಮತ್ತು 21 ಗರಿಕೆ ಹುಲ್ಲಿನ ಪೂಜೆ ಮಾಡಿ ಧೂಪ ದೀಪದಿಂದ ಉಳಿದ ಪೂಜೆ ಮುಕ್ತಾಯಗೊಳಿಸಿ

Share this Story:

Follow Webdunia kannada