ತಜ್ಞರ ಪ್ರಕಾರ ಈ ಐದು ಲಕ್ಷಣಗಳು ಕ್ಯಾನ್ಸರ್ ನ ಆರಂಭಿಕ ಸೂಚನೆಗಳಾಗಿರುತ್ತವೆ

Krishnaveni K
ಶುಕ್ರವಾರ, 11 ಜುಲೈ 2025 (10:23 IST)
ಇತ್ತೀಚೆಗಿನ ಕೆಲವು ವರ್ಷಗಳಿಂದ ಹೃದಯದ ಸಮಸ್ಯೆಯಂತೇ ಕ್ಯಾನ್ಸರ್ ಸಮಸ್ಯೆಯೂ ಹೆಚ್ಚಾಗುತ್ತಿದೆ. ಕಳೆದ 15 ವರ್ಷಗಳಲ್ಲಿ ಜೀವನಶೈಲಿಯಿಂದ ಬರುವ ರೋಗಗಳು ಹೆಚ್ಚಾಗಿದ್ದು ಅದರಲ್ಲಿ ಕ್ಯಾನ್ಸರ್ ಕೂಡಾ ಒಂದಾಗಿದೆ.

ನಮ್ಮ ಒತ್ತಡದ ಜೀವನ ಶೈಲಿ ಮತ್ತು ಆಹಾರ ಶೈಲಿಗಳಿಂದಾಗಿ ಕ್ಯಾನ್ಸರ್ ಬರಬಹುದಾಗಿದೆ. ಕ್ಯಾನ್ಸರ್ ರೋಗ ಆರಂಭಿಕ ಹಂತದಲ್ಲಿದ್ದರೆ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದೆ. ಹೀಗಾಗಿ ಇದನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು ಮುಖ್ಯವಾಗಿದೆ.

ಕ್ಯಾನ್ಸರ್ ಕಣ ನಮ್ಮ ದೇಹವನ್ನು ಹೊಕ್ಕರೆ ಅದರ ಕೆಲವು ಲಕ್ಷಣಗಳು ದೇಹದಲ್ಲಿ ಕಂಡುಬರುತ್ತವೆ. ತಜ್ಞರು ಹೇಳುವ ಪ್ರಕಾರ ಈ ಐದು ಲಕ್ಷಣಗಳು ಕ್ಯಾನ್ಸರ್ ನ ಆರಂಭಿಕ ಸೂಚನೆಯಾಗಿರುತ್ತದೆ. ಅವುಗಳು ಯಾವುವು ಎಂದು ಗಮನಿಸಿ.

-ಮೂತ್ರ ವಿಸರ್ಜಿಸುವಾಗ ರಕ್ತ ಸ್ರಾವ ಅಥವಾ ಅಸಹಜತೆ
-ಮೂಗು, ಗರ್ಭಕೋಶ,ಬಾಯಿಯಿಂದ ಅಸಹಜವಾಗಿ ರಕ್ತಸ್ರಾವವಾಗುವುದು
-ಊತ/ಗಡ್ಡೆ ಅಥವಾ ದೇಹದ ಯಾವುದಾದರೂ ಭಾಗದಲ್ಲಿ ಗಂಟುಗಳು ಕಾಣಿಸಿಕೊಂಡು ಸಾಮಾನ್ಯ ಚಿಕಿತ್ಸೆಯಿಂದ ಗುಣವಾಗದೇ ಇದ್ದರೆ
-ಚರ್ಮದ ಬಣ್ಣ ಬದಲಾಗುವುದು ಅಸಹಜವಾಗುವುದು
-ಕಾರಣವಿಲ್ಲದೇ ಜ್ವರ ಬರುವುದು ಮತ್ತು ಇದ್ದಕ್ಕಿದ್ದಂತೆ ತೂಕ ಕಳೆದುಕೊಳ್ಳುವುದು ಕ್ಯಾನ್ಸರ್ ನ ಲಕ್ಷಣವಾಗಿರಬಹುದು.
ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಯಾಕೆಂದರೆ ಎಷ್ಟೋ ರೋಗಿಗಳು ಇಂತಹ ಆರಂಭಿಕ ಲಕ್ಷಣಗಳನ್ನು ಅಲಕ್ಷಿಸಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಕನ ಕನಸಿನಿಂದ ಮೊದಲು ಹೊರಬನ್ನಿ: ಪ್ರಿಯಾಂಕ್‌ ಖರ್ಗೆಗೆ ಸಿ.ಟಿ.ರವಿ ಟಾಂಗ್‌

ಯುವತಿ ಮೇಲೆ ಗ್ಯಾಂಗ್‌ರೇಪ್‌ ಬೆನ್ನಲ್ಲೇ ಮಹಿಳೆಯರ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ

ಪಾಕಿಸ್ತಾನ ಮೇಲೆ ಮುಗಿಬಿದ್ದ ಅಫ್ಗನ್: ಗುಂಡಿನ ಕಾಳಗದಲ್ಲಿ 58 ಸೈನಿಕರ ಹತ್ಯೆ

ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ನಿಷೇಧ ಹೇರಲು ಸಚಿವ ಪ್ರಿಯಾಂಕ್‌ ಖರ್ಗೆ ಒತ್ತಾಯ

ಆರ್‌ಎಸ್‌ಎಸ್‌ ಸಮವಸ್ತ್ರದಲ್ಲೇ ಧರಣಿ ಕುಳಿತ ಶಾಸಕ ಮುನಿರತ್ನ: ತಿರುಗೇಟು ನೀಡಿದ ಡಿಕೆಶಿ

ಮುಂದಿನ ಸುದ್ದಿ
Show comments