Webdunia - Bharat's app for daily news and videos

Install App

ಹಾರುವ ಹಾವನ್ನು ನೋಡಿದ್ದೀರಾ?

Webdunia
ಗುರುವಾರ, 23 ಜುಲೈ 2015 (13:15 IST)
ನೀವೆಂದಾದರೂ ಹಾವು ಹಕ್ಕಿಯಂತೆ ಹಾರುವುದನ್ನು ಕಂಡಿದ್ದೀರಾ? ಹಾವು ಹಾರತ್ತೆ ಎಂದರೆ ನಂಬುತ್ತೀರಾ? ಇಲ್ಲ ಎನ್ನುತ್ತೀರಾ? ಸಾಮಾಜಿಕ ಜಾಲತಾಣಗಳಲ್ಲಿ ಹಾವು ಹಾರಾಡುತ್ತಿರುವ ಫೋಟೋ ಒಂದು ವೈರಲ್ ಆಗಿ ಹರಿದಾಡುತ್ತಿದೆ. ಈ ಫೋಟೊಗಳು ನಿಜವೋ ಸುಳ್ಳೊ ಎಂಬುದು ಇನ್ನೂ ದೃಢಪಟ್ಟಿಲ್ಲ. ಇದನ್ನು ಎಲ್ಲಿ ಕ್ಲಿಕ್ಕಿಸಲಾಯಿತು ಎಂದು ಕೂಡ ಚರ್ಚೆ ನಡೆಯುತ್ತಿದೆ.
ಗುಜರಾತ್‌ನಲ್ಲಿ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್  ಆಗಿ ಹರಿದಾಡುತ್ತಿದೆ. ಗುಜರಾತಿನ ಮೊರ್ಬಿ ನಗರದ ಕೆಲ ಯುವಕರು ತಾವು ಇದನ್ನು ಕ್ಲಿಕ್ಕಿಸಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಈ ಫೋಟೋವನ್ನು ಕ್ಲಿಕ್ಕಿಸಿದ್ದು ತಾವು ಎಂದು ಹೇಳಿಕೊಳ್ಳುವವರ ಪಟ್ಟಿ ದೊಡ್ಡದಾಗುತ್ತಿದೆ. 
 
ಆದರೆ ಹಲವರು ಚಿತ್ರದಲ್ಲಿ ಹಾವು ಹಾರುತ್ತಿಲ್ಲ. ಯಾವುದೋ ಪಕ್ಷಿ ಹಾವನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹೋಗುತ್ತಿರುವಾಗ ಜಾರಿ ಹಾವು ಕೆಳಕ್ಕೆ ಬೀಳುತ್ತಿದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಫೋಟೊಶಾಪ್‌ನಲ್ಲಿ ಎಡಿಟಿಂಗ್  ಮಾಡಿ ಈ ಚಿತ್ರವನ್ನು ಹಾಕಲಾಗಿದೆ ಎನ್ನುತ್ತಿದ್ದಾರೆ. 
 
ಇದರ ಸತ್ಯಾಸತ್ಯತೆ ಇನ್ನೂ ಬೆಳಕಿಗೆ ಬರಬೇಕಿದೆ. ಆದರೆ ಈ ಚಿತ್ರ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವನ್ನು ಮೂಡಿಸಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments