Webdunia - Bharat's app for daily news and videos

Install App

ಮೊದಲ ಬಾರಿಗೆ ಖಾಸಗಿ ದರ್ಬಾರ್ ನಡೆಸಿದ ಅರಸ ಯದುವೀರ್

Webdunia
ಮಂಗಳವಾರ, 13 ಅಕ್ಟೋಬರ್ 2015 (15:25 IST)
ಮೈಸೂರು ರಾಜಮನೆತನದ ನೂತನ ಉತ್ತರಾಧಿಕಾರಿ ಯದುವೀರ್ ಕೃಷ್ಣದತ್ತ ಒಡೆಯರ್ ಅವರ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ನಾಡಹಬ್ಬ ದಸರಾ ನಡೆಯುತ್ತಿದ್ದು, ಹಬ್ಬದ ಆರಂಭದ ದಿನವಾದ ಇಂದು ಅರಸ ಯದುವೀರ್ ಖಾಸಗಿ ದರ್ಬಾರ್ ನಡೆಸಿದರು.  
 
ಇಂದು ಬೆಳಗ್ಗೆ 10.05ರಿಂದ 10.55ರ ನಡುವೆ ಇದ್ದ ಧನುರ್ ಶುಭ ಲಗ್ನದಲ್ಲಿ ಕಾರ್ಯ ಹಮ್ಮಿಕೊಂಡ ಒಡೆಯರ್, ಆರಂಭಿಕವಾಗಿ ಕಳಸ ಪೂಜೆ ನೆರವೇರಿಸಿದರು. ಬಳಿಕ ರತ್ನ ಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕಿದರು. ತರುವಾಯ ಪುರೋಹಿತರು ಒಡೆಯರ್ ಅವರಿಗೆ ಪ್ರಸಾದ ವಿತರಿಸಿದರು. ಬಳಿಕ ಹೊಗಳು ಭಟ್ಟರಿಂದ ಮಹಾರಾಜರಿಗೆ ಬಹುಪರಾಕ್ ಕೂಗಲಾಗಿ ಸಿಹಾಸನ ಏರಿ ಖಾಸಗಿ ದರ್ಬಾರ್ ನಡೆಸಿದರು. 
 
ಇನ್ನು ಯದುವೀರ್ ಅವರು ಇತ್ತೀಚೆಗಷ್ಟೇ ಸಂಸ್ಥಾನದ ನೂತನ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಇದು ಮೊದಲ ಬಾರಿಯ ದರ್ಬಾರ್ ಆಗಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments