Select Your Language

Notifications

webdunia
webdunia
webdunia
webdunia

ಫೆಂಗ್ ಶುಯಿ -ಪ್ರೀತಿ, ಸಂಬಂಧ

ಫೆಂಗ್ ಶುಯಿ -ಪ್ರೀತಿ, ಸಂಬಂಧ
ಚೆನ್ನೈ , ಬುಧವಾರ, 19 ನವೆಂಬರ್ 2014 (16:35 IST)
1. ನೈಋತ್ಯ ಮೂಲೆಯು ಪ್ರೀತಿಯ ವಿಷಯಕ್ಕೆ ಸಂಬಂಧಿತವಾಗಿದ್ದು ಆದುದರಿಂದ ಈ ದಿಶೆಗೆ ಹಚ್ಚಿನ ಗಮನವನ್ನು ಕೊಡಬೇಕು. ಈ ದಿಶೆಯಲ್ಲಿ ಪ್ರೀತಿ, ಪ್ರೇಮ, ಕುಟುಂಬ ಸ್ನೇಹವು ದೃಢವಾಗಿರುತ್ತದೆ.
 
2. ಕುಟುಂಬದಲ್ಲಿ ನಿಮ್ಮ ಸಂಬಂಧವು ಸುದೃಢವಾಗಿರಬೇಕಾದರೆ ನಿಮ್ಮ ಕುಟುಂಬ ಫೋಟೋವನ್ನು ನೈಋತ್ಯ ಭಾಗದಲ್ಲಿರಿಸಿ, ಗಮನಿಸಿ ಅವುಗಳು ನಿಮ್ಮ ಕುಟುಂಬದ ಸಂತೋಷದ ಕ್ಷಣಗಳನ್ನು ನೆನಪಿಸುವ ಫೋಟೊ ಅಥವಾ ವರ್ಣಚಿತ್ರಗಳಾಗಿರಬೇಕು.
 
3. ನಿಮ್ಮ ಪ್ರಣಯವು ಸಫಲವಾಗಬೇಕಾದರೆ ಡ್ರಾಗನ್ ಶಿರವಿರುವ ಆಮೆಯ ಪ್ರತಿಕೃತಿಯ ಬಾಯಿಗೆ ಕೆಂಪು ರಿಬ್ಬನ್‌ನ ತುಂಡನ್ನಿರಿಸಿ.
 
4.ಮಂದ ಬೆಳಕಿನ ದೀಪಗಳನ್ನು ನೈಋತ್ಯ ಭಾಗದಲ್ಲಿರಿಸುವುದರಿಂದ ಪ್ರಣಯ ಪೂರಿತ ವಾತಾವರಣ ಸೃಷ್ಟಿಯಾಗುವುದು.
 
5.ನಸುಗೆಂಪು (ಪಿಂಕ್) ಬಣ್ಣದ ಬೆಡ್‌ಶೀಟ್ ಅನ್ನು ಬಳಸುವುದರಿಂದ ಮಲಗುವ ಕೋಣೆಯು ಪ್ರಣಯ ಲೀಲೆಗಳಿಗೆ ಪ್ರೇರಣೆ ನೀಡುತ್ತದೆ.
 
6.ನೈಋತ್ಯ ಭಾಗದಲ್ಲಿ ನೀರಿನ ಹೂಜಿಯನ್ನಡುವುದರಿಂದ ಸಂಬಂಧಗಳು ಪಕ್ವವಾಗುತ್ತವೆ.
 
7.ಮನೆಯ ನೈಋತ್ಯ ದಿಕ್ಕಿನಲ್ಲಿ ಗೊಂಚಲು ದೀಪವನ್ನು ತೂಗು ಹಾಕುವುದರಿಂದ ಚಿ(ಚೈತನ್ಯ)ವು  ಬಲವಾಗಿ, ಪ್ರಣಯವನ್ನು ಪ್ರಬಲವಾಗಿರಿಸುತ್ತದೆ.
 
8.ವಿವಿಧ ರೀತಿಯಲ್ಲಿರುವ ಮೊಂಬತ್ತಿಗಳನ್ನು ಉರಿಸುವುದು ಪ್ರಣಯಾಂತರಿಕ್ಷದ ಸೃಷ್ಟಿಗೆ ಪೂರಕವಾಗುತ್ತದೆ.
 
9.ನೈಸರ್ಗಿಕ ಸ್ಪಟಿಕಗಳು ಭೂಮಿತಾಯಿಯನ್ನು ಪ್ರತಿನಿಧೀಕರಿಸುತ್ತವೆ ಮತ್ತು ಗುಲಾಬಿ ಬಣ್ಣದ ಸ್ಫಟಿಕಶಿಲೆ ಮತ್ತು ಹಳದಿ ಶಿಲೆಗಳು ಪ್ರಣಯ ಭಾಗ್ಯವನ್ನು ತರುತ್ತದೆ.
 
10.ಇಂತಹ ನೈಸರ್ಗಿಕ ಸ್ಪಟಿಕಗಳನ್ನು ನೈಋತ್ಯ ಭಾಗದಲ್ಲಿರಿಸುವುದರಿಂದ ಪ್ರೇಮಕ್ಕೆ ಚೈತನ್ಯ ಲಬ್ಧವಾಗುವುದು. 
 

Share this Story:

Follow Webdunia kannada